ದಕ್ಷಿಣ ಕನ್ನಡ

ಅಸಹ್ಯ ವರ್ತನೆ: ಬಿಜೆಯಿಂದ ಉಚ್ಚಾಟನೆ.

ಮಂಗಳೂರು:- ಜಿಲ್ಲೆಯ ಇಡ್ಕಿದು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ಎಂಬಾತನ ಮನೆಗೆ ಹೋಗುವ ರಸ್ತೆಗೆ ಸಂಬಂಧಿಸಿದಂತೆ ಮಹಿಳೆಗೂ ಈತನಿಗೆ ವಿವಾದ ಇತ್ತು.
ಈ ವಿಕೃತ ಮನುಷ್ಯ ರಸ್ತೆಯ ಗೇಟಿಗೆ ಬೀಗ ಹಾಕಿದ್ದನ್ನು ವಿಚಾರಿಸಲು ಬಂದ ಮಹಿಳೆ ಮುಂದೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿ ವಿಕೃತಿ ಮೆರೆದ (ಈ ಬಗ್ಗೆ ವೀಡಿಯೋ ವೈರಲ್ ಆಗಿದೆ) ಎನ್ನಲಾಗಿದೆ. ಮಹಿಳೆ ಪದ್ಮನಾಭ ಸಪಲ್ಯನ ವಿರುದ್ಧ ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು.

ಘಟನೆಯ ಮಾಹಿತಿ ಪಡೆದ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ತಕ್ಷಣದಿಂದ ಜಾರಿಗೆ ಬರುವಂತೆ ಪದ್ಮನಾಭ ಸಪಲ್ಯನನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿ ಆದೇಶ ಹೊರಡಿಸಿದ್ದಲ್ಲದೇ ಕೂಡಲೇ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ.