ಬೆಂಗಳೂರು

ಅಲ್ಪಸಂಖ್ಯಾತರ ಆಯೋಗಕ್ಕೆ ಅಬ್ದುಸ್ಸಲಾಮ್ ಪುತ್ತಿಗೆ ಸೇರಿದಂತೆ ಎಂಟು ಸದಸ್ಯರು ತಕ್ಷಣ ಜಾರಿಗೆ ಬರುವಂತೆ ಆಯ್ಕೆ

ಬೆಂಗಳೂರು:- ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರನ್ನಾಗಿ ಎಂಟು ಮಂದಿಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ನಾಮನಿರ್ದೇಶನ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಸೇರಿದಂತೆ ಬೆಂಗಳೂರಿನ ಮುಹಮ್ಮದ್ ಇಸ್ಮಾಯಿಲ್, ನಿವೃತ್ತ ಐಎಎಸ್ ಅಧಿಕಾರಿ ನಿಶ್ಚಿತ್ ತಬಸ್ಸುಮ್ ಆಬ್ರೂ, ಕೆ.ಆರ್.ಜೋಬಿ,

ಮೈಸೂರಿನ ಮನ್ಸೂರ್ ಅಹ್ಮದ್, ಹಾವೇರಿಯ ಪರಿಮಳಾ ಜೈನ್, ಬೀದರ್‌ನ ಮನದೀಪ್ ಕೌರ್ ಹಾಗೂ ಮೈಸೂರಿನ ಜೆಕ್‌ ಮೇಟ್ ವಾಂಗದೂಸ್ ಜ್ಯೋತಿ ಅವರನ್ನು ಸದಸ್ಯರನ್ನಾಗಿ

ನಾಮನಿರ್ದೇಶನ ಮಾಡಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಸ್ ಇಲಾಖೆಯ ಸರಕಾರದ ಉಪ ಕಾರ್ಯದರ್ಶಿ ಎಂ.ಜ್ಯೋತಿ ಪ್ರಕಾಶ್ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.