Uncategorized ಬೆಂಗಳೂರು

ರಾಜ್ಯದ 10 ಶಾಸಕಿಯರ ಸಂಪತ್ತು ಮತ್ತು ಶಿಕ್ಷಣ

ಬೆಂಗಳೂರು:- ಕರ್ನಾಟಕದ ಸರ್ಕಾರ 2 ವರ್ಷ ಪೂರ್ಣಗೊಳಿಸಿ ಸಾಧನಾ ಸಮಾವೇಶ ನಡೆಸಿತು. ರಾಜ್ಯದ 10 ಶಾಸಕಿಯರ ಸಂಪತ್ತು ಮತ್ತು ಶಿಕ್ಷಣ ವಿವರವು ಎಡಿಆರ್ ಸಂಸ್ಥೆ 2023ರ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ಆಯಾ ಶಾಸಕರು ಸಲ್ಲಿಸಿದ್ದ ಅಫಿಡವಿಟ್ ವಿಶ್ಲೇಷಿಸಿ ಪ್ರಕಟಿಸಿದ ಪ್ರಕಾರ ರಾಜ್ಯದ 10 ಶಾಸಕಿಯರ ಸಂಪತ್ತು ಮತ್ತು ಶಿಕ್ಷಣದ ವಿವರ

ಮೊದಲನೇಯ ಸರದಿಯಲ್ಲಿ ಮಂಜುಳ ಎಸ್‌ (ಮಹದೇವಪುರ) 50 ವರ್ಷ, ಬಿಜೆಪಿ, 2023ರಲ್ಲಿ ಘೋಷಿತ ಸಂಪತ್ತು 53 ಕೋಟಿ ರೂಪಾಯಿ, ಶಿಕ್ಷಣ 12ನೇ ತರಗತಿ

2) ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ (ನಿಪ್ಪಾಣಿ) 55 ವರ್ಷ, ಬಿಜೆಪಿ, 2023ರ ಚುನಾವಣೆ ವೇಳೆ ಘೋಷಿತ ಸಂಪತ್ತು 52 ಕೋಟಿ ರೂಪಾಯಿ, 1 ಕೇಸ್ ಇದ್ದು, ಶಿಕ್ಷಣ 10ನೇ ತರಗತಿ

3) ಖನೀಝ್ ಫಾತಿಮಾ (ಗುಲ್ಬರ್ಗ ಉತ್ತರ) 66 ವರ್ಷ, ಕಾಂಗ್ರೆಸ್, ಘೋಷಿತ ಸಂಪತ್ತು 18 ಕೋಟಿ ರೂಪಾಯಿ, ಶಿಕ್ಷಣ 12ನೇ ತರಗತಿ

4) ಲಕ್ಷ್ಮಿ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮೀಣ) 50 ವರ್ಷ, ಕಾಂಗ್ರೆಸ್, 2023ರಲ್ಲಿ ಘೋಷಿತ ಸಂಪತ್ತು 13 ಕೋಟ ರೂಪಾಯಿ, 3 ಕೇಸ್‌ಗಳಿದ್ದು, ಶಿಕ್ಷಣ ಸ್ನಾತಕೋತ್ತರ ಪದವಿ

5) ರೂಪಕಲಾ ಎಂ (ಕೋಲಾರ್ ಗೋಲ್ಡ್ ಫೀಲ್ಡ್), 45 ವರ್ಷ , ಕಾಂಗ್ರೆಸ್, 2023ರಲ್ಲಿ ಘೋಷಿತ ಸಂಪತ್ತು 12 ಕೋಟಿ ರೂಪಾಯಿ, 2 ಕೇಸ್‌ಗಳಿದ್ದು, ಶಿಕ್ಷಣ ಸ್ನಾತಕೋತ್ತರ ಪದವಿ

6) ನಯನಾ ಮೋಟಮ್ಮ (ಮೂಡಿಗೆರೆ) 45 ವರ್ಷ, ಕಾಂಗ್ರೆಸ್, 2023ರ ಚುನಾವಣೆ ವೇಳೆ ಘೋಷಿತ ಸಂಪತ್ತು 10 ಕೋಟಿ ರೂಪಾಯಿ, ಶಿಕ್ಷಣ- ಸ್ನಾತಕೋತ್ತರ ಪದವಿ

7) ಲತಾ ಮಲ್ಲಿಕಾರ್ಜುನ್ (ಹರಪನಹಳ್ಳಿ), 57 ವರ್ಷ, ಕಾಂಗ್ರೆಸ್‌, 2023ರ ಚುನಾವಣೆ ವೇಳೆ ಘೋಷಿತ ಸಂಪತ್ತು 7 ಕೋಟಿ ರೂಪಾಯಿ, 12ನೇ ತರಗತಿ

8) ಶಾರದಾ ಪೂರ್ಯಾನಾಯಕ್ (ಶಿವಮೊಗ್ಗ ಗ್ರಾಮೀಣ), 54 ವರ್ಷ, ಜೆಡಿಎಸ್, 2023ರ ಚುನಾವಣೆ ವೇಳೆ ಘೋಷಿತ ಸಂಪತ್ತು 3 ಕೋಟಿ ರೂಪಾಯಿ, ಶಿಕ್ಷಣ- 10ನೇ ತರಗತಿ

9) ಕರೆಮ್ಮ ನಾಯಕ್ (ದೇವದುರ್ಗ) 52 ವರ್ಷ, ಜೆಡಿಎಸ್, 2023ರ ಚುನಾವಣೆ ವೇಳೆ ಘೋಷಿತ ಸಂಪತ್ತು 98 ಲಕ್ಷ ರೂಪಾಯಿ, 7 ಕೇಸ್‌ಗಳಿದ್ದು, ಶಿಕ್ಷಣ- 12ನೇ ತರಗತಿ

10) ಭಾಗೀರಥಿ ಮುರುಳ್ಯ (ಸುಳ್ಯ), 50 ವರ್ಷ ಬಿಜೆಪಿ, 2023ರ ಚುನಾವಣೆ ವೇಳೆ ಘೋಷಿತ ಸಂಪತ್ತು 28 ಲಕ್ಷ ರೂಪಾಯಿ, ಶಿಕ್ಷ

ಣ 10ನೇ ತರಗತಿಯವರೆಗೆ.