ದಕ್ಷಿಣ ಕನ್ನಡ

ಕರಾವಳಿ: ಸರ್ಕಾರ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಫಲ

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆ ಪ್ರಕರಣಗಳನ್ನು ಅಧ್ಯಯನ ಮಾಡಿ, ಕರಾವಳಿಯಲ್ಲಿ ಶಾಶ್ವತವಾಗಿ ಶಾಂತಿ ಸ್ಥಾಪನೆ ಮಾಡುವಲ್ಲಿ ವಿಫಲವಾಗಿದೆ. ಇತ್ತೀಚೆಗಷ್ಟೇ ಸುಹಾಸ್ ಮರ್ಡರ್ ಕೇಸ್ ವೇಳೆ, ಜಿಲ್ಲೆಗೆ ಆಗಮಿಸಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅ್ಯಂಟಿ ಕಮ್ಯುನಲ್ ಫೋರ್ಸ್ ಮಾಡುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದರು. ಆದರೆ, ಬೆಂಗಳೂರಿಗೆ ಮುಟ್ಟುತ್ತಿದ್ದಂತೆಯೇ ಅವರು ದಕ್ಷಿಣ ಕನ್ನಡ ಜಿಲ್ಲೆಯನ್ನು ಮರೆತು ಬಿಟ್ಟಂತಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.

 

ಸದ್ಯ ಗೃಹ ಸಚಿವರನ್ನು ಬದಲಾವಣೆ ಮಾಡಬೇಕು ಎನ್ನುವ ಒತ್ತಾಯ ಮಂಗಳೂರಿನಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಕರಾವಳಿಯಲ್ಲಿ ಕೋಮು ಕೃತ್ಯಗಳು ನಿಲ್ಲಬೇಕಾದರೆ ಸಮರ್ಥ ಗೃಹ ಸಚಿವರ ಅಗತ್ಯವಿದೆ. ಕಾಂಗ್ರೆಸ್ ನಲ್ಲಿ ನೇರ ಹಾಗೂ ನಿಷ್ಠೂರ ಮಾತುಗಳ ಮೂಲಕ ಜನಪ್ರಿಯವಾಗಿರುವ ಬಿ.ಕೆ.ಹರಿಪ್ರಸಾದ್ ಅವರು ಗೃಹ ಸಚಿವ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎನ್ನುವ ಮಾತುಗಳು ಮಂಗಳೂರಿನಾದ್ಯಂತ ಕೇಳಿ ಬಂದಿದೆ. ರಾಜ್ಯ ಸರ್ಕಾರವು ಮಂಗಳೂರಿನಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣಗಳ ಬಗ್ಗೆ ವಿಭಿನ್ನವಾದ ರೀತಿಯಲ್ಲಿ ಕ್ರಮಕೈಗೊಳ್ಳಬೇಕು. ಮಂಗಳೂರಿನ ಕ್ರೈಂ ಜಗತ್ತಿನ ಆಳ ಅಗಲ ತಿಳಿದಿರುವ ಹಿರಿಯ ಪತ್ರಕರ್ತರ ಅಭಿಪ್ರಾಯ ಪಡೆದು ವಾಸ್ತವಾಂಶಗಳನ್ನು ಅರಿತು ಅಪರಾಧ ತಡೆಗೆ ಸೂಕ್ತ ಕ್ರಮವನ್ನು ಜರುಗಿಸಬೇಕು ಎನ್ನುವ ಒತ್ತಾಯಗಳು ಕೂಡ ಕೇಳಿ ಬಂದಿದೆ.

ಈಗಾಗಲೇ ಅಲ್ಪಸಂಖ್ಯಾತ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಕಾರ್ಯಕರ್ತರು ರಾಜೀನಾಮೆಗೆ ಆಗ್ರಹ ಮಾಡುತ್ತಿದ್ದಾರೆ. ಉಳ್ಳಾಲ ಯುವ ಕಾಂಗ್ರೆಸ್ ಪದಾಧಿಕಾರಿಯೊಬ್ಬ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆಇಲ್ಲ ಎಂದು ಸಾಬೀತುಪಡಿಸಿದಂತೆ ತೊರುತ್ತದೆ.

 

ದಕ್ಷಿಣ ಕನ್ನಡ ಜಿಲ್ಲೆಯ ಹತ್ಯಾ ಸರಣಿಯ ವಿವರ:

2003 ಮೇ 13: ಎಂ.ಬಿ ಜಬ್ಬಾರ್

2003 ಡಿಸೆಂಬರ್ 26 – ನರಸಿಂಹ ಶೆಟ್ಟಿಗಾರ್

2003 ಡಿಸೆಂಬರ್ 28 – ಫಾರೂಕ್

2005 ಜೂನ್ 7 – ಪೊಳಲಿ ಅನಂತು

2006 ಡಿಸೆಂಬರ್ 1- ಸುಖಾನಂದ ಶೆಟ್ಟಿ

2009 ಫೆಬ್ರವರಿ 18 – ಕ್ಯಾಂಡಲ್ ಸಂತು

2014 ಮಾರ್ಚ್ 21 – ರಾಜೇಶ್ ಪೂಜಾರಿ

2015 ಸೆಪ್ಟಂಬರ್ 7 – ನಾಸೀರ್

2015 ನವೆಂಬರ್ 12 – ಹರೀಶ್ ಪೂಜಾರಿ

2015 ಅಕ್ಟೋಬರ್ 9 – ಪ್ರಶಾಂತ್ ಪೂಜಾರಿ

2016 ಏಪ್ರಿಲ್ 12 – ರಾಜೇಶ್ ಕೋಟ್ಯಾನ್

2016 ಏಪ್ರಿಲ್ 26 – ಸೈಫಾನ್ ಯಾನೆ ಸಫ್ವಾನ್

2017 ಜೂನ್ 21 – ಅಶ್ರಫ್ ಕಲಾಯಿ

2017 ಜುಲೈ 4 – ಶರತ್ ಮಡಿವಾಳ

2018 ಜನವರಿ 3- ದೀಪಕ್ ರಾವ್

2018 ಜನವರಿ 3- ಅಬ್ದುಲ್ ಬಶೀರ್

2022 ಜುಲೈ 19 – ಮಸೂದ್ ಬೆಳ್ಳಾರೆ

2022 ಜುಲೈ 26 – ಪ್ರವೀಣ್ ನೆಟ್ಟಾರು

2022 ಜುಲೈ 28 – ಫಾಝಿಲ್

2022 ಡಿಸೆಂಬರ್ 24 – ಅಬ್ದುಲ್ ಜಲೀಲ್

2025 ಏಪ್ರಿಲ್ 27 – ಅಶ್ರಫ್

2025 ಮೇ 1 – ಸುಹಾಸ್ ಶೆಟ್ಟಿ

2025 ಮೇ 28 – ಅಬ್ದುಲ್ ರಹಮಾನ್