ದಕ್ಷಿಣ ಕನ್ನಡ

ಆರೋಪ ಸಾಬೀತಾದರೆ ಗಲ್ಲಿಗೇರಲೂ ಸಿದ್ಧ.- ಮಾಜಿ ಶಾಸಕ ಬಾವಾ

ಮಂಗಳೂರು:- ಕನ್ಸ್ಟ್ರಕ್ಷನ್‌ ಸಂಸ್ಥೆಯೊಂದರ ಸಹ ಗುತ್ತಿಗೆದಾರನ ಬಿಲ್‌ ಕೇಳಲು ಹೋದಾಗ ಅಲ್ಲಿನ ಡೆಪ್ಯೂಟಿ ಚೇರ್‌ಮೆನ್‌ ಜೊತೆ ಗೌರವಯುತವಾಗಿ ವರ್ತಿಸಿದ್ದೇನೆ. ಆದರೆ, 26 ಗಂಟೆಯ ನಂತರ ಎನ್ ಎಂಪಿಎ ಕಾರ್ಯದರ್ಶಿ ನನ್ನ ವಿರುದ್ಧ ಸುಳ್ಳು ದೂರು ನೀಡಿದ್ದು ಯಾಕೆ ಎಂದು ಮಾಜಿ ಶಾಸಕ ಮೊಹಿದ್ದೀನ್ ಬಾವಾ ಪ್ರಶ್ನೆ ಮಾಡಿದ್ದಾರೆ.

ಅವರು ಮಾಧ್ಯಮದೊಂದಿಗೆ ಮಾತನಾಡಿ, ಚೇರ್‌ಮೆನ್‌ ಒತ್ತಡದಿಂದ ಸೆಕ್ರೆಟರಿ ಮತ್ತು ಲೀಗಲ್‌ ಅಡ್ವೈಸರ್‌ ನನ್ನ ಮೇಲೆ ಸುಳ್ಳು ಕೇಸ್‌ ಹಾಕಿಸಿದ್ದಾರೆ. ಹಾಗಾಗಿ ಡೆಪ್ಯೂಟಿ ಚೇರ್‌ಮೆನ್‌ ವಿರುದ್ಧ 24 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸುರತ್ಕಲ್‌ ಬಾವಾ ಎಚ್ಚರಿಕೆ ನೀಡಿದ ಅವರು, ತನ್ನ ಮೇಲೆ ಎನ್‌ಎಂಪಿಎ ಅಧಿಕಾರಿಗಳು ಪ್ರಕರಣ ದಾಖಲಿಸಿರುವ ಕುರಿತು ಸ್ಪಷ್ಟನೆ ನೀಡಿದ ಅವರು, ಒಂದು ವೇಳೆ ನಾನು ಅಧಿಕಾರಿಯ ಜೊತೆ ಅನಾಗರಿಕವಾಗಿ ವರ್ತಿಸಿದ್ದರೆ ಅಲ್ಲಿನ ಸಿಸಿಟಿವಿ ಚೆಕ್‌ ಮಾಡಲಿ, ನಾನು ಮೇಡಂ ಜೊತೆ ಕೈ ಮುಗಿದು ಸೌಜನ್ಯಯುತವಾಗಿ ಬೀಳ್ಕೊಟ್ಟು ಬಂದಿದ್ದೇನೆ. ಆವರು ನನ್ನ ಅಕ್ಕನ ಸಮಾನ. ಒಂದು ವೇಳೆ ಆರೋಪ ಸಾಬೀತಾದರೆ ಗಲ್ಲಿಗೇರಲೂ ಸಿದ್ಧನಾದ್ದೇನೆ ಎಂದು ಬಾವಾ ಆಕ್ರೋಶ ಹೊರ ಹಾಕಿದರು.

