ಕಂಪ್ಲಿ:- ಶಾಸಕರಿಗೆ ಸದನದಲ್ಲಿ ವರ್ತಿಸುವ ಕನಿಷ್ಠ ಜ್ಞಾನವಿಲ್ಲ, ಅನುಚಿತ ವರ್ತನೆಯಿಂದ ರೋಸಿ ಹೋದ ಸ್ಪೀಕರ್ ಬಿಜೆಪಿಯ ಹದಿನೆಂಟು ಶಾಸಕರನ್ನು ಅಮಾನತು ಮಾಡಿದ್ದಾರೆ. ಸ್ಪೀಕರ್ ಖಾದರ್ ಫರೀದ್ ಅವರು ಮಾಡಿರುವ ಕ್ರಮ ಸರಿಯಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಹೇಳಿಕೆ ನೀಡಿರುವುದು ಬಿಜೆಪಿಯ ಶಾಸಕರಿಗೆ ನುಂಗಲಾರದ ತುತ್ತೊಂದನ್ನು ಕೊಟ್ಟಿದ್ದಾರೆ.
ದೈನಂದಿನ ಅಧಿವೇಶನದ ಬಳಿಕ ಘಟನೆ ನಡೆದಿದ್ದು, ಆರೋಪಗಳ ಬಗ್ಗೆ ಪರಿಶೀಲಿಸಲಾಗಿ ಅಂತಹ ಶಬ್ದಗಳು ಕಂಡು ಬಂದಿಲ್ಲವಾದ್ದರಿಂದ ಪರಸ್ಪರ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಚಿವೆ ಹೆಬ್ಬಾಳ್ಕರ್ ಹಾಗೂ ಮೇಲ್ಮನೆ ಸದಸ್ಯ ಸಿ.ಟಿ.ರವಿಗೆ ಹೇಳಿದೆ. ಆದರೆ, ಪರಸ್ಪರ ದೂರುಗಳನ್ನು ದಾಖಲಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಈ ಕುರಿತು ಹೆಚ್ಚಿಗೆ ಮಾತನಾಡುವುದಿಲ್ಲ. ವಿಧಾನ ಪರಿಷತ್ ಸದಸ್ಯರಿಗಾಗಿ ಜೂನ್ ತಿಂಗಳಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ ಎಂದಿದ್ದಾರೆ.