Uncategorized

ಚೊಚ್ಚಲ ಬಾರಿಗೆ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದ ಆರ್ಸಿಬಿ.!

ಅಹಮದಾಬಾದ್:- ಐಪಿಎಲ್‌ 2025ರ ಫೈನಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪಂಜಾಬ್ ಕಿಂಗ್ಸ್ (RCB vs PBKS) ತಂಡವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 6 ರನ್‌ಗಳಿಂದ ಸೋಲಿಸುವ ಮೂಲಕ ಚೊಚ್ಚಲ ಬಾರಿಗೆ ಐಪಿಎಲ್‌ ಟ್ರೋಫಿಗೆ ಮುತ್ತಿಕ್ಕಿದೆ.

ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಆರ್‌ಸಿಬಿ ನಿಗದಿತ 20 ಓರ್‌ಗೆ 9 ವಿಕೆಟ್‌ ನಷ್ಟಕ್ಕೆ 190 ರನ್‌ ಸಿಡಿಸಿತು. ಈ ಟಾರ್ಗೆಟ್‌ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌ ತಂಡವು 20 ಓವರ್‌ಗೆ 7 ವಿಕೆಟ್‌ಗೆ 184 ರನ್‌ ಗಳಿಸಿತು. ಆದರೆ ಆರಂಭದಿಂದಲೂ ಉತ್ತಮವಾಗಿ ಆಡುತ್ತಿದ್ದ ಪಂಜಾಬ್‌ ಸೋಲಲು ಆರ್‌ಸಿಬಿ ತಂಡದ ಅದೊಂದು ಕ್ಷಣವೇ ಕಾರಣವಾಯಿತು.

ಹೌದು, ಈ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್‌ ಪರ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಉತ್ತಮ ಓಪನಿಂಗ್ ನೀಡಿದರು. ನಾಯಕ ಶ್ರೇಯಸ್ ಅಯ್ಯರ್ 2 ವಿಕೆಟ್ ಬಿದ್ದ ಬಳಿಕ ಕ್ರೀಸ್‌ಗೆ ಆಗಮಿಸಿದರು. ಕಳೆದ ಮುಂಬೈ ಪಂದ್ಯದಲ್ಲಿ ಅಬ್ಬರಿಸಿದ್ದ ಅಯ್ಯರ್‌ ಆರ್‌ಸಿಬಿಗೆ ದೊಡ್ಡ ಕಂಟಕವಾಗಲಿದ್ದರು. ಆದರೆ, ಅಯ್ಯರ್‌ ಅವರನ್ನು ಜಸ್ಟ್‌ 1 ರನ್‌ಗೆ ಔಟ್‌ ಮಾಡುವ ಮೂಲಕ ಪಂದ್ಯವನ್ನು ಆರ್‌ಸಿಬಿ ಕಡೆಗೆ ತಿರುಗಿಸಿದ್ದು, ರೊಮಾರಿಯೋ ಶೆಫರ್ಡ್. ಹೌದು, ಇದಕ್ಕೂ ಮುನ್ನ ರೊಮಾರಿಯೋ ಶೆಫರ್ಡ್ ಬೌಂಡರಿ ಲೈನ್‌ ಬಳಿ ಪ್ರಬ್‌ಸಿಮ್ರಾನ್‌ ಸಿಂಗ್ ಅವರ ಕ್ಯಾಚ್ ಬಿಟ್ಟಿದ್ದರು. ಆದರೆ ಪಂಜಾಬ್‌ ತಂಡದ ಬೆನ್ನೆಲುಬಾಗಿದ್ದ ಅಯ್ಯರ್‌ ಅವರ ವಿಕೆಟ್‌ ಕಬಳಿಸುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸಿದರು. ಶೆಫರ್ಡ್‌ಎಸೆತದ 9.4ನೇ ಓವರ್‌ನಲ್ಲಿ ಅಯ್ಯರ್‌ ಜಿತೇಶ್‌ ಶರ್ಮಾಗೆ ಕ್ಯಾಚಿಟ್ಟು ಔಟ್‌ ಆದರು. ಇಲ್ಲಿಂದ ಪಂಜಾಬ್‌ ಪತನ ಆರಂಭವಾಯಿತು. ಏನಾದರೂ ಅಯ್ಯರ್‌ ಕ್ರೀಸ್‌ಗೆ ಕಚ್ಚಿಕೊಂಡಿದ್ದರೆ ಅದು ಆರ್‌ಸಿಬಿ ಪಾಲಿಗೆ ದೊಡ್ಡ ಕಂಟಕವಾಗುತ್ತಿತ್ತು.

