Uncategorized

ಕುಬೇರನಾಗಿ ಧನುಷ್: ಟೀಸರ್ ರಿಲೀಸ್

ಚೆನ್ನೈ:- ‘ಟ್ರಾನ್ಸ್ ಆಫ್ ಕುಬೇರ’ ಸಿನಿಮಾದ ಟೀಸರ್ ರಿಲೀಸ್‌ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿನಿ ಪ್ರಿಯರು ಕಮೆಂಟ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

‘ಟ್ರಾನ್ಸ್ ಆಫ್ ಕುಬೇರ’ ಸಿನಿಮಾದ ಟೀಸರ್‌ನಲ್ಲಿ ನಾಲ್ಕು ಪ್ರಮುಖ ಪಾತ್ರಗಳನ್ನು ಪರಿಚಯಿಸಲಾಗಿದೆ. ಪ್ರಮುಖ ಪಾತ್ರದಲ್ಲಿ ಧನುಷ್, ನಾಗಾರ್ಜುನ, ರಶ್ಮಿಕಾ ಮಂದಣ್ಣ ಹಾಗೂ ಜಿಮ್ ಸರ್ಬ್. ಈ ನಾಲ್ಕು ಪಾತ್ರಗಳ ನಡುವಿನ ಕತೆಯನ್ನೇ ತೆರೆಮೇಲೆ ತರಲಾಗಿದೆ.

ಈ ಸಿನಿಮಾದ ಟೀಸರ್‌ನಲ್ಲಿ ಒಂದೇ ಒಂದು ಡೈಲಾಗ್‌ಗಳನ್ನೂ ಇಟ್ಟಿಲ್ಲ. ಆದರೆ, ನಂದೇ.. ನಂದೇ ಈ ಲೋಕವೆಲ್ಲ..” ಎನ್ನುವ ಹಾಡು ಬ್ಯಾಕ್‌ಗ್ರೌಂಡ್‌ನಲ್ಲಿ ಪ್ಲೇ ಆಗುತ್ತಿದೆ. ಇದು ಪ್ರೇಕ್ಷಕರಲ್ಲಿ ಒಂದು ಕುತೂಹಲವನ್ನು ಹುಟ್ಟಿಸಿದೆ. ಸಿನಿಮಾ ಪಾತ್ರಗಳನ್ನು ಪರಿಚಯಿಸಿದ ಈ ಹಾಡು ಗಮನ ಸೆಳೆಯುತ್ತಿದೆ.

ಧನುಷ್ ಮತ್ತೊಂದು ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಬೇರೆ ಬೇರೆ ಶೇರ್‌ಗಳಲ್ಲಿ ಧನುಷ್ ಗಮನ ಸೆಳೆದಿದ್ದಾರೆ. ನಾಗಾರ್ಜುನ ಈ ಕಥೆಯ ಪ್ರಮುಖ ಪಾತ್ರ ಎಂದೆನಿಸುತ್ತಿದೆ. ಇನ್ನು ರಶ್ಮಿಕಾ ಮಂದಣ್ಣ ಟಿಪಿಕಲ್ ಮಧ್ಯಮ ವರ್ಗದ ಹುಡುಗಿಯ ಪಾತ್ರ ಎಂದು ಅನಿಸುತ್ತಿದೆ.

ಕುಬೇರ ಸಿನಿಮಾ ಟೀಸರ್ ರಿಲೀಸ್ ಆಗುತ್ತಿದ್ದಂತೆ ನೆಟ್ಟಿಗರು ಟಿಟ್ವರ್‌ಗೆ ಲಗ್ಗೆ ಇಟ್ಟು ಕಮೆಂಟ್‌ಗಳನ್ನು ಹಾಕುವುದಕ್ಕೆ ಶುರು ಮಾಡಿದ್ದಾರೆ. ಅದರಲ್ಲಿ ಇಬ್ಬರು “ಕುಬೇರ ಧನುಷ್‌ಗೆ ಒಂಥರಾ ಹೋಮ್ ಗ್ರೌಂಡ್ ಇದ್ದಂತೆ. ಇದರಲ್ಲಿ ಧನುಷ್ ಅವರ ಆಳವಾದ ಅಭಿನಯದ ತುಣುಕುಗಳನ್ನು ನೋಡಬಹುದು. ಈ ಸಿನಿಮಾ ವರ್ಡ್ ಆಫ್ ಮೌತ್ ಪ್ರಕಾರ, ಬ್ಲಾಕ್‌ಬಸ್ಟರ್ ಆಗುವ ಎಲ್ಲಾ ಲಕ್ಷಣಗಳು ಇವೆ” ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.