ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರದ ಒಕ್ಕಲಿಗ ಸಮುದಾಯದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ 25ನೇ ವರ್ಷ ಪೂರೈಸಿದ ಸಂಭ್ರಮವನ್ನು ಹಲವು ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಪಟ್ಟಣದ SAHARA CONVENTION HALLನಲ್ಲಿ ಶನಿವಾರ ಆಯೋಜಿಸಲಾಗಿತ್ತು.
ಸಂಸ್ಥಾಪಕ ಅಧ್ಯಕ್ಷೆಯಾದ ಶ್ರೀಮತಿ ಶ್ಯಾಮಲಾ ಸತೀಶ್, ಲೇಖಾ ವಸಂತ್, ಭಾರತಿ ಚಂದ್ರು ಸಿಲ್ವರ್ ಜ್ಯುಬಿಲಿ ವರ್ಷಾಚರಣೆಯ ಅಧ್ಯಕ್ಷೆ ಕಾರ್ಯದರ್ಶಿ, ಖಜಾಂಚಿಯಾಗಿರುವುದು ವಿಶೇಷ. 25 ವರ್ಷಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಲ್ಲಾ ಪೂರ್ವ ಅಧ್ಯಕ್ಷರುಗಳು ಜೊತೆಗೂಡಿ ಸರ್ವ ಮಹಿಳಾ ಸದಸ್ಯರುಗಳು ಒಗ್ಗೂಡಿ ಈ ಬೆಳ್ಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ಯಶಸ್ವಿಯಾಗಿ ನಡೆಸಿದರು.
ಸಂಘದ ನವೀಕೃತ ಸ್ವಂತ ಕಟ್ಟಡವನ್ನು ಕಟ್ಟಡವನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರ ಉದ್ಘಾಟಿಸಿದರು.
ಸಹಕಾರ ನೀಡಿ, ವಿವಿಧ ಹಂತಗಳಲ್ಲಿ ಸಂಘದ ಜೊತೆ ಸಾಗಿದ ಶಾಸಕ ರಾಜೇಗೌಡ, ಡಿ.ಸಿ.ದಿವಾಕರ್, ಶಾಂತ್ ಕುಮಾರ್, ಡಿ.ರಮೇಶ್, ಜಗದೀಶ್, ಮೋಹನ್, ಪತ್ರಕರ್ತರುಗಳಾ ಎಡಗೆರೆ ಮಂಜುನಾಥ್ ನಾಗರಾಜ್, ಅಭಿನವ ಗಿರಿರಾಜ್, ಕೆನರಾ ಸೌಂಡ್ಸ್ ನ ಮಾಲೀಕರಾದ ಹಾಜಿ ಅಹ್ಮದ್ ಸೇರಿದಂತೆ ಪಿ.ಸಿ.ಎಲ್.ಡಿ.ಬ್ಯಾಂಕ್ ನ ಉದ್ಯೋಗಿಯಾಗಿ ಸಂಘದ ಚಟುವಟಿಕೆಗೆ ಸಂಪೂರ್ಣ ಸಹಕಾರ ನೀಡಿದ್ದ ದಿವಂಗತ ನಾರಾಯಣ ಗೌಡರಿಗೆ ಮರಣೋತ್ತರ ಗೌರವ ಸಲ್ಲಿಸಿ ಅವರ ಪರವಾಗಿ ಸೊಸೆಯಾದ ಮಧುರಾ ಮಂಜುನಾಥ್ ಸೇರಿದಂತೆ 25ಕ್ಕೂ ಅಧಿಕ ಮಂದಿಯನ್ನು ಗುರುತಿಸಿ ಗೌರವಿಸಲಾಯಿತು.