ಚಿಕ್ಕಮಗಳೂರು

ಕೊಪ್ಪ ಲ್ಯಾಂಪ್ಸ್ ಸಹಕಾರ ಸಂಘದ ನಿವೃತ್ತಗೊಂಡಿರುವ ನಾಗಭೂಷಣ್ ರವರಿಗೆ ಬೀಳ್ಕೊಡಿಗೆ

ಚಿಕ್ಕಮಗಳೂರು:- ಜಿಲ್ಲೆಯ ಕೊಪ್ಪದ ಬಾಲಗಡಿಯ ಲ್ಯಾಂಪ್ಸ್ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಗೊಂಡಿರುವ ಸಿ.ಎಂ ನಾಗಭೂಷಣ್ ರವರಿಗೆ ಬೀಳ್ಕೊಡಿಗೆ ಸಮಾರಂಭ ಶನಿವಾರದಂದು ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ನಿವೃತ್ತಿಗೊಂಡು

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಿಮ್ಮೆಲ್ಲರ ಸಹಕಾರದಿಂದ ಈ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವೆ, 1985ರಲ್ಲಿ ಈ ಸಂಸ್ಥೆಗೆ ಪಾದರ್ಪಣೆ ಮಾಡಿದೆ. ಸುಮಾರು ಎಂಟು ವರ್ಷಗಳ ಕಾಲ ಮೇಗೂರ್ ಗುಡ್ಡೆತೋಟದ ಲ್ಯಾಂಪ್ಸ್ ಶಾಖೆಗಳಲ್ಲಿ ಮಾರಾಟ ಗುಮಾಸ್ತನಾಗಿ ಸೇವೆ ಸಲ್ಲಿಸಿದ್ದೇನೆ. ಕೇಂದ್ರ ಕಚೇರಿಯಲ್ಲಿ ಲೆಕ್ಕಾಧಿಕಾರಿಯಾಗಿ 2020ರ ವರೆಗೆ ಸೇವೆ ಸಲ್ಲಿಸಿದ್ದು, ನಂತರ ಹಿಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ್ ರೈರವರ ನಿವೃತ್ತಿ ನಂತರ ಪದೋನ್ನತಿ ಹೊಂದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಇಲ್ಲಿಯವರೆಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಸೇವೆಗೆ ನನ್ನ ಕುಟುಂಬದ ಸದಸ್ಯರ ಸಹಕಾರ, ಆಡಳಿತ ಮಂಡಳಿಯ ಸಹಕಾರ, ಸಿಬ್ಬಂದಿ ವರ್ಗದವರ ಸಹಕಾರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಹಕಾರ ಮುಖ್ಯವಾಗಿ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಸಹಕಾರದಿಂದ ಇಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಪ್ರಾಮಾಣಿಕವಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದೇನೆ ಎಂದರು. ನನಗೆ ಸಹಕಾರ ಕೊಟ್ಟ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿ ಈ ಸಂಸ್ಥೆಯಲ್ಲಿ ಕೆಲಸ ಮಾಡಿರುವ ನನಗೆ ಗೌರವ ಹೆಚ್ಚಾಗಿದೆ ಎಂದರು.

ಸಂಸ್ಥೆಯ ವತಿಯಿಂದ ಅಧ್ಯಕ್ಷರಾದ ಡಿಎಫ್ಒ ನಂದೀಶ್ ರವರು ನಾಗಭೂಷಣ್ ಹಾಗೂ ಅವರ ಶ್ರೀಮತಿಯವರಿಗೆ ಮೈಸೂರು ಪೇಟ ತೊಡಿಸಿ, ಶಾಲುಹೊದಿಸಿ, ಹಾರ ಹಾಕಿ, ಅಭಿನಂದನ ಪತ್ರದ ಜೊತೆಗೆ ಅವರ ಮನೆ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ ವಿಗ್ರಹ ಮತ್ತು ಫಲ ತಾಂಬುಲ ನೀಡಿ ಗೌರವಿಸಲಾಯಿತು.

ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಹಾಗೂ ಕೊಪ್ಪ ಅರಣ್ಯ ಇಲಾಖೆಯ ಕೊಪ್ಪ ಉಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ಸೇರಿದಂತೆ ಎಸಿಎಫ್ ಬಾಬು ರಾಜೇಂದ್ರ ಪ್ರಸಾದ್

ಹಿರಿಯ ನಿರ್ದೇಶಕ ಮರಿಯಪ್ಪ, ಸಂಸ್ಥೆಯ ಉಪಾಧ್ಯಕ್ಷ ಯೋಗೀಶ್, ಸಿಬ್ಬಂದಿ ವರ್ಗದವರು, ಅರಣ್ಯ ಇಲಾಖೆ, ಕಾರ್ಮಿಕ ಇಲಾಖೆ, ಲ್ಯಾಂಪ್ಸ್ ಸಂಘದ ಸದಸ್ಯರಾದ ಕೆಂಪಣ್ಣ, ಚಂದ್ರಶೇಖರ್, ಜಯರಾಮ್, ಸುರೇಂದ್ರ, ಪ್ರಶಾಂತ್, ನಾರಾಯಣ ನಾಯ್ಕ್, ಅನುಪಮಾ, ಈರಪ್ಪ ಮಹಾಲಕ್ಷ್ಮಿ, ವಿಶಾಲಾಕ್ಷಿ ಮಹೇಶ್ ನಾಯ್ಕ್, ಶೆಟ್ಟಿಕೊಪ್ಪ ಮಹೇಶ್, ಮಾಜಿ ಅಧ್ಯಕ್ಷ ಕೃಷ್ಣ ಗೌಡ್ಲು, ಚಂದ್ರಪ್ಪ ನಾಯ್ಕ್, ಶ್ರೀನಿವಾಸ್, ಕೆ ವಿ ಚಂದ್ರಶೇಖರ್, ಕಾರ್ಮಿಕ ಇಲಾಖೆಯ ಜೀವನ್ ಕುಮಾರ್, ಆಹಾರ ಇಲಾಖೆ ಶ್ರೀಕಾಂತ್, ಸಮಾಜ ಕಲ್ಯಾಣ ಇಲಾಖೆ ಪಾಟೀಲ್, ನಾಗಭೂಷಣ್ ರವರ ಕುಟುಂಬ ವರ್ಗ ಹಾಗೂ ಇತರರು ಶಾರದಾ ಕೆಂಪಣ್ಣ, ಕೆ.ವಿ ಚಂದ್ರಶೇಖರ್ ಉಪಸ್ಥಿತರಿದ್ದರು.