Uncategorized ಬೆಂಗಳೂರು

ಮಳೆ ಹಾನಿ: ಸಿಎಂ, ಡಿಸಿಎಂಗೆ ತರಾಟೆ ತೆಗೆದುಕೊಂಡ ಸ್ಥಳೀಯರು

ಬೆಂಗಳೂರು:- ಮಳೆ ಮತ್ತು ಪ್ರವಾಹ ಪೀಡಿತ ಸ್ಥಳ ವೀಕ್ಷಿಸಿದ ಸಿಎಂ, ಡಿಸಿಎಂ ಮಳೆ ನೀರಿನಿಂದ ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ವೀಕ್ಷಣೆಮಾಡಿ ಅಧಿಕಾರಿಗಳಿಗೆ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲು ಆದೇಶ ನೀಡಿದರು.

ಸಾಯಿ ಲೇಔಟ್‌ ನಲ್ಲಿ ಪರಿಶೀಲನೆಗೆ ತೆರಳಿದ್ದರು, ಈ ವೇಳೆ ಸಿಎಂ- ಡಿಸಿಎಂಗೆ ಸಾಯಿ ಲೇಔಟ್ ನಿವಾಸಿಗಳಿಂದ ಆಕ್ರೋಶ ಎದುರಾಯ್ತು. ಹಾನಿಗೊಳಗಾದ ಪ್ರದೇಶವನ್ನು ನೋಡಲು ಬಿಡದಂತೆ ತಡೆದ ನಿವಾಸಿಗಳು ಸಿಎಂ, ಡಿಸಿಎಂಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಸಕ ಬೈರತಿ ಬಸವರಾಜ್‌ ರನ್ನ ಕೂಡ ಸ್ಥಳೀಯರು ತರಾಟೆ ತಗೆದುಕೊಂಡಿದ್ದಾರೆ.

ಸಾಯಿ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದ ಸಿಎಂ, ಮನವಿಯಲ್ಲಿರುವ ಸಮಸ್ಯೆಗಳ ಬಗ್ಗೆ ಗಂಭೀರ ಗಮನ ಹರಿಸಿ ತಕ್ಷಣಕ್ಕೆ ಸಾಧ್ಯವಿರುವ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಶಾಸಕ ಬೈರತಿ ಬಸವರಾಜ್ ರವರು ಸ್ಥಳೀಯರ ಪ್ರಶ್ನೆಗೆ ಉತ್ತರ ಕೊಡಲಾಗದೆ, ವ್ಯವಸ್ಥೆ ಸರಿಯಾಗದಿದ್ದರೆ ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.