ಬೆಂಗಳೂರು

ಸಮೀಕ್ಷೆಯ ಸಂದರ್ಭದಲ್ಲಿ ಗೊಂದಲಕ್ಕೊಳಗಾಗದಿರಿ.- ಡಾ.ಶಾಮನೂರು ಶಿವಶಂಕರಪ್ಪ

ಬೆಂಗಳೂರು:- ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಿಂದ ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ ದಾಸ್ ಏಕ ಸದಸ್ಯ ಆಯೋಗವು ಇದೇ ತಿಂಗಳ 05-05-2025ರಿಂದ “ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆ-2025” ಪ್ರಾರಂಭಿಸಿದೆ. ಈ ಸಮೀಕ್ಷೆಯ ಸಂದರ್ಭದಲ್ಲಿ ಸಮಾಜ ಬಾಂಧವರು ಗೊಂದಲಕ್ಕೊಳಗಾಗಿರುವುದು ಮಹಾಸಭೆಯ ಗಮನಕ್ಕೆ ಬಂದಿದೆ ಎಂದು ತಿಳಿದಿದೆ.

ಪರಿಶಿಷ್ಟ ಜಾತಿಗೊಳಪಡದ ನಮ್ಮ ಸಮಾಜದವರು ಸಮೀಕ್ಷಾದಾರರು ತಮ್ಮ ಮನೆಗಳಿಗೆ ಸಮೀಕ್ಷೆಗೆ ಬಂದಾಗ ಯಾವುದೇ ಗೊಂದಲಕ್ಕೊಳಗಾಗದೇ ತಮ್ಮ ಕುಟುಂಬದ ‍ಯಜಮಾನರ ಹೆಸರು ಮತ್ತು ಕುಟುಂಬದ ಒಟ್ಟು ಸಂಖ್ಯೆಯನ್ನು ಮಾತ್ರ ನೀಡುವ ಮೂಲಕ ಸಮೀಕ್ಷೆಗೆ ಸಹಕರಿಸಬೇಕು. ಇದು ಪರಿಶಿಷ್ಟ ಜಾತಿಗಳ ಸಮಗ್ರ ಹಿಂದುಳಿದ ಮತ್ತು ಸಾಮಾನ್ಯ ವರ್ಗದವರು ಈ ಸಮೀಕ್ಷೆಗೆ ಒಳಪಡುವುದಿಲ್ಲ ಎಂದು ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪರವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.