ಉಡುಪಿ

ಚೈತ್ರಾ ಕುಂದಾಪುರ ವಿವಾಹಕ್ಕೆ ತಯಾರಿ.!?

ಉಡುಪಿ:- ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಇತ್ತೀಚೆಗಷ್ಟೇ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮೆಹಂದಿ ಕಾರ್ಯಕ್ರಮದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಶುಭಾಶಗಳನ್ನು ತಿಳಿಸುವುದಕ್ಕೆ ಆರಂಭಿಸಿದ್ದಾರೆ. ಹಾಗಿದ್ದರೆ, ಚೈತ್ರಾ ಕುಂದಾಪುರ ಮದುವೆ ಯಾವಾಗ? ವರ ಯಾರು? ಎಂಬುದು ತಿಳಿಯಬೇಕಷ್ಟೆ.

ಚೈತ್ರಾ ಕುಂದಾಪುರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮೆಹಂದಿ ಸಂಭ್ರಮದ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೈಯಲ್ಲಿ ಮೆಹಂದಿ ಚಿತ್ತಾರವನ್ನು ಕಾಣಬಹುದು. ಮದುವೆ ಆಗುತ್ತಿರುವ ಖುಷಿಯಲ್ಲಿರುವ ಚೈತ್ರಾ ಮುಖದಲ್ಲಿ ಮದುಮಗಳ ಕಳೆ ಎದ್ದು ಕಾಣುತ್ತಿದೆ. ಹಾಗೇ ವಿಡಿಯೋಗೆ ”ಮದುವೆಯ ಮೆಹೆಂದಿ” ಟೈಟಲ್ ಕೊಟ್ಟು, ಮೆಹಂದಿಯ ಸಂಪ್ರದಾಯದ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ.
ಚೈತ್ರಾ ಕುಂದಾಪುರ ನಾಳೆ (ಮೇ 9) ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆಂದು ವರದಿಯಾಗಿದೆ. ಸುಮಾರು 12 ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆಂದು ಹೇಳಲಾಗಿದೆ. ಆದರೆ, ತಾವು ಮದುವೆ ಆಗುತ್ತಿರುವ ಹುಡುಗನ ಬಗ್ಗೆ ಇಲ್ಲೂ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಚೈತ್ರಾ ತಮ್ಮ ಮದುವೆಗೆ ಕೇವಲ ತಮ್ಮ ಕುಟುಂಬಸ್ಥರಿಗೆ, ಆಪ್ತರಿಗ ಹಾಗೂ ಬಿಗ್‌ ಬಾಸ್ ಕನ್ನಡ 11ರ ಸ್ಪರ್ಧಿಗಳು ಹಾಗೂ ಶೋನ ಸ್ನೇಹಿತರಿಗಷ್ಟೇ ಆಹ್ವಾನ ನೀಡಿದ್ದಾರೆಂದು ಹೇಳಲಾಗುತ್ತಿದೆ.