ಬೀದರ್:- ಹುಟ್ಟು-ಸಾವು ನಿರ್ಧಾರ ಅಂದೇ ಆಗುತ್ತದೆ, ನೆಮ್ಮದಿಯಾಗಿ ಸಾಯುವ ಪರಿಸ್ಥಿತಿ ದೇವರು ನೀಡಲಿ ಎಂದು ಪ್ರಾರ್ಥನೆ ಮಾಡುವೆ. ಆದರೆ, ನನಗೆ ಜೀವ ಬೆದರಿಕೆ ಎಂದು NIA ಅನ್ನು ಮಂಗಳೂರಿನಲ್ಲಿ ಸ್ಥಾಪಿಸುವುದು ಬೇಡ, ಜಿಲ್ಲೆಯ ಜನಕ್ಕಾಗಿ ಮಾಡುವುದಾದರೆ ಮಾಡಲಿ ಎಂದಿದ್ದಾರೆ. ಜೀವ ಬೇದರಿಕೆ ಇದೆ ಎಂಬ ಅನುಪಮ ಅಳ್ವರ ಹೇಳಿಕೆಗೆ ಸ್ಪೀಕರ್ ಖಾದರ್ ಫರೀದ್ ರವರು ಬೀದರ್ ನಲ್ಲಿ ಉತ್ತರಿಸಿದರು.
ಉಗ್ರರ ದಾಳಿ ವಿಚಾರವಾಗಿ ಇದೇ ವೇಳೆ ಮಾತನಾಡಿರುವ ಸ್ಪೀಕರ್, ದಾಳಿಕೋರರನ್ನು ಪತ್ತೆ ಹಚ್ಚುವ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೇ ಆ ಉಗ್ರ ಕೃತ್ಯದ ಹಿಂದೆ ಯಾರಿದ್ದಾರೋ ಒಬ್ಬರನ್ನೂ ಬಿಡದೇ ಮಟ್ಟ ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿ. ಉಗ್ರ ದಾಳಿ ನಡೆದಿದ್ದು ತೀವ್ರ ಖಂಡನೀಯ. ತಪ್ಪು ಮಾಡಿದವರನ್ನು ಶಿಕ್ಷಿಸಿ ಇಡೀ ದೇಶದ ಜನಕ್ಕೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿ ಎಂದು ಒತ್ತಾಯಿಸಿದ್ದಾರೆ.
ದಾಳಿ ನಿಮಿತ್ತ ಪಾಕ್ ಜೊತೆಗೆ ಯುದ್ಧ ಮಾಡಬೇಕೋ, ಬೇಡವೋ ಎಂಬುವುದನ್ನು ಕೇಂದ್ರಕ್ಕೆ ಬಿಟ್ಟ ನಿರ್ಧಾರ. ಅವರೇ ತೀರ್ಮಾನಕೈಗೊಳ್ಳಲಿ ಎಂದರಲ್ಲದೇ, ನಿನ್ನೆ ಕೇಂದ್ರ ಸರ್ಕಾರವು ಜನಗಣತಿ ಜೊತೆಗೆ ಜಾತಿಗಣತಿಯ ಘೋಷಣೆ ಮಾಡಿದ್ದು, ಅದು ಕೇಂದ್ರ ಮತ್ತು ರಾಜ್ಯಕ್ಕೆ ಬಿಟ್ಟದ್ದು. ನಾನು ಆಡಳಿತ ಪಕ್ಷ, ಪ್ರತಿಪಕ್ಷಗಳಿಗೆ ಮಿತ್ರನಾಗಿ ಸ್ಪೀಕರ್ ಹುದ್ದೆಯಲ್ಲಿದ್ದೇನೆ. ಆದ್ದರಿಂದ ನನ್ನ ಬಾಯಿಗೆ ಈಗ ಬೀಗ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.