ಜೂ.6ರಂದು ನಾನು ನಿಖಿತ ಕನ್ಸಟ್ರಕ್ಷನ್ ಸಹ ಕಂಟ್ರಾಕ್ಟರ್‌ 2,60,00,000 ಬಿಲ್‌ನಲ್ಲಿ ಬಾಕಿ ಇರಿಸಿದ್ದ 1,50,00,000 ಹಣ ಬಂದಿಲ್ಲ ಎಂದು ಹೇಳಿದ್ದರು. ಅದಕ್ಕಾಗಿ ನಾನು ಅಂದು ಬಂದರಿಗೆ ಹೋಗಿ ಚೀಫ್ ಇಂಜಿನಿಯರ್ ಕಛೇರಿಗೆ ಹೋದಾಗ ಅಧಿಕಾರಿ ನನ್ನ ಜೊತೆ ಮಾತನಾಡಿ, ರೂ.5,00,000 ಮಾತ್ರ ತಡೆ ಹಿಡಿದು ಬಾಕಿ ಮೊತ್ತವನ್ನು ಪಾವತಿಸಲು ಆನುಮೋದನೆ ನೀಡುತ್ತೇನೆ, ಫೈನಾನ್ಸ್‌ನಿಂದ ನಿಮ್ಮ ಅಕೌಂಟಿಗೆ ದುಡ್ಡು ಬರುತ್ತದೆ ಎಂಬ ಮಾತನ್ನು ಹೇಳಿದ್ದರು. ಆದರೆ, ದುಡ್ಡು ಇನ್ನೂ ಬಂದಿಲ್ಲವೆಂದು ಚೀಫ್ ಇಂಜಿನಿಯರ್‌ಗೆ ನನ್ನಲ್ಲಿ ಹೇಳಿ ಡೆಪ್ಯೂಟಿ ಚೇರ್‌ಮೆನ್‌ರವನ್ನು ಕಾಣಬೇಕೆಂದು ತಿಳಿಸಿದರು.

ನಾನು ಜೂ.9ರಂದು ಪುನಃ ಸಹ ಕಂಟ್ರಾಕ್ಟರೊಂದಿಗೆ ಡೆಪ್ಯೂಟಿ ಚೇರ್ ಮೆನ್ ಅವರನ್ನು ಕಾಣಲು ಹೋದಾಗ ಅವರು ಬೋರ್ಡ್ ಮೀಟಿಂಗ್‌ನಲ್ಲಿ ಇದ್ದ ಕಾರಣ ಕಾಯಬೇಕೆಂದಾಗ ಮೀಟಿಂಗ್ ಆಗಿ ಮತ್ತೆ 4 ಗಂಟೆಗೆ ಅವರ ಕಚೇರಿಗೆ 4:00 ಗಂಟೆಗೆ ತೆರಳಿದೆನು. ಆಗ ಅವರ ಪಿ.ಎ, ರಘುರಾಮ ಎಂಬವರು ಮೇಡಂ ಬೇರೆ ಕೆಲಸದಲ್ಲಿ ಇರುವುದಾಗಿಯೂ, ನನ್ನನ್ನು ಕಾಯಬೇಕಾಗಿ ಎಂದ್ದಾಗ ನಾನು ಹಾಗೆಯೇ ಕಾದಿದ್ದೆ. ಮೇಡಂ ಸಂಜೆ 8 ಗಂಟೆಗೆ ಅವರ ಕಛೇರಿಯಿಂದ ಹೊರಗೆ ಬಂದರು ಎಂದು ಬಾವಾ ಹೇಳಿದರು.

