ಬೆಂಗಳೂರು:- ಆಧುನಿಕ ಜೀವನದಲ್ಲಿ ಮನುಷ್ಯರು ಅನೇಕ ಖಾಯಿಲೆಗಳಿಂದ ಬಳಲುತ್ತಿದ್ದಾರೆ. ದೈಹಿಕ ಖಾಯಿಲೆಯಿರಲಿ, ಮಾನಸಿಕ ಖಾಯಿಲೆ ಇರಲಿ ಹಲವು ಸಮಸ್ಯೆಗಳಿಗೆ ಇದೊಂದೇ ಔಷಧ ಎನ್ನುತ್ತಾರೆ ಡಾ ಸಿ.ಎನ್ ಮಂಜುನಾಥ್. ಅವರು ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಮನುಷ್ಯನ ಆರೋಗ್ಯ ಸಮಸ್ಯೆಗಳು ಮತ್ತು ಪರಿಹಾರದ ಬಗ್ಗೆ ಸೊಗಸಾದ ಸಲಹೆಯೊಂದನ್ನು ನೀಡಿದ್ದರು.
ಇದು ಬಹಳ ಹಳೆಯ ಸಂವಾದವಾದರೂ ಅವರು ಅಂದು ಹೇಳಿದ ಮಾತು ಎಂದೆಂದಿಗೂ ಪ್ರಸ್ತುತವೆನಿಸುತ್ತದೆ. ಮನುಷ್ಯರಿಗೆ ಖಾಯಿಲೆ ಬಂದಾಗಲೇ ಆರೋಗ್ಯದ ಮಹತ್ವ ತಿಳಿಯುವುದು. ಹಿಂದೆ ಮಕ್ಕಳು ತಮ್ಮ ವಯಸ್ಸಾದ ತಂದೆ-ತಾಯಿಯನ್ನು ಹೃದಯ ಸಂಬಂಧೀ ಸೇರಿದಂತೆ ಗಂಭೀರ ಖಾಯಿಲೆಗಳ ಚಿಕಿತ್ಸೆಗೆ ಕರೆದುಕೊಂಡು ಬರುತ್ತಿದ್ದರು. ಆದರೆ ಈಗ ತಂದೆ-ತಾಯಿಯೇ ತಮ್ಮ ಮಕ್ಕಳನ್ನು ಚಿಕಿತ್ಸೆಗೆ ಕರೆದುಕೊಂಡು ಬರುತ್ತಿದ್ದಾರೆ.
ನಮಗೆ ಬರುವ ಖಾಯಿಲೆಗಳಿಗೆ ತೆಗೆದುಕೊಳ್ಳುವ ಔಷಧಿಯಿಂದ ಖುಷಿ ಸಿಕ್ಕುವುದಿಲ್ಲ. ಬದಲಾಗಿ ಸಂತೋಷವೇ ನಮ್ಮ ಜೀವನದ ದೊಡ್ಡ ಔಷಧಿಯಾಗಬಹುದು. ಈಗಿನ ಯುವ ಪೀಳಿಗೆಗೆ ಯಾವುದರಲ್ಲೂ ಸಂತೋಷವಿರುವುದಿಲ್ಲ, ತೃಪ್ತಿ ಇಲ್ಲ. ಬೇಗನೇ ಮೇಲೆ ಬರಬೇಕು ಎನ್ನುವ ಧಾವಂತದಲ್ಲಿ ಸಂತೋಷವನ್ನು ಮರೆಯುತ್ತೇವೆ. ಇದರಿಂದಲೇ ಖಾಯಿಲೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಂತೋಷವೇ ಜೀವನದ ಅತೀ ದೊಡ್ಡ ಔಷಧಿ ಎಂದು ಅವರು ಹೇಳಿದ್ದರು.
Leave feedback about this