ಮಂಗಳೂರು:- ಮದುವೆಯಾಗುವುದಾಗಿ ನಂಬಿಸಿ ಗರ್ಭವತಿ ಮಾಡಿ ನಾಪತ್ತೆಯಾಗಿರುವ ವಂಚನೆ ಪ್ರಕರಣ ಇದೀಗ ಎಲ್ಲಾ ಸಂಘಟನೆಗಳು ಖಂಡನೆ ವ್ಯಕ್ತಪಡಿಸಿದೆ. ಈ ನಡುವೆ ಇದೀಗ ಸಂತ್ರಸ್ತೆ ಮನೆಗೆ ಹಿಂದುಳಿದ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಭೇಟಿ ನೀಡಿ ಸಂತ್ರಸ್ತೆ ಹಾಗೂ ಹೆತ್ತವರಿಗೆ ಧೈರ್ಯ ತುಂಬಿದ್ದಾರೆ.
ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಪ್ರತಿಭಾರವರು ಸಂತ್ರಸ್ತೆಯನ್ನು ಆಕೆಯ ಗಂಡನ ಮನೆಗೆ ಸೇರಿಸುವ ಜವಾಬ್ದಾರಿ ನನ್ನದು. ಇಲ್ಲಿಯರೆಗೆ ಸಂತ್ರಸ್ತೆಗೆ ತಾಯಿ ಇದ್ದರು, ಇನ್ಮೇಲೆ ನಾನು ಕೂಡ ತಾಯಿ, ಸಂತ್ರಸ್ತೆ ಕುಟುಂಬದ ಖರ್ಚು ವೆಚ್ಚವನ್ನೆಲ್ಲ ನಾನು ಭರಿಸುತ್ತೇನೆ ಎಂದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಜೊತೆ ಮಾತುಕತೆ ಮಾಡುತ್ತೇನೆ. ಸಂತ್ರಸ್ತೆ ಕುಟುಂಬದ ಜೊತೆ ನಿಂತು ನ್ಯಾಯ ಒದಗಿಸುವ ಕೆಲಸ ನನ್ನದು ಎಂದರು.
ಇನ್ನು, ಸಂತ್ರಸ್ತೆ ತಾಯಿ ಜೊತೆ ಮಾತನಾಡುವ ವೇಳೆ ನಿಮ್ಮ ಜೊತೆ ನಾನಿದ್ದೇನೆ, ಧೈರ್ಯ ಕಳೆದುಕೊಳ್ಳಬೇಡಿ, ಯಾವುದೇ ಕಾರಣಕ್ಕೂ ಮಾಸ್ಕ್ ಧರಿಸಿಕೊಂಡು ಜೀವನ ಮಾಡಬೇಡಿ, ಅಂತಹ ದೊಡ್ಡ ತಪ್ಪು ನೀವೇನೂ ಮಾಡಿಲ್ಲ, ಇವತ್ತಿಂದ ಮಾಸ್ಕ್ ತೆಗೆದು ಧೈರ್ಯದಿಂದ ಇರಬೇಕು ಎಂದು, ಸಂತ್ರಸ್ತೆಯ ತಾಯಿಯ ಮುಖಕ್ಕೆ ಹಾಕಿದ್ದ ಮಾಸ್ಕ್ ನ್ನು ಪ್ರತಿಭಾ ಕುಳಾಯಿ ತೆಗೆಸಿದರು. ಇಂತಹ ಘಟನೆಗಳು ನಡೆದಾಗ ಯಾವುದೇ ಕಾರಣಕ್ಕೂ ಮಹಿಳೆಯಾದವಳು ಧೈರ್ಯ ಕಳೆದುಕೊಳ್ಳಬಾರದು, ಬದಲಾಗಿ ಇಂತಹವರ ವಿರುದ್ಧ ಹೋರಾಟ ಮಾಡಬೇಕು ಎಂದರು.
ಇದೇ ವೇಳೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಜೊತೆ ಸಂತ್ರಸ್ತೆಯ ತಾಯಿ ನಮಿತಾ ಫೋನ್ ಸಂಪರ್ಕದ ಮೂಲಕ ಮಾತಾಡಿದರು. ಈ ವೇಳೆ ನ್ಯಾಯ ದೊರಕಿಸಿ ಕೊಡುವಂತೆ ಕೇಳಿಕೊಂಡ ಸಂತ್ರಸ್ತೆಯ ತಾಯಿ ನಮಿತಾ ಕೇಳಿಕೊಂಡರು. ಫೋನ್ ಸಂಭಾಷಣೆಯಲ್ಲಿ ಸಂತ್ರಸ್ತೆಯ ತಾಯಿ ನಮಿತಾಗೆ ಧೈರ್ಯವನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ನೀಡಿದರು.
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ ಇದೀಗ ಕೈಕೊಟ್ಟಿರುವ ಪುತ್ತೂರಿನ ಆರೋಪಿ ಕೃಷ್ಣ.ಜೆ.ರಾವ್ ನಾಪತ್ತೆಯಾಗಿದ್ದಾನೆ. ಸಂತ್ರಸ್ತೆ ಯುವತಿ ಮಗುವಿನ ಜನ್ಮ ನೀಡಿದ್ದು, ಸಂತ್ರಸ್ತೆಯ ತಾಯಿ ಇದೀಗ ಮಗಳಿಗೆ ನ್ಯಾಯ ಕೊಡಿಸಲು ಮಾಧ್ಯಮಗಳ ಮುಂದೆ ಬಂದಿದ್ದಾರೆ.
ಫ್ರೌಢಶಾಲೆಯಲ್ಲಿರುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕದ ದಿನಗಳಲ್ಲಿಯೂ ಈ ಪ್ರೀತಿ ಮುಂದುವರಿದು ದೈಹಿಕ ಸಂಪರ್ಕದವರೆಗೂ ಸಾಗಿತ್ತು.