ಗದಗ:- ಉತ್ತರ ಕರ್ನಾಟಕದ ಪ್ರಸಿದ್ಧ ಲಿಂಗಾಯತ ಪೀಠವಾಗಿರುವ ಗದಗದ ತೋಂಟದಾರ್ಯ ಮಠದಲ್ಲಿ ರಥೋತ್ಸವದ ನಂತರ ನಡೆಯುವ ಎರಡು ತಿಂಗಳ ವ್ಯಾಪಾರದಲ್ಲಿ ಹೊರ ರಾಜ್ಯದ ಮುಸನ್ಮಾನರು ವ್ಯಾಪಾರ ಮಾಡುವ ಹಿನ್ನೆಲೆಯಲ್ಲಿ ಮೇ 15ರಂದು ಹಿಂದೂಪರ ಸಂಘಟನೆಗಳು ಗದಗ ಬಂದ್ಗೆ ಕರೆ ನೀಡಿದ್ದಾರೆ.
ರಥೋತ್ಸವವು ಕಳೆದ ಏಪ್ರಿಲ್ 13ರಂದು ವಿಜೃಂಭಣೆಯಿಂದ ಜರುಗಿದ್ದು, ನಂತರದ ಜಾತ್ರೆಯಲ್ಲಿ ಬಟ್ಟೆ, ಪಾದರಕ್ಷೆ, ಆಟಿಕೆ ಮುಂತಾದ ವಸ್ತುಗಳ ವ್ಯಾಪಾರದ ಮೂಲಕ ಕೋಟ್ಯಂತರ ರೂಪಾಯಿಯ ವಹಿವಾಟು ನಡೆಯುತ್ತಿದೆ. ಆದರೆ, ಈ ವ್ಯಾಪಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊರರಾಜ್ಯದಿಂದ ಬಂದ ಮುಸ್ಲಿಂ ವ್ಯಾಪಾರಸ್ಥರು ಪಾಲ್ಗೊಳ್ಳುತ್ತಿರುವುದು ಸಂಘಟನೆಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಶ್ರೀರಾಮ ಸೇನೆ, ಕನ್ನಡಪರ ಹಾಗೂ ದಲಿತ ಸಂಘಟನೆಗಳು ಸೇರಿ ತೋಂಟದಾರ್ಯ ಮಠದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡದಂತೆ ಒತ್ತಾಯಿಸುತ್ತಿವೆ. “ಇದು ಲಿಂಗಾಯತ ಪೀಠ. ಹಿಂದೂಳಿಗೆ ಮಾತ್ರ ಅವಕಾಶ ಇರಬೇಕು,” ಎಂಬ ಅವರುಗಳ ಮಾತು. ಗದಗ ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ಕೂಡಾ ಆರಂಭವಾಗಿದ್ದು, ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಮೇ 15ರಂದು ಗದಗ ಬಂದ್ ಆಗುವುದು ಅನಿವಾರ್ಯವೆಂದು ಶ್ರೀರಾಮ ಸೇನೆಯ ಮುಖಂಡ ರಾಜು ಖಾನಪ್ಪನ್ನವರ ಎಚ್ಚರಿಸಿದ್ದಾರೆ.
ಸ್ಥಳೀಯ ವ್ಯಾಪಾರಸ್ಥರು ಈ ಜಾತ್ರೆಯಿಂದ ತಾವು ನಷ್ಟ ಅನುಭವಿಸುತ್ತಿದ್ದಾರೆ, ರಾತ್ರಿ-ಹಗಲು ವ್ಯಾಪಾರ ಮಾಡುತ್ತಾ, ಕಾನೂನು ಉಲ್ಲಂಘನೆ ಮಾಡುತ್ತಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ. ಬಹುತೇಕ ವ್ಯಾಪಾರಸ್ಥರು ಕಾನೂನುಬದ್ಧವಾಗಿ ವ್ಯಾಪಾರಕ್ಕಾಗಿಯೇ ಬಂದಿರುವ ಬಗ್ಗೆ ಯಾವುದೇ ದೃಢ ದಾಖಲೆ ಇಲ್ಲದಿರುವುದು ಇನ್ನೊಂದು ಚರ್ಚೆಯ ವಿಷಯವಾಗಿದೆ.