ಬೆಂಗಳೂರು:- ಪಾಕಿಸ್ತಾನದ ಕೆಲ ಸ್ಥಳಗಳಲ್ಲಿ ದಾಳಿ ಮಾಡುವ ಮೂಲಕ ಉಗ್ರರಿಗೆ ತಿರುಗೇಟು ನೀಡಿರುವ ಭಾರತೀಯ ಸೇನೆಯ ದಿಟ್ಟ ಕ್ರಮವನ್ನು ಕರ್ನಾಟಕ ಮುಸ್ಲಿಮ್ ಮೂಮೆಂಟ್ ಮುಕ್ತ ಕಂಠದಿಂದ ಶ್ಲಾಘಿಸಿದೆ. ಯುನೈಟೆಡ್ ನ್ಯೂಸ್ ಕನ್ನಡಕ್ಕೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ರಾಜ್ಯ ಘಟಕವು ಪಾಕಿಸ್ತಾನದ ಭಯೋತ್ಪಾದನೆಯ ಮೂಲ. ಯಾರೇ ಆಗಲಿ ಜಿಹಾದ್ ಹೆಸರಿನಲ್ಲಿ ಅಮಾಯಕನರನ್ನು ಕೊಲ್ಲುವವರನ್ನು ಖಂಡಿಸುತ್ತೇವೆ ಎಂದು ಹೇಳಿಕೆ ನೀಡಿರುವ ಅವರು ಭಯೋತ್ಪಾದನೆಗೆ ಜಾತಿ,ಧರ್ಮ ಮತವಿಲ್ಲ ಅವರು ಕ್ರೂರಿಗಳೆಂದು ಬರೆದಿದ್ದಾರೆ.
ಪಾಕಿಸ್ತಾನಕ್ಕೆ ಕಠಿಣ ಪಾಠ ಕಲಿಸಲು ಸೇನೆ ಸಜ್ಜಾಗಿ ಹೋರಾಡುತ್ತಿದೆ, ನಮ್ಮ ರಕ್ಷಣಾ ಪಡೆಗಳು ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ನಡೆಸಿದ ಸರ್ಜಿಕಲ್ ದಾಳಿಯನ್ನು ನಮ್ಮ ರಾಜ್ಯ ಘಟಕದ ಪದಾಧಿಕಾರಿಗಳು ಪೂರ್ಣವಾಗಿ ಸ್ವಾಗತಿಸುತ್ತೇವೆ, ಮತ್ತೊಂದು ಪಹಲ್ಗಾಮ್ ಘಟನೆ ಇನ್ನೆಂದೂ ಸಂಭವಿಸದಂತೆ ಪಾ(ಪಿ)ಕಿಸ್ತಾನಕ್ಕೆ ಕಠಿಣ ಪಾಠ ಕಲಿಸಬೇಕು. ಪಾಕಿಸ್ತಾನದಲ್ಲಿರುವ ಉಗ್ರರ ಕೇಂದ್ರಗಳನ್ನು ಸಂಪೂರ್ಣವಾಗಿ ನಾಶಪಡಿಸಬೇಕು ಎಂದು ಹೇಳಿದ್ದಾರೆ.