ಮುಂಬೈ:- ಸಿಂಗಾಪುರ, ಹಾಂಗ್ ಕಾಂಗ್, ಥೈಲ್ಯಾಂಡ್ ನಂತಹ ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ಕೊರೋನಾ ಈಗ ಭಾರತಕ್ಕೂ ಕಾಲಿಟ್ಟಿದೆ. ಮೊನ್ನೆಯಷ್ಟೇ ಕ್ರಿಕೆಟಿಗ ಟ್ರಾವಿಸ್ ಹೆಡ್ ಗೆ ಕೊರೋನಾ ಪಾಸಿಟಿವ್ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈಗಾಗಲೇ ಭಾರತದಲ್ಲಿ 257 ಸಕ್ರಿಯ ಕೇಸ್ ಗಳು ವರದಿಯಾಗಿದೆ.
ಕರ್ನಾಟಕದಲ್ಲಿ 8, ಕೇರಳದಲ್ಲಿ 69, ಮಹಾರಾಷ್ಟ್ರದಲ್ಲಿ 44, ತಮಿಳುನಾಡಿನಲ್ಲಿ 34, ಗುಜರಾತ್ 6, ದೆಹಲಿಯಲ್ಲಿ 3 ಕೇಸ್ ಗಳು ಪತ್ತೆಯಾಗಿದೆ. ಈಗ ಬಂದಿರುವ ಹೊಸ ತಳಿಯ ಹೆಸರು ಒಮಿಕ್ರಾನ್ ನ ಉಪ ತಳಿಯೆಂದು ಗುರುತಿಸಲಾಗಿದೆ. ಈಗ ವರದಿಯಾಗಿರುವ ಹೊಸ ತಳಿಯಲ್ಲಿ ಸಣ್ಣ ಮಟ್ಟಿನ ಲಕ್ಷಣ ಕಂಡುಬರುತ್ತಿದೆ. ಹಾಗಂತ ನಿರ್ಲ್ಯಕ್ಷ್ಯಬೇಡ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈಗಿನ ಶೈತ್ಯ ಹವಾಗುಣದಲ್ಲಿ ಈ ರೋಗ ಹೆಚ್ಚು ಹರಡುವ ಅಪಾಯವಿದೆ, ಹೀಗಾಗಿ ಎಚ್ಚರಿಕೆಯಿಂದಿರುವುದು ಉತ್ತಮ.