ಬೆಂಗಳೂರು

ಜಿ.ಪಂ,ತಾ.ಪಂ: ಸ್ನೇಹಪರ ಹೋರಾಟಕ್ಕೆ ಸಜ್ಜಾದ ಜೆಡಿಎಸ್-ಬಿಜೆಪಿ

ಬೆಂಗಳೂರು:- ಮುಂಬರುವ ಜಿಲ್ಲಾ-ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಜೆಡಿಎಸ್-ಬಿಜೆಪಿ ದೋಸ್ತಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆಗಿಳಿಯಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಜೆಡಿಎಸ್ ಹಿರಿಯ ನಾಯಕರೊಬ್ಬರು ಮಾತನಾಡಿ, ಪಕ್ಷದ ಆಂತರಿಕ ಚರ್ಚೆಯ ಸಮಯದಲ್ಲಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿಯುವಂತೆ ಹಲವರು ಅಭಿಪ್ರಾಯಪಟ್ಟಿದ್ದಾರೆ. ನಾವು ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಬಹುದು. ಆದರೆ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಸಮಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಪಕ್ಷವಾಗಿ ಮುಂದೆ ಬರುತ್ತೇವೆ. ಎರಡೂ ಪಕ್ಷಗಳು ಸ್ಫರ್ಧೆಗಿಳಿಯಲಿದ್ದು, ಇದು ಸ್ನೇಹಪರ ಹೋರಾಟವಾಗಿ ಇರುತ್ತದೆ ಎಂದು ಹೇಳಿದ್ದಾರೆ.

ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಇಲ್ಲ. ಆದರೆ, ಕರ್ನಾಟಕದಲ್ಲಿ ಚುನಾವಣೆಗಳಲ್ಲಿ ಸೋಲು ಕಂಡರೂ ಹಳೆಯ ಮೈಸೂರು ಪ್ರದೇಶದ ಮೇಲೆ ಇನ್ನೂ ನಮ್ಮ ಹಿಡಿತವಿದೆ. ಎನ್‌ಡಿಎ ಪಾಲುದಾರರಾಗಿ, ನಾವು ವಿಧಾನಸಭೆ ಮತ್ತು ಇತರ ಚುನಾವಣೆಗಳಲ್ಲಿ ಒಟ್ಟಾಗಿ ಸ್ಪರ್ಧಿಸುತ್ತೇವೆ. ಆದರೆ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಲ್ಲಿ ಪ್ರಾದೇಶಿಕ ಪಕ್ಷವಾಗಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿಯ ಬೇಕಾಗುತ್ತವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ1,130 ಜಿಲ್ಲಾ ಪಂಚಾಯತ್ ಮತ್ತು 3,671 ತಾಲ್ಲೂಕು ಪಂಚಾಯತ್ ಕ್ಷೇತ್ರಗಳಿವೆ. ಪಂಚಾಯತ್ ಚುನಾವಣೆ ಕೊನೆಯದಾಗಿ 2016 ರಲ್ಲಿ ನಡೆದಿತ್ತು. ನಂತರ 2021 ರಲ್ಲಿ ನಡೆಯಬೇಕಿತ್ತು. ಆದರೆ, ನ್ಯಾಯಾಲಯದಲ್ಲಿನ ಪ್ರಕರಣಗಳು, ಕೋವಿಡ್ ಮತ್ತು ಕ್ಷೇತ್ರ ಪುನರ್ವಿಂಗಡಣೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಚುನಾವಣೆಗಳು ವಿಳಂಬವಾಗಿದ್ದವು.

ಇತ್ತೀಚೆಗೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಓಲೈಕೆಗಾಗಿ ಸಭೆಯೊಂದು ನಡೆಸಿತ್ತು, ಅಂದೆ ಯುನೈಟೆಡ್ ನ್ಯೂಸ್ ನಿಮ್ಮ ಮುಂದೆ ಪ್ರತ್ಯೇಕವಾಗಿ ಸ್ಪರ್ಧೆ ಮಾಡುವ ಮುನ್ಸೂಚನೆಯ ಸುದ್ಧಿ ಮಾಡಿತ್ತು. ಅಂದುಕೊಂಡಂತೆಯಾದರೆ ಪ್ರತ್ಯೇಕ ಸ್ಪರ್ಧೆ ಖಚಿತವಾಗಲಿದೆ ಎಂದು ಬಲ್ಲ ಮಾಹಿತಿ ದೊರೆಕಿದೆ.