ಗದಗ:- ಇಂದು (ಮೇ 22) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇಡಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಇಡಿ ದಾಳಿ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ. ಪರಮೇಶ್ವರ್ ವಿರುದ್ಧ ಕಾಂಗ್ರೆಸ್ನ ಒಂದು ಗುಂಪು ದೂರು ನೀಡಿದೆ. ಹೀಗಾಗಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. 2013ರಲ್ಲಿ ಡಾ.ಜಿ.ಪರಮೇಶ್ವರ್ರನ್ನು ಸೋಲಿಸಿದ್ದು ಯಾರು? ಡಾ.ಜಿ.ಪರಮೇಶ್ವರ್ರನ್ನು ಇದೇ ಸಿದ್ದರಾಮಯ್ಯ ಸೋಲಿಸಿದ್ದರು. ಚಿನ್ನ ಕಳ್ಳತನ ಸೇರಿ ಎಲ್ಲಾ ಪ್ರಕರಣಗಳ ಬಗ್ಗೆ ತನಿಖೆ ಮಾಡುವಂತೆ ಇಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದು ಯಾರು? ನಮಗೆ ಪರಮೇಶ್ವರ್ ಮೇಲೆ ಗೌರವ ಇದೆ, ಸಭ್ಯ ರಾಜಕಾರಣಿ. ಏನಾಗಿದೆ ಅನ್ನೋದನ್ನು ಇಡಿ ಅಧಿಕಾರಿಗಳು ಹುಡುಕುತ್ತಿದ್ದಾರೆ ಎಂದರು.
ಕಾಂಗ್ರೆಸ್ನ ಒಂದು ಗುಂಪು ಮಾಹಿತಿ ಕಳಿಸಿದ್ದಾರೆಂಬ ಆರೋಪವಿದೆ. ಯಾರು ಕಳುಹಿಸಿದ್ದಾರೆಂದು ಸಿಎಂ ಸಿದ್ದರಾಮಯ್ಯಗೂ ಗೊತ್ತಿದೆ. ಮಾಹಿತಿ ಸಿಕ್ಕಾಗ ಇಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ. ಯಾರೇ ತಪ್ಪು ಮಾಡಿದರೂ ಕಾನೂನು ಕ್ರಮ ಆಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದರು.
ಪರಮೇಶ್ವರ್ ಗೃಹಮಂತ್ರಿ ಇದ್ದಾರೆ, ಕಾಂಗ್ರೆಸ್ ನಾಯಕರು ಆಂತಾಗ್ಲಿ ಆಗಿಲ್ಲ. ಯಾವುದೇ ಕಾರಣಕ್ಕೂ ಪರಮೇಶ್ವರ ಅವರಿಗೆ ತೊಂದರೆ ಕೊಡಬೇಕಂತಲ್ಲ. ಯಾವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ. ಕಾನೂನು ಪ್ರಕಾರ ತಪ್ಪು ಮಾಡಿದ್ದರೆ ನಾನಾಗಲೀ, ಪರಮೇಶ್ವರ್, ಸಿದ್ದರಾಮಯ್ಯ ಅಂಥವಾ ನಮ್ಮ ಪಕ್ಷದ ಯಾರೇ ತಪ್ಪು ಮಾಡಿದ್ರೆ ಕಾನೂನು ರೀತಿ ಕ್ರಮ ಆಗುತ್ತೆ. ಕಾಂಗ್ರೆಸ್ ನ ಒಂದು ಗುಂಪಿನವರೇ ಎಲ್ಲ ಮಾಹಿತಿ ಕಳಿಸಿದ್ದು ಅಂತ ಆರೋಪ ಇದೆ. ಅದು ಯಾರು ಎಂದು ಸಿಎಂ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಇಂಟಲಿಜೆನ್ಸ್ ಸಿಎಂ ಕಡೆ ಇದೆ ಅವರನ್ನೇ ಕೇಳಿ ಹೇಳುತ್ತಾರೆ. ಮತ್ತ ಈಗ ಡ್ರಾಮಾ ಮಾಡುತ್ತೀರಾ ಸಿದ್ದರಾಮಯ್ಯನವವರೇ ಎಂದು ಕಿಡಿಕಾರಿದರು.
ಅಕ್ರಮ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಖಾತೆಗೆ 40 ಲಕ್ಷ ರೂಪಾಯಿ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಆರೋಪ ಪ್ರತ್ಯಾರೋಪ ಜೋರಾಗಿದೆ.