ವಿಜಯಪುರ:- ಶಾಸಕ ಕಾಶಪ್ಪನವರ ಮಹಾಭ್ರಷ್ಟ, ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದ್ದಾನೆ ಎಂದು ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ. ಅವರು ವಿಜಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಶಿವಾನಂದ ಪಾಟೀಲ್ ಕೂಡ ಬಾಗೇವಾಡಿಯಲ್ಲಿ ಏನೂ ಸಿಗುವುದಿಲ್ಲ ಹಾಗಾಗಿ ವಿಜಯಪುರಕ್ಕೆ ಬರುವುದು ಎಂದಿದ್ದಾರೆ.
ಎಲ್ಲಾ ಹಿಂದೂಗಳು ನನಗೆ ವೋಟು ಹಾಕುತ್ತಾರೆ, ಶಿವಾನಂದ್ ಗೆ ಮುಸಲ್ಮಾನರ ವೋಟು ಸಹ ಸಿಗಲ್ಲ, ಯಾಕೆಂದರೆ ಮುಸಲ್ಮಾನರು ತಮ್ಮ ಸಮುದಾಯದ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸುತ್ತಾರೆ ಎಂದು ಯತ್ನಾಳ್ ಹೇಳಿದರು.
ನನ್ನ ವಿರುದ್ಧ ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಯಾರಾದರೂ ಭಾರತ ಮಾತಾಕಿ ಜೈ ಅಂದ್ರಾ, ಪಾಕಿಸ್ತಾನಕ್ಕೆ ಧಿಕ್ಕಾರ ಕೂಗಿದ್ದಾರಾ. ಕಾಂಗ್ರೆಸ್ ಸಚಿವ, ಶಾಸಕರನ್ನು ಮುಸ್ಲಿಂ ಮುಖಂಡರು ಬ್ಲ್ಯಾಕ್ ಮೆಲ್ ಮಾಡಿದ್ದಾರೆ ಎಂದಿದ್ದಾರೆ.