Uncategorized

ಜಿನೀವಾ ನಗರದಲ್ಲಿ ಇರಾನ್ & ಇಸ್ರೇಲ್ ಸಂಧಾನ.!!?

ಜಿನೀವಾ:- ಇಸ್ರೇಲ್ ಮತ್ತು ಇರಾನ್ ನಡುವೆ ಆಗಾಗ ದೊಡ್ಡ ಮಟ್ಟಿಗೆ ಜಗಳ ಆಗುತ್ತಲೇ ಇರುತ್ತದೆ, ಕೆಲವು ದಿನಗಳ ಕಾಲ FIGHTING ಮಾಡುವ ಈ ಎರಡೂ ದೇಶಗಳು ಮತ್ತೆ ಸುಮ್ಮನೆ ಆಗುತ್ತಿದ್ದವು. ಆದರೆ, ಈ ಬಾರಿ ಎಲ್ಲಾ ಹಾರಿ ಹೋಗುವಂತೆ ಫೈಟಿಂಗ್ ಮಾಡುತ್ತಿದ್ದಾರೆ ISRAEL & IRAN ಸೈನಿಕರು. ಮಿಸೈಲ್‌ಗಳ ಮೂಲಕ ಭಾರಿ ದೊಡ್ಡ ಮಟ್ಟದಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿದ್ದು, ಇನ್ನು ಕೆಲವೇ ಕೆಲವು ದಿನಗಳಲ್ಲಿ ಈ ಯುದ್ಧ ಪರಮಾಣು ಯುದ್ಧವಾಗಿ ಬದಲಾಗುವ ಭಯ ಕೂಡ ಆವರಿಸಿದೆ. ಇಂತಹ ಸಮಯದಲ್ಲೇ ಅತ್ತ ಯುರೋಪ್ ಒಕ್ಕೂಟ & ಇತ್ತ BRITAIN ಸೇರಿ ಸಂಧಾನ ಮಾತುಕತೆಗೆ ಮುಂದಾಗಿವೆಯಂತೆ.

ದಿಢೀರ್ ಇಸ್ರೇಲ್ & ಇರಾನ್ ನಡುವೆ ಯುದ್ಧ ಶುರುವಾಗಲು ಕಾರಣವಾಗಿದ್ದು ಡ್ರೋನ್ ಕಿರಿಕ್. ಹೀಗೆಲ್ಲಾ ಸಣ್ಣ ವಿಷಯ ದೊಡ್ಡದು ಮಾಡಿ ಇಬ್ಬರೂ ಘೋರ ಯುದ್ಧಕ್ಕೆ ಮುನ್ನುಡಿ ಬರೆದರು. ಅಷ್ಟಕ್ಕೂ ಇರಾನ್ ತನ್ನ ಪ್ರದೇಶದ ಕಡೆಗೆ ಸುಮಾರು 100 DRONE ಹಾರಿಸಿದೆ ಎಂದು ಇಸ್ರೇಲ್ ಮಿಸೈಲ್ ATTACK ಮಾಡಿತ್ತು. ಆ ನಂತರ ರೊಚ್ಚಿಗೆದ್ದ ಇರಾನ್ ಕೂಡ ಭಾರಿ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡುತ್ತಿದ್ದು, ಹೀಗೆಲ್ಲಾ ಈ ಇಬ್ಬರ ನಡುವೆ ರಣಭೀಕರ WAR ನಡೆಯುವಾಗಲೇ ಎಚ್ಚೆತ್ತುಕೊಂಡಿರುವ ಯುರೋಪ್ ಒಕ್ಕೂಟ ಮತ್ತು ಬ್ರಿಟನ್ ನಾಯಕರು ಯುದ್ಧ ನಿಲ್ಲಿಸಲು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಈಗಿರುವ ಮಾಹಿತಿ ಪ್ರಕಾರ ಸ್ವಿಜರ್ಲ್ಯಾಂಡ್ ದೇಶದ ಜಿನೀವಾ ನಗರದಲ್ಲಿ ಇರಾನ್ & ಇಸ್ರೇಲ್ ನಡುವಿನ ಈ ಯುದ್ಧ ನಿಲ್ಲಿಸಲು ಮಹತ್ವದ ಮಾತುಕತೆ ಆರಂಭ ಆಗಲಿದೆಯಂತೆ. ಈಗಾಗಲೇ ಯುರೋಪ್ ಸಚಿವರು ಸಂಧಾನ & ಕದನ ವಿರಾಮ ಘೋಷಣೆಗೆ ಚರ್ಚೆ ಶುರು ಮಾಡಿದ್ದು, ಬ್ರಿಟನ್ ಕೂಡ ಒಪ್ಪಂದಕ್ಕೆ ಸಾಥ್ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ ಮತ್ತೊಂದು ಕಡೆ ವಿಶ್ವಸಂಸ್ಥೆ ಕೂಡ ಯುದ್ಧ ನಿಲ್ಲಿಸಲು ಬೇಕಾಗಿರುವ ಪ್ರಯತ್ನಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದು, ಭಾರಿ ಕುತೂಹಲ ಕೆರಳಿದೆ. ಮತ್ತೊಂದು ಕಡೆ ಈ ಯುದ್ಧ ನಿಂತರೆ ಆ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಂದು ಪರಮಾಣು ಯುದ್ಧದ ಭಯ ನಿಂತು ಹೋಗಲಿದೆ.