ಚಿಕ್ಕಮಗಳೂರು:- ಜಿಲ್ಲೆಯ ನ.ರಾ.ಪುರ ಪಟ್ಟಣದ ವಾಸಿ ಮಂಜುನಾಥ್ ಹೆಚ್.ಬಿ ಇಂದು ಪುಷ್ಪಾ ಆಸ್ಪತ್ರೆಯಲ್ಲಿ ನಿಧನರಾದರು.
ಅಲ್ಪ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು.
ಇಂಡಿಯನ್ ಗ್ಯಾಸ್ ಏಜೆನ್ಸಿಯ ಮಹಾಲಸಾ ಸಂಸ್ಥೆಯಲ್ಲಿ ಕಾರ್ಯನಿರ್ವಸುತ್ತಿದ್ದರು. ಜೊತೆಗೆ ವಿಡಿಯೋ ಎಡಿಟಿಂಗ್, ಇಮೇಜ್ ಕ್ರಿಯೇಟಿವ್ ಕೂಡ ಮಾಡುತ್ತಿದ್ದ ಇವರು ಯೆನ್ ಕೇಬಲ್ ಸಂಸ್ಥೆಯಲ್ಲಿ ಹಲವು ವರ್ಷಗಳ ನಿಕಟ ಸಂಪರ್ಕ ಹೊಂದಿದ್ದರು.
ಶ್ರೀಯುತರು ತಾಯಿ, ಮಡದಿ ಹಾಗೂ ಪುತ್ರನನ್ನು ಆಗಲಿದ್ದಾರೆ.
ಸಂತಾಪ: ಯುನೈಟೆಡ್ ನ್ಯೂಸ್ ಸಂಸ್ಥೆ ಸೇರಿದಂತೆ ಅಭಿನವ ಗಿರಿರಾಜ್, ಮಂಜು ಎನ್ ಗೌಡ, ಆಶೀಶ್ ಕುಮಾರ್, ಪಿ.ಜೆ ಅಂಟೋನಿ, ಜೋಬಿ ಚೆರಿಯನ್ ಸಂತಾಪ ಸೂಚಿಸಿದ್ದಾರೆ.