ಬೀದರ್:- ಯತ್ನಾಳ್ ನಕಲಿ ಹಿಂದೂ, ಹಿಂದೂ ಹುಲಿಯಲ್ಲ, ಹಿಂದೂ ಇಲಿ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.
ಜೆಡಿಎಸ್ ಪಕ್ಷದಲ್ಲಿದ್ದು ಅಲ್ಪಸಂಖ್ಯಾತರ ಟೋಪಿ ಧರಿಸಿದ್ದರು, ಟಿಪ್ಪು ಖಡ್ಗ ಹಿಡಿದು ಇಫ್ತಿಹಾರ್ ಕೂಟ ಮಾಡಿದ್ದ ಯತ್ನಾಳ್ ನಕಲಿ ಎಂದು ಆಕ್ರೋಶ ಹೊರ ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲುಬಿಲ್ಲದ ನಾಲಿಗೆ, ಅಪ್ಪಗ್ ಹುಟ್ಟಿದ್ದೀಯಾ, ಅವ್ವಗ್ ಹುಟ್ಟಿದ್ದೀಯಾ ಎನ್ನುತ್ತಾರೆ. ಒಂದು ಸಾರಿ ಹಿಂದೂ ಹುಲಿ, ಉತ್ತರ ಕರ್ನಾಟಕ ಹುಲಿ, ಪಂಚಮಸಾಲಿ, ವೀರಶೈವ ಹುಲಿ ಎನ್ನುತ್ತಾರೆ. ಯತ್ನಾಳರೇ ಒಂದು ಬಾರಿ ಅವಲೋಕನ ಮಾಡಿಕೊಳ್ಳಬೇಕು. ಇದೆಲ್ಲಾ ಯತ್ನಾಳ ಅವರ ಡೊಂಬರಾಟ. ಯತ್ನಾಳ್ ನೀನು ನಕಲಿ ಹಿಂದುತ್ವ ಬಿಟ್ಟು ಬಿಡು ಎಂದರು.
ಮೋದಿ, ಅಮಿತ್ ಶಾ ಅನುಮತಿ ಕೊಟ್ಟರೆ ಯುದ್ಧಕ್ಕೆ ಹೋಗುವೆ ಎಂಬ ಸಚಿವ ಜಮೀರ್ ಅಹಮದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ, ಜಮೀರ್ ಅಹಮದ್ ನೀನು ನಕಲಿ, ರಾಜ್ಯದಲ್ಲಿ ಕೋಮುಗಲಭೆಗೆ ನೀನೇ ಕಾರಣ. ನೀನು ಮೊದಲು ಕೋಮು ಪ್ರಚೋದನೆ ಮಾಡುವುದನ್ನು ಬಿಡು ಎಂದು ವಾಗ್ದಾಳಿ ನಡೆಸಿದರು. ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಜಮೀರ್ ಅಹಮದ್ ಕಾರಣ. ಜಮೀರ್ ಬೂಟಾಟಿಕೆಗೋಸ್ಕರ, ಪ್ರಚಾರಕ್ಕಾಗಿ ಹಲ್ಲು ಕಡಿದು ಡೊಂಬರಾಟ ಮಾಡುತ್ತಾರೆ. ಕೋಮು ಗಲಭೆ ಸೃಷ್ಟಿ ಮಾಡುವುಡು ಬಿಟ್ಟು ಬಿಡು ಪುಣ್ಯಾತ್ಮ. ಜಮೀರ್ ನಿನ್ನ ಡೊಂಬರಾಟ ಬಿಟ್ಟು ಬಿಡು ಎಂದರು.