ಮಂಗಳೂರು:- ಕಷ್ಟದ ಕಾಲದಲ್ಲಿ ಪದ್ಮಶ್ರೀ ಹಾಜಬ್ಬರ ಪತ್ನಿ ಮೈಮೂನಾ(57)ಅವರು ಹಾಜಬ್ಬರಿಗೆ ದೊಡ್ಡ ಬೆಂಬಲವಾಗಿದ್ದು, ಅವರ ಜೀವನ ಸಂಗಾತಿಯ ಶನಿವಾರ ಸಂಜೆ ಇಹಲೋಹ ತ್ಯಜಿಸಿದರು. ಶ್ರೀಮತಿ ಮೈಮೂನಾರ ಅಗಲಿಕೆಯು ಹಾಜಬ್ಬ ಅವರಿಗೆ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟವನ್ನು ಉಂಟುಮಾಡಿದೆ.
ಹರೇಕಳ ಹಾಜಬ್ಬ ಅವರು ತಮ್ಮ ಜೀವನವನ್ನು ಶಿಕ್ಷಣದ ಒಳಿತಿಗಾಗಿ ಮೀಸಲಿಟ್ಟವರು, ಕೂಲಿಯಾಳಾಗಿ ಕೆಲಸ ಮಾಡುತ್ತಿದ್ದರೂ ತಮ್ಮ ಊರಿನ ಮಕ್ಕಳಿಗೆ ಶಿಕ್ಷಣದ ಬೆಳಕು ನೀಡುವ ಸಲುವಾಗಿ ಸ್ವಂತ ಖರ್ಚಿನಲ್ಲಿ ಶಾಲೆ ಸ್ಥಾಪಿಸಿ ಶೈಕ್ಷಣಿಕ ಕ್ರಾಂತಿ ಮಾಡಿದವರು. ಈ ಕಾರ್ಯಕ್ಕಾಗಿ ಅವರಿಗೆ ಪದ್ಮಶ್ರೀ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ಪತಿ ಹಾಜಬ್ಬ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
ಮೈಮೂನಾ ಅವರ ಅಂತಿಮ ಸಂಸ್ಕಾರವು ಇಂದು ಮುಸಲ್ಮಾನರ ವಿಧಿ ವಿಧಾನದಂತೆ ಹರೇಕಳದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರ ನಿಧನಕ್ಕೆ ಸ್ಪೀಕರ್ ಖಾದರ್ ಫರೀದ್ ಸೇರಿದಂತೆ ಸ್ಥಳೀಯ ಸಮುದಾಯ, ಸಾಮಾಜಿಕ ಕಾರ್ಯಕರ್ತರು ಮತ್ತು ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಜಬ್ಬ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.