ತುಮಕೂರು:- ಯಾವಾಗಲೂ ಒಂದು ಕೆ.ಜಿ ತೆಂಗಿನಕಾಯಿಗೆ 30ರಿಂದ 40 ರೂಪಾಯಿ ಇರುತ್ತಿತ್ತು. ಆದರೆ, ಇದೀಗ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತೆಂಗಿನಕಾಯಿ ಬೆಲೆ 70ರಿಂದ 80 ರೂಪಾಯಿ ದಾಟಿದ್ದು, ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಆಗಿದೆ.
ಒಂದೆಡೆ ತೆಂಗು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದ್ದು, ಇನ್ನೊಂದೆಡೆ ಸಾಮಾನ್ಯ ಜನರಿಗೆ ಹೊರೆಯಾಗಿದೆ.
ತೆಂಗಿನಕಾಯಿ ಜೊತೆ ಕೊಬ್ಬರಿ, ಕೊಬ್ಬರಿ ಎಣ್ಣೆ, ಏಳನೀರು ದರದಲ್ಲೂ ಭಾರೀ ಏರಿಕೆಯಾಗಿದೆ. ಶುದ್ಧ ಕೊಬ್ಬರಿ ಎಣ್ಣೆ ಲೀಟರ್ಗೆ 310 ರೂ., ಆದರೆ ಏಳನೀರು ಒಂದಕ್ಕೆ 70ರೂಪಾಯಿ ದಾಟಿದೆ.
ಒಂದು ಕೆ.ಜಿ.ತೆಂಗಿನಕಾಯಿ ಬೆಲೆ 100 ರೂ.ಗಿಂತಲೂ ಅಧಿಕವಾಗುವ ಸಾಧ್ಯತೆಯಿದ್ದು, ಇನ್ನೂ 6 ತಿಂಗಳು ದರ ಇಳಿಕೆ ಸಾಧ್ಯತೆ ಇಲ್ಲ. ತೆಂಗಿನಕಾಯಿ ಇಳುವರಿಯಲ್ಲಿ ಕುಂಠಿತವಾಗಿದ್ದು, ತೆಂಗು ದುಬಾರಿಯಾಗಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.