ಟೆಹರಾನ್:- ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ, ಇದು ಬೇರೆ ಬೇರೆ ದೇಶಗಳಿಗೆ ವಿಸ್ತರಿಸುವ ಭೀತಿ ಎದುರಾಗಿದೆ. ಇಸ್ರೇಲ್ ನಡೆಸಿದ ದಾಳಿಗೆ ಇರಾನ್ ತಿರುಗೇಟು ನೀಡಿತ್ತು. ಇದಕ್ಕೆ ಮತ್ತೆ ಇಸ್ರೇಲ್, ಇರಾನ್ ದೇಶದ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿದೆ. ಇದರಲ್ಲಿ ಅಣುಸ್ಥಾವರದ ಎರಡು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಶುಕ್ರವಾರದ ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್ ಕಚೇರಿಯನ್ನು ಇಸ್ರೇಲ್ ಧ್ವಂಸಗೊಳಿಸಿತ್ತು, ಇದರಲ್ಲಿ ಮುಖ್ಯಸ್ಥ ಮೇಜರ್ ಜನರಲ್ ಹುಸೇನ್ ಸಲಾಮಿ ಸಾವನ್ನಪ್ಪಿದ್ದಾರೆ.
ಪಾಶ್ಚಿಮಾತ್ಯ ರಾಷ್ಟ್ರಗಳು ಇಸ್ರೇಲ್ ಪರವಾಗಿ ನಿಂತರೆ ಅವರ ಮೇಲೂ ಪ್ರತೀಕಾರವನ್ನು ತೆಗೆದುಕೊಳ್ಳಲಾಗುವುದು ಎಂದು ಇರಾನ್ ಹೇಳಿದೆ. ಇದು, ಅಮೆರಿಕ, ಬ್ರಿಟನ್, ಜರ್ಮನಿ ಮತ್ತು ಫ್ರಾನ್ಸ್ ದೇಶದ ಮಿಲಿಟರಿ ನೆಲೆಗಳಿಗೂ ಅಪಾಯವನ್ನು ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದು ಎರಡು ದೇಶಗಳ ನಡುವಿನ ಕಲಹ, ಬೇರೆ ದೇಶಗಳಿಗೂ ವಿಸ್ತರಿಸುವ ಸಾಧ್ಯತೆಯಿಲ್ಲದಿಲ್ಲ.
ಬ್ರಿಟನ್ ಸರ್ಕಾರವು ಸಂಘರ್ಷವನ್ನು ತಗ್ಗಿಸುವಂತೆ ಒತ್ತಾಯಿಸಿದೆ, ಪೋಪ್ ಶಾಂತಿಗಾಗಿ ಪ್ರಾರ್ಥಿಸಿದ್ದಾರೆ. ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಟೆಲ್ ಅವಿವ್ ನಗರದ ಹಲವು ಭಾಗಗಳಲ್ಲಿ ಸ್ಪೋಟ ಸಂಭವಿಸಿದೆ. ಉಭಯ ದೇಶದ ನಾಯಕರುಗಳು ವಾಗ್ಯುದ್ದದಲ್ಲಿ ತೊಡಗಿಸಿಕೊಂಡಿದ್ದಾರೆ.
ಇಸ್ರೇಲ್ ಮೇಲೆ ದಾಳಿಯನ್ನು ತಡೆಯಲು ಯತ್ನಿಸಿದರೆ, ನಿಮ್ಮ ಮಿಲಿಟರಿ ನೆಲೆಗಳು ಮತ್ತು ನೌಕಾನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸುತ್ತೇವೆ. ಇದರ ಬೆನ್ನಲ್ಲೇ, ಇಸ್ರೇಲ್ ಅನ್ನು ರಕ್ಷಿಸಲು ನಾವು ಸಿದ್ದ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಜೊತೆಗೆ, ಅಮೆರಿಕಾದ ಪಡೆಗಳು ಇರಾನ್ ಡ್ರೋನ್ ಮತ್ತು ಕ್ಷಿಪಣಿಯನ್ನು ಹೊಡೆದುರುಳಿಸಿದೆ. ಫ್ರಾನ್ಸ್ ಕೂಡಾ, ಇಸ್ರೇಲ್ ಪರವಾಗಿ ನಿಂತಿದೆ.
ಇಸ್ರೇಲ್ ದೇಶವು, ಇರಾನಿನ ಪರಮಾಣು ಕಾರ್ಯಕ್ರಮಗಳನ್ನು ನಾಶ ಮಾಡುವ ಟಾರ್ಗೆಟ್ ಅನ್ನು ಹೊಂದಿದೆ. ಇಸ್ರೇಲ್ ನಡೆಸಿದ ದಾಳಿಗೆ ರಾಜಧಾನಿಯ ಟೆಹರಾನ್ ಭಾಗದಲ್ಲಿ ಸಾಕಷ್ಟು ನಷ್ಟಗಳಾಗಿವೆ. ಈ ನಡುವೆ, ನಿಮ್ಮ ದಾಳಿಯು ಇದೇ ರೀತಿ ಮುಂದುವರಿದರೆ ಟೆಹರಾನ್ ಅನ್ನು ಸುಟ್ಟು ಹಾಕುತ್ತೇವೆ ಎಂದು ಇಸ್ರೇಲ್ ಎಚ್ಚರಿಕೆ ನೀಡಿದೆ.
Uncategorized
ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಇರಾನ್ ಎಚ್ಚರಿಕೆಯ ಸಂದೇಶ
- ಜೂನ್ 14, 2025
- Less than a minute
- 4 ವಾರಗಳು ago