ಮ್ಯಾಚ್‌ ಟರ್ನಿಂಗ್‌ ಪಾಂಯಿಂಟ್‌ ಕ್ಯಾಚ್‌:

ಇದಕ್ಕೂ ಮುನ್ನ ಆರಂಭಿಕ ಆಟಗಾರ ಪ್ರಿಯಾಂಶ ಆರ್ಯ ಆರ್‌ಸಿಬಿ ವಿರುದ್ಧ 19 ಎಸೆತಲ್ಲಿ 24 ರನ್‌ ಸಿಡಿಸಿ ಅಪಾಯಕಾರಿಯಾಗುವ ಎಲ್ಲಾ ಸೂಚನೆ ನೀಡಿದ್ದರು. ಆದರೆ ಜೋಶ್‌ ಹ್ಯಾಜಲ್ವುಡ್‌ ಎಸೆತದ 4.6ನೇ ಓವರ್‌ಲ್ಲಿ ಕ್ಯಾಚಿಟ್ಟು ಔಟ್‌ ಆದರು. ಆದರೆ ಆ ಕ್ಯಾಚ್‌ನ್ನು ಫಿಲ್‌ ಸಾಲ್ಟ್‌ ಅದ್ಭುತವಾಗಿ ಹಿಡಿಯುವ ಮೂಲಕ ಎಲ್ಲರ ನಿಬ್ಬೆರಗಾಗುವಂತೆ ಮಾಡಿದರು. ಇದು ಒಂದರ್ಥದಲ್ಲಿ ಮ್ಯಾಚ್‌ ಟರ್ನಿಂಗ್‌ ಪಾಯಿಂಟ್‌ ಎನ್ನಬಹುದು.

ಮಗುವಿನಂತೆ ಕಣ್ಣೀರಿಟ್ಟ ಕೊಹ್ಲಿ:

ವಿರಾಟ್ ಕೊಹ್ಲಿಆರ್‌ಸಿಬಿ ಗೆಲ್ಲುತ್ತಿದ್ದಂತೆ ಮೈದಾನದಲ್ಲಿಯೇ ಚಿಕ್ಕ ಮಗುವಿನಂತೆ ಕಣ್ಣೀರಿಟ್ಟಿದ್ದಾರೆ. ಕೊಹ್ಲಿಯ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ವೈರಲ್ ಆಗಿದೆ. ಹೌದು, ಕೊನೆಯ ಓವರ್‌ನಲ್ಲಿ ಗೆಲುವು ಆರ್‌ಸಿಬಿ ಪರ ಬರುತ್ತಿದ್ದಂತೆ ಬೌಂಡರಿ ಲೈನ್‌ ಬಳಿಯಿದ್ದಂತಹ ವಿರಾಟ್‌ ಕೊಹ್ಲಿ ಕಣ್ಣಲ್ಲಿ ನೀರು ತುಂಬಿಬಂದಿತ್ತು. ಮೈದಾನದಲ್ಲಿಯೇ ತಮ್ಮ ಭಾವನೆಯನ್ನು ತಡೆದುಕೊಳ್ಳಲಾಗದೇ ಕಣ್ಣಿರಿಟ್ಟರು. ಇದನ್ನು ನೋಡಿದ ಅಭಿಮಾನಿಗಳೂ ಸಹ ಭಾವುಕರಾದರು.