Uncategorized

ಭಾರತದ ಆಪರೇಷನ್ ” ಸಿಂಧೂರ ” ಭಾರತೀಯರ ಸಂಭ್ರಮ.!

ಕಾಶ್ಮೀರ:- ಭಾರತದ ದಾಳಿಯಾದ ” ಸಿಂಧೂರ ” ಭಾರತೀಯರು ಸಂಭ್ರಮಿಸುತ್ತಿದ್ದಾರೆ. ಕಾಂಗ್ರೆಸ್‌ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಈ ದಾಳಿಯನ್ನ ಶ್ಲಾಘಿಸುತ್ತಿವೆ. ಪಾಕ್‌ ವಿರುದ್ಧ ಆಪರೇಷನ್‌ ಸಿಂಧೂರ ನಡೆಸಿದ ಭಾರತೀಯ ಸೇನೆಗೆ ಬಹುಪರಾಕ್‌ ಎನ್ನುತ್ತಿದ್ದಾರೆ. ಹಣೆಗೆ ಕುಂಕುಮ ಇಡೋದಕ್ಕೂ, ಸಿಂಧೂರ ಇಡೋದಕ್ಕೂ ವ್ಯತ್ಯಾಸ ಇದ್ರೂ, ಇಲ್ಲಿ ಕುಂಕುಮವೇ ಪ್ರಧಾನ. ಕುಂಕುಮದಿಂದಲೇ ಸಿಂಧೂರ ಇಡಬೇಕು. ಅಂದು ಪಹಲ್ಗಾಮ್‌ನಲ್ಲಿ ಮಹಿಳೆಯರ ಕಣ್ಣೆದುರಲ್ಲೇ ಅವರ ಪತಿಯರನ್ನ ಭಯೋತ್ಪಾದಕರು ಹತ್ಯೆ ಮಾಡಿದ್ದರು. ಮುಗ್ಧ ಮಹಿಳೆಯರ ಸೌಭಾಗ್ಯವಾದ ಸಿಂಧೂರವನ್ನೇ ಅಳಿಸಿ ಹಾಕಿದ್ದರು. ಇನ್ನೂ ಹೇಳಬೇಕು ಅಂದ್ರೆ, ಜಮ್ಮು-ಕಾಶ್ಮೀರವು ಭಾರತ ಮಾತೆಯ ಸಿಂಧೂರದಂತೆ ಇದೆ. ಈ ಎಲ್ಲ ಅಂಶವನ್ನ ಪರಿಗಣಿಸಿ ಭಾರತೀಯ ಸೇನಾಪಡೆಗಳು ಪಾಕ್‌ ಮೇಲೆ ನಡೆಸಿದ ದಾಳಿಗೆ ಆಪರೇಷನ್‌ ಸಿಂಧೂರ ಎಂದು ಹೆಸರಿಡಲಾಗಿತ್ತು.

ಕುಂಕುಮ ಇಟ್ಟು ಬಂದ ಸಿದ್ದರಾಮಯ್ಯ:
ಆಪರೇಷನ್‌ ಸಿಂಧೂರವನ್ನ ದೇಶದ ಪ್ರಮುಖ ಪ್ರತಿಪಕ್ಷವಾದ ಕಾಂಗ್ರೆಸ್‌ ಸ್ವಾಗತಿಸಿದೆ. ಎಲ್ಲಕ್ಕಿಂತ ಅಚ್ಚರಿಯ ವಿಷಯವೆಂದರೆ ಇಂದು ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಭಾರತೀಯ ಸೇನೆಯನ್ನ ಹೊಗಳಿದರು. ಅದಕ್ಕಿಂತಲೂ ಇಂಟರೆಸ್ಟಿಂಗ್‌ ವಿಷಯ ಎಂದರೆ ಅವರು ಹಣೆಯಲ್ಲಿ ದೊಡ್ಡದಾಗಿ ಕುಂಕುಮ ಇಟ್ಟಿದ್ದರು. ಸಿಂಧೂರವನ್ನ ಇಟ್ಟು ಆಪರೇಷನಲ್‌ ಸಿಂಧೂರದ ಬಗ್ಗೆ ಮಾತನಾಡಿದರು. ʼಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಉಗ್ರಗಾಮಿಗಳ ನೆಲೆಯನ್ನ ನಾಶ ಮಾಡಿ ಪರಾಕ್ರಮ ಮೆರೆದಿದೆ. ನಮ್ಮ ದೇಶದ ಸೈನಿಕರಿಗೆ, ನಮ್ಮ ಇಡೀ ರಾಜ್ಯದ ಪರವಾಗಿ ಅಭಿನಂದನೆಯನ್ನ ಸಲ್ಲಿಸುತ್ತೇವೆ. ಭಾರತೀಯ ಸೈನಿಕರು ಸಿಂಧೂರ್‌ ಆಪರೇಷನ್‌ ಮೂಲಕ ದಾಳಿ ಮಾಡಿದರು. ಹೀಗೆ ದಾಳಿ ಮಾಡೋವಾಗ ನಮ್ಮ ಸೈನಿಕರು ಅಲ್ಲಿನ ನಾಗರಿಕರ ಮೇಲೆ, ಸೇನೆಯ ಮೇಲೆ ಅಟ್ಯಾಕ್‌ ಮಾಡಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಪಹಲ್ಗಾಮ್‌ ದಾಳಿಯ ಬಗ್ಗೆಯೂ ಉಲ್ಲೇಖ ಮಾಡಿದರು.

ಸಿಎಂ ಸಿದ್ದರಾಮಯ್ಯನವರಿಗೆ ಈ ಕುಂಕುಮ ಇಡೋದು ಆಗ್ತಿರಲಿಲ್ಲ ಎಂಬುದನ್ನ ಹಿಂದೆ ಹಲವು ಬಾರಿ ನೋಡಿದ್ದೇವೆ. ದೇವಸ್ಥಾನಗಳಿಗೆ ಹೋದಾಗ ಅವರ ಹಣೆಗೆ ಕುಂಕುಮ ಇಟ್ಟ ಕೂಡಲೇ ಅಳಿಸುತ್ತಿದ್ದರು. ಕುಂಕುಮ ಇಡೋದೇ ಬೇಡ ಎಂದು ನಿರಾಕರಿಸುವುದೂ ಇತ್ತು. ಇದೇ ಕಾರಣಕ್ಕೆ ಅವರು ವ್ಯಂಗ್ಯ, ಟೀಕೆಗೆ ಗುರಿಯಾಗಿದ್ದರು. ಆದರೆ, ಆಪರೇಷನ್‌ ಸಿಂಧೂರ್‌ ನಡೆದ ಬೆನ್ನಲ್ಲೇ ಹಣೆಗೆ ದೊಡ್ಡದಾಗಿ ಕುಂಕುಮ ಇಟ್ಟು ಬಂದಿದ್ದಾರೆ. ಈಗ ಮತ್ತೆ ಟ್ರೋಲ್‌ ಆಗುತ್ತಿದ್ದರೆ.