ಬೆಂಗಳೂರು

ಎಎಸ್‌ಪಿ ಭರಮನಿಯವರಿಗೆ ಕರೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆಯೇ ಹೊಡೆಯಲು ಕೈಎತ್ತಿದ್ದ ಹಿರಿಯ ಪೊಲೀಸ್‌ ಅಧಿಕಾರಿ ನಾರಾಯಣ ಭರಮನಿ ಅಲ್ಲಿ ನಡೆದ ಘಟನೆಯಿಂದ ಮನನೊಂದು ಸ್ವಯಂ ನಿವೃತ್ತಿಗಾಗಿ ಪತ್ರ ಬರೆದಿದ್ದಾರೆ. ಈ ಬೆನ್ನಲ್ಲೇ ನಾರಾಯಣ ಭರಮನಿ ಅವರಿಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಮಾಡಿ ಸಮಾಧಾನದ ಮಾತುಗಳನ್ನಾಡಿದ್ದಾರೆ.

ನಾರಾಯಣ ಭರಮನಿ ಅವರಿಗೆ ಕರೆ ಮಾಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ”ನಿನಗೆ ಅಪಮಾನ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಬೇಕು ಅಂತ ಮಾಡಿದ ಕೆಲಸವಲ್ಲ. ಸರ್ಕಾರ ನಮ್ಮದೇ ಇದ್ದು ನಮ್ಮ ಪ್ರತಿಭಟನೆಯಲ್ಲಿ ಬಿಜೆಪಿ ಬಂದು ಅಡ್ಡಿಪಡಿಸದ್ದಕ್ಕೆ ನನಗೆ ಬೇಸರವಾಯ್ತು. ಕೋಪದಲ್ಲಿ ಈ ಘಟನೆ ನಡೆದು ಹೋಗಿದೆ. ಹೀಗಾಗಿ ರಾಜೀನಾಮೆ ನಿರ್ಧಾರ ವಾಪಸ್​ ಪಡೆದು ಕೆಲಸ ಮುಂದುವರೆಸುವಂತೆ” ತಿಳಿಸಿದ್ದಾರೆ ಎನ್ನಲಾಗಿದೆ.

ಸಿಎಂ ಕರೆ ಮತ್ತು ರಾಜೀನಾಮೆಗೆ ಬಗ್ಗೆ ಮಾತನಾಡಿದ ಎಎಸ್‌ಪಿ ನಾರಾಯಣ ಭರಮನಿ, ಈಗ ನಾನು ದೈನಂದಿನ ಕೆಲಸಕ್ಕೆ ಹಾಜರಾಗುತ್ತಿದ್ದೇನೆ. ರಾಜೀನಾಮೆ ಅಂಗೀಕಾರದ ಕುರಿತು ಸರ್ಕಾರ ನಿರ್ಧರಿಸುತ್ತದೆ. ನನ್ನ ಭಾವನೆಗಳನ್ನು ಇಲಾಖೆ ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ್ ಅವರು ನನ್ನ ಜೊತೆಗೆ ಮಾತನಾಡಿದ್ದಾರೆ. ಸದ್ಯ ನಾನೀಗ ಕೆಲಸಕ್ಕೆ ಹಾಜರಾಗುತ್ತೇನೆ ಎಂದಿದ್ದಾರೆ.