ಬೆಂಗಳೂರು:- ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಎರಡು ವರ್ಷ ಪೂರ್ಣಗೊಳಿಸಿದ್ದು, ಇಂದು ಸಾಧನಾ ಸಮಾವೇಶ ನಡೆಸುತ್ತಿದೆ. ಈ ಹೊತ್ತಿನಲ್ಲಿ, ಟಾಪ್ 10 ಅತಿಶ್ರೀಮಂತ ಶಾಸಕರ ವಿವರ ಇಲ್ಲಿದೆ.
ಎಡಿಆರ್ ಪ್ರಕಟಿಸಿರುವ ಮಾಹಿತಿ ಪ್ರಕಾರ, 2023ರ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಆಯಾ ಶಾಸಕರು ಸಲ್ಲಿಸಿದ್ದ ಅಫಿಡವಿಟ್ ವಿಶ್ಲೇಷಿಸಿದ್ದು, ಕರ್ನಾಟಕದ ಟಾಪ್ 10 ಅತಿಶ್ರೀಮಂತ ಶಾಸಕರ ಸಂಪತ್ತು, ಶಿಕ್ಷಣ ಮತ್ತು ಕ್ರಿಮಿನಲ್ ಕೇಸ್‌ಗಳ ವಿವರದಲ್ಲಿ ಮೊದಲನೆಯವರು ಡಿ.ಕೆ ಶಿವಕುಮಾರ್ (ಕನಕಪುರ) 63 ವರ್ಷ, ಘೋಷಿತ ಸಂಪತ್ತು 1413 ಕೋಟಿ ರೂಪಾಯಿ 19 ಕೇಸ್ (6 ಗಂಭೀರ ಪ್ರಕರಣ) ಸ್ನಾತಕೋತ್ತರ ಪದವಿ.
2) ಕೆ.ಹೆಚ್ ಪುಟ್ಟಸ್ವಾಮಿ ಗೌಡ (ಗೌರಿಬಿದನೂರು) 71 ವರ್ಷ. 2023ರಲ್ಲಿ ಘೋಷಿತ ಸಂಪತ್ತು 1267 ಕೋಟಿ ರೂಪಾಯಿ ಶಿಕ್ಷಣ- ಪದವಿ
3) ಪ್ರಿಯಾಕೃಷ್ಣ (ಗೋವಿಂದರಾಜ ನಗರ) 41 ವರ್ಷ, 2023ರ ಚುನಾವಣೆ ಸಂದರ್ಭದಲ್ಲಿ ಘೋಷಿತ ಸಂಪತ್ತು 1156 ಕೋಟಿ ರೂ. 1 ಕೇಸ್ ಇದ್ದು, ಶಿಕ್ಷಣ- ಸ್ನಾತಕೋತ್ತರ ಪದವಿ
4) ಸುರೇಶ ಬಿಎಸ್ (ಬೈರತಿ ಸುರೇಶ್) (ಹೆಬ್ಬಾಳ) 52 ವರ್ಷ. 2023ರ ಚುನಾವಣೆ ವೇಳೆ ಘೋಷಿತ ಸಂಪತ್ತು 114 ಕೋಟಿ ರೂಪಾಯಿ. 2 ಕೇಸ್‌ಗಳಿದ್ದು, ಶಿಕ್ಷಣ ಪಿಯುಸಿ.
5) ಎನ್‌ಎ ಹಾರಿಸ್ (ಶಾಂತಿನಗರ) 58 ವರ್ಷ, 2023ರ ಚುನಾವಣೆ ಸಂದರ್ಭದಲ್ಲಿ ಘೋಷಿತ ಸಂಪತ್ತು 439 ಕೋಟಿ ರೂ. 1 ಕೇಸ್ ಇದ್ದು, ಶಿಕ್ಷಣ- ಸ್ನಾತಕೋತ್ತರ ಪದವಿ
6) ಹೆಚ್ ಕೆ ಸುರೇಶ್ (ಬೇಳೂರು) 54 ವರ್ಷ, ಬಿಜೆಪಿ, 2023ರ ಚುನಾವಣೆ ಸಂದರ್ಭದಲ್ಲಿ ಘೋಷಿತ ಸಂಪತ್ತು 435 ಕೋಟಿ ರೂ. ಶಿಕ್ಷಣ ಡಿಪ್ಲೊಮಾ
7) ಎಂ ಆರ್ ಮಂಜುನಾಥ್ (ಹನೂರು) 52 ವರ್ಷ, ಜೆಡಿಎಸ್, 2023ರ ಚುನಾವಣೆ ವೇಳೆ ಘೋಷಿಸಿತ ಸಂಪತ್ತು 316 ಕೋಟಿ ರೂ. ಶಿಕ್ಷಣ- 10ನೇ ತರಗತಿ
8) ಶಾಮನೂರು ಶಿವಶಂಕರಪ್ಪ (ದಾವಣಗೆರೆ ದಕ್ಷಿಣ) 93 ವರ್ಷ, ಕಾಂಗ್ರೆಸ್, 2023ರ ಚುನಾವಣೆ ವೇಳೆ ಘೋಷಿತ ಸಂಪತ್ತು 312 ಕೋಟಿ ರೂ. 1 ಕೇಸ್ ಇದ್ದು, ಶಿಕ್ಷಣ 12ನೇ ತರಗತಿ
9) ಎಂ ಕೃಷ್ಣಪ್ಪ (ವಿಜಯನಗರ), 73 ವರ್ಷ, ಕಾಂಗ್ರೆಸ್, 2023ರ ಚುನಾವಣೆ ವೇಳೆ ಘೋಷಿತ ಸಂಪತ್ತು 296 ಕೋಟಿ ರೂ., 1 ಕೇಸ್ ಇದ್ದು, 6 ಗಂಭೀರ ಸೆಕ್ಷನ್‌ಗಳ ಆರೋಪಗಳಿವೆ. ಶಿಕ್ಷಣ- ಪದವಿ
10) ಮುನಿರತ್ನ (ರಾಜರಾಜೇಶ್ವರಿ ನಗರ) 61 ವರ್ಷ, ಬಿಜೆಪಿ, 293 ಕೋಟಿ ರೂಪಾಯಿ. 8 ಕೇಸ್, 19 ಗಂಭೀರ ಸೆಕ್ಷನ್‌ಗಳ ಆರೋಪ ಎದುರಿಸುತ್ತಿದ್ದಾರೆ. ಶಿಕ್ಷಣ 10ನೇ ತರಗತಿ.