ಪಿ.ಎ. ರೂಮಿನಲ್ಲಿ ನಾನು ಅವರಲ್ಲಿ ಸೌಜನ್ಯದಿಂದಲೇ ಮಾತಾಡಿ, ಬಿಲ್ಲಿನಲ್ಲಿ ಕಡಿತ ಮಾಡುವುದು ಬೇಡ, ಚೀಫ್ ಇಂಜಿನಿಯರ್ ರೂ. 5.00 ಲಕ್ಷ ಅಪ್ರೊವ್ ಕೊಟ್ಟಿದ್ದಾರೆ. ಆದ್ದರಿಂದ ರೂ.5.00 ಲಕ್ಷವನ್ನು ತಡೆ ಹಿಡಿದು ಬಾಕಿ ಮೊತ್ತವನ್ನು ರಿಲೀಸ್ ಮಾಡಿ. ಮತ್ತು ಎಲ್.ಡಿ. ಇದ್ದಲ್ಲಿ, ಇ.ಎಂ.ಡಿ. ಮೊತ್ತ ಮತ್ತು ಉಳಿಕೆ ಹಣ, ಮತ್ತು ಬಾಕಿಯಾಗಿರುವ ಬಿಲ್ಲಿನ ಮೊತ್ತದಿಂದ ಕಡಿತ ಮಾಡಿ ಎಂದು ವಿನಂತಿಸಿರುತ್ತೇನೆ. ಅಲ್ಲದೆ, ಮೇಡಂ ಕಛೇರಿಯನ್ನು ಬಿಡುವಾಗ ಅವರ ವಾಹನದ ಹತ್ತಿರ ಹೋಗಿ ನಾನು ಗೌರವದಿಂದ ಬೀಳ್ಕೊಟ್ಟಿದ್ದೆ. ಆದರೆ, 26 ಗಂಟೆಗಳ ನಂತರ ಬಂದರು ಕಾರ್ಯದರ್ಶಿ‌ ರಾತ್ರಿ ಹೋಗಿ ನನ್ನ ವಿರುದ್ಧ ಕೇಸನ್ನು ದಾಖಲಿದ್ದು ಯಾಕೆ ಎಂದು ಬಾವಾ ಪ್ರಶ್ನಿಸಿದರು.

ನಾನು ಕಾರನ್ನು ತಡೆ ಹಿಡಿದಿದ್ದೇನೆ, ಅನಾಗರಿಕನಂತೆ ವರ್ತಿಸಿ ಕೆಲಸಕ್ಕೆ ಅಡ್ಡಿಪಡಿಸಿರುತ್ತೇನೆ ಎಂದು ಚೇರ್ಮೆನ್ ಒತ್ತಡದಿಂದ ಸೆಕ್ರೆಟರಿ ಮತ್ತು ಲೀಗಲ್ ಅಡೈಸರ್ ಹೋಗಿ ನನ್ನ ಮೇಲೆ ಸುಳ್ಳು ಕೇಸ್‌ ಹಾಕಿರುವುದರಿಂದ ಮನಸ್ಸಿಗೆ ನೋವಾಗಿದೆ. ನಾನು ನವಮಂಗಳೂರು ಪುನರ್ವಸತಿಗನಾಗಿ ಆ ಭಾಗದಲ್ಲಿ ಶಾಸಕನಾಗಿ ಮತ್ತು ಈಗ ಮಾಜಿ ಶಾಸಕನಾಗಿ ನಾಗರಿಕರಿಗೆ ಆದಂತಹ ತೊಂದರೆಗೆ ಸಹಾಯ ಮಾಡಲು ಹೋಗಿದ್ದರಲ್ಲಿ ತಪ್ಪೇನು? ನನ್ನ ಮೇಲೆ ಆಗಲೇ ಯಾಕೆ ದೂರು ಕೊಡಲಿಲ್ಲ? ನಾನು ಏನಾದರೂ ಅನಾಗರಿಕನಂತೆ ವರ್ತಿಸಿದ್ದರೆ, ಅಸಂವಿಧಾನಿಕ ಪದ ಬಳಸಿದ್ದರೆ ಕಾನೂನು ಪ್ರಕಾರ ಶಿಕ್ಷೆ ಪಡೆಯಲು ಸಿದ್ಧ. ಹೀಗಾಗಿ ನಮಗಾದ ಅನ್ಯಾಯದ ಬಗ್ಗೆ ಪೊಲೀಸ್‌ ಕಮೀಷನರ್‌ಗೆ ದೂರು ನೀಡುತ್ತೇನೆ. ಚೀಫ್ ಇಂಜಿನಿಯರ್ ಮತ್ತು ಡೆಪ್ಯೂಟಿ ಇಂಜಿನಿಯರ್ ಹೇಳಿಕೆಯನ್ನು ಪಡೆದು ಕೂಲಂಕುಷ ಸರಿಯಾದ ತನಿಖೆ ನಡೆಸಿ, ಸಿ.ಸಿ. ಟಿವಿಯನ್ನು ಪರಿಶೀಲಿಸಲಿ, ಈ ಬಗ್ಗೆ ಹೋರಾಟಕ್ಕೂ ಸಿದ್ಧ ಎಂದು ಬಾವಾ ಸವಾಲು ಹಾಕಿದ್ದಾರೆ.