ಮಂಗಳೂರು:- ಕರಾವಳಿಯಲ್ಲಿ ಹಿಂದೂ ಮುಖಂಡನ ಅಶ್ಲೀಲ ವಿಡಿಯೋವೊಂದು ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ, ವಿಚಾರಣೆಯ ವೇಳೆ ಹಿಂದೂ ಮುಖಂಡನೊಬ್ಬನ ಮೊಬೈಲ್ನಲ್ಲಿ ಈ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು, ಗಂಡು-ಹೆಣ್ಣಿನ ನಗ್ನ ದೃಶ್ಯಗಳು, ಲೈಂಗಿಕ ಸಂಪರ್ಕದ ವಿಡಿಯೋ ಕ್ಲಿಪ್ಗಳು ಪತ್ತೆಯಾಗಿದೆ.
ತನಿಖೆಗೆ ಇಳಿದ ಮೂಡಬಿದಿರೆ ಪೊಲೀಸರಿಗೆ ಈ ವಿಡಿಯೋ ಶಾಕ್ ನೀಡಿದೆ. ತನಿಖೆ ವೇಳೆ ಅಶ್ಲೀಲ ವಿಡಿಯೋ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಡಾಟಾ Extract ವೇಳೆ ಮೂಡಬಿದಿರೆ ಪೊಲೀಸರು ವಿಡಿಯೋ ಕಂಡು ಅಚ್ಚರಿ ಪಟ್ಟಿದ್ದಾರೆ.
ಹಿಂದೂ ಮುಖಂಡ ಸಮಿತ್ ರಾಜ್ ಮೊಬೈಲ್ನಲ್ಲಿ ಈ ವಿಡಿಯೋ ಪತ್ತೆಯಾಗಿದ್ದು, ಹಿಂದೂ ಜಾಗರಣಾ ವೇದಿಕೆ ದ.ಕ ಜಿಲ್ಲಾ ಸಹಸಂಯೋಜಕರಾಗಿ ಸಮಿತ್ ರಾಜ್ ಗುರುತಿಸಿಕೊಂಡಿದ್ದಾರೆ. ಖಾಸಗಿ ಬಸ್ ಗೆ ಕಲ್ಲು ತೂರಿದ್ದ ಪ್ರಕರಣದಲ್ಲಿ ಸಮಿತ್ ರಾಜ್ನನ್ನ ಮೂಡಬಿದಿರೆ ಪೊಲೀಸರು ಬಂಧಿಸಿದ್ದರು. ಹೆಚ್ಚಿನ ತನಿಖೆಗಾಗಿ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಹಂತದಲ್ಲಿ ಡೇಟಾ Extract ಮಾಡಿಸಲು ಕೋರ್ಟ್ ಹಾಗೂ ಮೇಲಾಧಿಕಾರಿಗಳ ಅನುಮತಿ ಕೋರಿದ್ದರು. ಅನುಮತಿ ಸಿಕ್ಕ ಬಳಿಕ ಸೆನ್ ಲ್ಯಾಬ್ ನಲ್ಲಿ ಡಾಟಾ Extract ಮಾಡಲಾಗಿತ್ತು. ಈ ವೇಳೆ 50ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳು ಇರುವುದು ಪತ್ತೆಯಾಗಿದೆ.
ವಿಡಿಯೋಗಳು ಪತ್ತೆ ಹಿನ್ನೆಲೆ ಇನ್ಸ್ಪೆಕ್ಟರ್ ಸಂದೇಶ್, ಮೂಡಬಿದಿರೆ ಠಾಣೆಯಲ್ಲಿ ಪ್ರತ್ಯೇಕ FIR ದಾಖಲು ಮಾಡಿದ್ದಾರೆ. ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡುವ ಸಾಧ್ಯತೆ ಇದೆ. ಇನ್ಯಾರಿಗೋ ಕಳುಹಿಸುವ ಸಾಧ್ಯತೆ ಹಿನ್ನೆಲೆ ಎಫ್ಐಆರ್ ದಾಖಲಾಗಿದೆ. ಇದರಿಂದಾಗಿ ವಿಡಿಯೋದ ಮೂಲವನ್ನೂ ಹುಡುಕಲು ಪೊಲೀಸರು ಮುಂದಾಗಿದ್ದಾರೆ.