ಬೆಂಗಳೂರು:- ಮಹಾತ್ಮ ಗಾಂಧಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ವಿಚಾರದಲ್ಲಿ ಬಿಜೆಪಿಯವರು ತಿಳಿದುಕೊಂಡು ಕಲಿಯೊದು ಬಹಳಷ್ಟು ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
“ಆಪರೇಷನ್ ಸಿಂಧೂರ” ಕಾರ್ಯಾಚರಣೆ ನಡೆಸುವ ಬಗ್ಗೆ ಭಾರತೀಯ ಸೈನ್ಯ ನಡೆಸುವುದು ನಮಗೆ ಹೆಮ್ಮೆ ಇದೆ ಎಂದ ಅವರು ಇದೇನು ಹೊಸದಲ್ಲ, ದೇಶ ಸಂಕಷ್ಟಕ್ಕೆ ಸಿಲುಕಿದ್ದಾಗ ಭಾರತೀಯ ಸೈನಿಕರ ಶೌರ್ಯ ಮತ್ತು ಧೀರತನದಿಂದ ಹೋರಾಟ ಮಾಡಿರೋದು ಜಗತ್ತಿಗೆ ಗೊತ್ತಿದೆ ಎಂದಿದ್ದಾರೆ.
ಪಹಲ್ಗಾಮ್ ಆದ ಬಳಿಕ ಸೇನಾಧಿಕಾರಿಗಳಿಗೆ ಅಧಿಕಾರ ಕೊಟ್ಟ ನಂತರ ಪಾಕಿಸ್ತಾನದ ಹಲವೆಡೆ ಸ್ಟ್ರೈಕ್ ಮಾಡಿದ್ದಾರೆ. ನಾವೆಲ್ಲ ಒಗ್ಗಟ್ಟಿನಿಂದ ದೇಶದ ಜೊತೆ ನಿಲ್ಲಬೇಕು. ಸರ್ಕಾರ ಏನು ಕ್ರಮಕೈಗೊಳ್ಳುತ್ತೋ ಅದರ ಪರವಾಗಿ ಕಾಂಗ್ರೆಸ್ ಇರುತ್ತೆ. ಪಾಕಿಸ್ತಾನಕ್ಕೆ ಸರಿಯಾದ ಉತ್ತರ ಕೊಡಬೇಕು. ಇಷ್ಟಕ್ಕೆ ಇದು ಸಾಲುವುದಿಲ್ಲ ಪುಲ್ವಾಮ ಘಟನೆಯ ಬಳಿಕ ಸರಿಯಾಗಿ ಕ್ರಮ ಆಗಿದಿದ್ದರೆ ಪಹಲ್ಗಾಮ್ ಘಟನೆ ಆಗ್ತಿರಲಿಲ್ಲ. ಹಾಗಾಗಿ ಈ ಬಾರಿ ಸರಿಯಾದ ಕ್ರಮವನ್ನು ಕೈಗೊಳ್ಳಬೇಕಾಗಿದೆ.
ಮುಂದಿನ ದಿನಗಳಲ್ಲಿ ಭಾರತದ ಮೇಲೆ ದಾಳಿ ಮಾಡುವ ಧೈರ್ಯ ಮಾಡದಂತಹ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.
ರಾಷ್ಟ್ರದ ಏಕತೆಗೆ ವಿಪಕ್ಷ ಹೇಗಿರಬೇಕು ಎನ್ನುವುದನ್ನು ನಾವು ಜಗತ್ತಿಗೆ ತೋರಿಸಿದ್ದೇವೆ. ಈ ಹಿಂದೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮಹಾತ್ಮಾ ಗಾಂಧಿ ದೇಶಕ್ಕೆ ಬಲಿದಾನ ಮಾಡಿದ್ದಾರೆ. ವಿಪಕ್ಷದಿಂದ ಬಿಜೆಪಿ ಪಾಠ ಕಲಿಬೇಕು ಎಂದು ಹೇಳಿದ್ದಾರೆ.