ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಕಡುಹಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೆಟ್ಟಿಕೊಪ್ಪ ಟಿ.ಎಂ. ರಸ್ತೆಯಿಂದ ಜನತಾ ಕಾಲೋನಿಯ ಮೂಲಕ ಅರಸೀನಕೆರೆ, ಭೀಮನರಿ ಸಂಪರ್ಕ ರಸ್ತೆಗೆ ಶೃಂಗೇರಿ ಕ್ಷೇತ್ರದ ಶಾಸಕರು, ಕರ್ನಾಟಕ ಸರ್ಕಾರದ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷರಾದ ಟಿ.ಡಿ ರಾಜೇಗೌಡರು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂಪಾಯಿಗಳ ಅನುದಾನವನ್ನು ರಸ್ತೆಯ ಡಾಂಬರೀಕರಣಕ್ಕಾಗಿ ನೀಡಿದ್ದು, ಕಾಮಗಾರಿಯ ಗುದ್ದಲಿ ಪೂಜೆಯನ್ನು ಕಡಹಿನಬೈಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುನಿಲ್ ಕುಮಾರ್ ಹಾಗೂ ಸದಸ್ಯರಾದ ಶೈಲಾ ಮಹೇಶ್, ವಾಣಿ ನರೇಂದ್ರ, ಲಿಲ್ಲಿ ಮಾತುಕುಟ್ಟಿ, ಎ.ಬಿ ಮಂಜುನಾಥ್ ರವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಕಾಂಗ್ರೆಸ್ ಘಟಕದ ಅಧ್ಯಕ್ಷ ಕರಗುಂದ ನಂದೀಶ್, ಕಡಹಿನ ಬೈಲು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಎಲ್ ಮಹೇಶ್, ಕಡಹಿನಬೈಲು ಬೂತ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಪಿ.ಟಿ ಜೇಮ್ಸ್, ಕಾರ್ಯದರ್ಶಿ ಎಲ್ದೋಸ್ ಕಾಂಗ್ರೆಸ್ ಮುಖಂಡ ಡಿ ಆಂಟೋನಿ, ಡಿಎಸ್ಎಸ್ ಮುಖಂಡ ಮಂಜುನಾಥ್ P, ನೇರಲೆಕೊಪ್ಪ ಬೂತ್ ಅಧ್ಯಕ್ಷ ಪರಮೇಶ್ವರ್ ಹಾಗೂ ಕಾಂಗ್ರೆಸ್‌ನ ಕಾರ್ಯಕರ್ತರು ಉಪಸ್ಥಿತರಿದ್ದರು.