ದಕ್ಷಿಣ ಕನ್ನಡ

ಸೂತ್ರದಾರಿಗಳ ಕೈಗೊಂಬೆಗಳಾಗಿ ಪಾತ್ರದಾರಿಗಳು ಪ್ರಾಣ ಕಳ್ಕೊಳ್ತಾ ಇದ್ದಾರೆ

ಮಂಗಳೂರು:- ಆರ್ಸಿಬಿ ವಿಜಯೋತ್ಸವದ ಕಹಿ ಘಟನೆ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ, ಸಿಎಂ ಇದಕ್ಕೆ ಪ್ರತಿಕ್ರಿಯೆ ಕೊಡ್ತಾರೆ ಎಂದು ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್ ಮಂಗಳೂರಿನಲ್ಲಿ ಹೇಳಿದ್ದಾರೆ.

ಅವರು ಮಾತನಾಡಿ, ಈಗಾಗಲೇ ಸಾವು ನೋವಾದ ಕುಟುಂಬಗಳಿಗೆ ಒಂದು ಕೋಟಿ ಪರಿಹಾರ ನೀಡಬೇಕು, ಸಾವಿರಾರು‌ ಕೋಟಿ ಮಾಲಿಕರಿದ್ದಾರೆ ಒಂದು ಕೋಟಿಯಂತೆ ನೀಡಲಿ ಎಂದು ಹೇಳಿದರಲ್ಲದೆ, ಮಂಗಳೂರು ನಮ್ಮೂರು ಅದಕ್ಕೆ ಬಂದಿದ್ದೇನೆ. ಯಾವಾಗಲು ಬರುವ ಹಾಗೆ ಬಂದಿದ್ದೇನೆ, ಕೆಲವೊಂದು ನಡೀ ಬಾರದ ಘಟನೆ ನಡೆದಿದೆ ಯಾರು ಧೃತಿ ಗೆಡಬಾರದು, ಅದರ ಬಗ್ಗೆ ಮಾತುಕತೆಗಾಗಿ ಬಂದಿದ್ದೇನೆ ಎಂದರು.

ಸಿ. ಎಂ. ಭೇಟಿ ಸಂದರ್ಭದಲ್ಲಿ ಮಂಗಳೂರು ಮಣಿಪುರ ಮಾಡ್ಬೇಡಿ ಅಂತ ಹೇಳಿದ್ದೇನೆ, ಇಡೀ ರಾಜ್ಯದಲ್ಲಿ ಶಾಂತಿ ನೆಲಿಸಿರುವಾಗ ಕೇವಲ ಕರಾವಳಿ ದಕ್ಷಿಣ ಕನ್ನಡ ಯಾಕಿಷ್ಟು ಅನಾಹುತ ನಡೆಯುತ್ತಿದೆ ಕೂಲಾಂಕುಶವಾಗಿ ನೋಡಬೇಕಾಗುತ್ತದೆ. ಒಬ್ಬ ಅಮಾಯಕ ಹೋಗಿ ಸಾಯಿಸೋಕೆ ಇದು ಮಣಿಪುರ ಅಲ್ಲ, ಉತ್ತರ ಪ್ರದೇಶ ಸಹ ಅಲ್ಲ, ಇದರ ಬಗ್ಗೆ ಕ್ರಮ ತೆಗೊಳೋಕ್ಕೆ ಮುಖ್ಯಮಂತ್ರಿಯವರಲ್ಲಿ ಮಾತಾಡಿದಾಗ ಮುಖ್ಯಮಂತ್ರಿಯವರು ಸರಿಮಾಡುವ ಭರವಸೆ ನೀಡಿದ್ದಾರೆ, ಹಾಗೆಯೇ ತಾವು ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತಾಡಿ ಹೇಳಿದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ದೃತಿಗೆಡುವ ಅಗತ್ಯವಿಲ್ಲಾ.

ನಾವು ನ್ಯಾಯ ಪರ ಇದ್ದೇವೆ, ಯಾವುದೇ ಧರ್ಮ ಜಾತಿ ಭಾಷೆ ಅನ್ನೋದಿಲ್ಲ, ಸಂವಿಧಾನ ಹಾಗೂ ನ್ಯಾಯದ ಪರ ಇರುವವರು ಎಲ್ಲರಿಗೂ ನ್ಯಾಯ ಸಿಗಬೇಕು. ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡಲು ಸಹ ಬಂದಿದ್ದೇನೆ, ಯಾರು ದುಡುಕಿ ಮುಂದೆ ಹೆಜ್ಜೆ ಇಟ್ಟು ರಾಜೀನಾಮೆ ಕೊಡೋದು ಬೇಕಾಗಿಲ್ಲ, ಯಾರು ಸಹ ಉಗ್ರವಾಗಿ ಯೋಚನೆ ಮಾಡೋದು ಬೇಕಾಗಿಲ್ಲ, ರಾಜ್ಯದಲ್ಲಿ ಒಳ್ಳೆ ಹೆಸರಿದೆ ಅದನ್ನು ಮಣಿಪುರ ಆಗಲು ಬಿಡುವುದಿಲ್ಲ.

ನಾನು ಪಕ್ಷದಲ್ಲಿ ಹಲವಾರು ವರ್ಷದಿಂದ ಇದ್ದೇನೆ, ಎಲ್ಲರಲ್ಲೂ ಮಾತಾಡ್ತೇನೆ, ಯಾರನ್ನು ಕಳ್ಳೊಳ್ಳಿಕ್ಕೆ ತಯಾರಿಲ್ಲ, ಯಾವುದೊ ಬಾವನತ್ಮಕವಾದ ವಿಚಾರದಲ್ಲಿ ನೋವಾದಾಗ ರಾಜೀನಾಮೆ ಕೊಟ್ಟಿದ್ದಾರೆ, ವಾಪಾಸ್ ತೆಗೆದುಕೊಳ್ಳಲು ಮನವಿ ಮಾಡ್ತೇನೆ.

ಜಿಲ್ಲೆಯ ಕೊಲೆಗಳ ವಿಚಾರವಾಗಿ ಪ್ರತಿಕ್ರಿಯಿಸಿ, ಸೂತ್ರದಾರಿಗಳ ಕೈ ಗೊಂಬೆಗಳಾಗಿ ಪಾತ್ರದಾರಿಗಳು ಪ್ರಾಣ ಕಳ್ಕೊಳ್ತಾ ಇದ್ದಾರೆ ಕೊಲೆಯಾಗ್ತಿದ್ದರೆ, ಜೈಲ್ ಗೂ ಹೋಗ್ತಾ ಇದ್ದಾರೆ, ಸ್ವಲ್ಪ ದಿನದಲ್ಲಿ ಸೂತ್ರದಾರಿಗಳು ಯಾರೆಂದು ನಾವು ಹೇಳುತ್ತೇವೆ, ಅಲ್ಲಿಯ ತನಕ ಪೊಲೀಸ್ ಅಧಿಕಾರಿಗಳು ಒಳ್ಳೆಯವರಿದ್ದಾರೆ, ಕ್ರಮ ಜರಗಿಸುತ್ತಾರೆ ಎಂದರು.