ಬೆಂಗಳೂರು

ಇಂದು ಯಶ್ ತಾಯಿಯ ಪಿಎ ಪ್ರೊಡಕ್ಷನ್ ಫಸ್ಟ್ ಲುಕ್ ಬಿಡುಗಡೆ

ಬೆಂಗಳೂರು:- ಕೆಜಿಎಫ್ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಗುರಿ ಇಟ್ಟುಕೊಂಡಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಆರಂಭಕ್ಕೂ ಮುನ್ನವೇ ಯಶ್ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ‘ಕೆಜಿಎಫ್ 2’ ಬಳಿಕ ತಮ್ಮದೇ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ‘ಟಾಕ್ಸಿಕ್’ ಹಾಗೂ ಬಹು ಚರ್ಚೆಯಲ್ಲಿರುವ ‘ರಾಮಾಯಣ’ ಸಿನಿಮಾವನ್ನು ಸಹ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಒಂದು ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿರುವ ಯಶ್ ಕುಟುಂಬದಿಂದ ಮತ್ತೊಂದು ಸಂಸ್ಥೆ ಹುಟ್ಟಿಕೊಂಡಿದೆ. ಅದುವೇ PA ಪ್ರೊಡಕ್ಷನ್.

ಯಶ್ ಅಮ್ಮ ಪುಷ್ಪ ಹಾಗೂ ಅವರ ಪತಿ ಅರುಣ್ ಕುಮಾರ್ ಹೆಸರಿನಲ್ಲಿ ಹುಟ್ಟಿಕೊಂಡಿದೆ. ಈ ಮೂಲಕ ರಾಕಿ ಭಾಯಿಯ ಅಮ್ಮ ಪುಷ್ಪಾ ಅಧಿಕೃತವಾಗಿ ಸ್ಯಾಂಡಲ್‌ವುಡ್‌ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಮೊದಲ ಸಿನಿಮಾದ ಹೀರೊ ಯಾರು ಅನ್ನೋದನ್ನು ಅನೌನ್ಸ್ ಮಾಡಲಾಗಿದೆ. ಹಾಗೇ ಫಸ್ಟ್ ಲುಕ್‌ಗೆ ಮುಹೂರ್ತ ಕೂಡ ಫಿಕ್ಸ್ ಆಗಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಪವರ್‌ಫುಲ್ ನಿರ್ಮಾಣ ಸಂಸ್ಥೆ ಹುಟ್ಟಿಕೊಂಡಂತೆ ಆಗಿದೆ. ರಾಕಿ ಅಮ್ಮ ಸ್ಯಾಂಡಲ್‌ವುಡ್‌ಗೆ ಅಧಿಕೃತ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಹುದೆಂಬ ನಿರೀಕ್ಷೆಯಿತ್ತು. ಆದರೆ, ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. PA ಪ್ರೊಡಕ್ಷನ್ ಮೂಲಕ ಚೊಚ್ಚಲ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.

ಇಂದು (ಏಪ್ರಿಲ್ 30) ಇದೆಲ್ಲದಕ್ಕೂ ತೆರೆ ಬೀಳಲಿದೆ. PA ಪ್ರೊಡಕ್ಷನ್ಸ್ ತಮ್ಮ ಚಿತ್ರದ ಮೊದಲ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡುತ್ತಿದೆ. ಇದರಲ್ಲಿ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಬಹುದು. PA ಪ್ರೊಡಕ್ಷನ್ಸ್ ಹುಟ್ಟಿಕೊಂಡಿದ್ದಕ್ಕೆ ಬಲವಾದ ಕಾರಣವಿದೆ. ಈ ಸಂಸ್ಥೆಯ ಮೂಲಕ ಕನ್ನಡದಲ್ಲಿ ಹೊಸ ಹಾಗೂ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಉದ್ದೇಶವಿದೆ. ಈ ಕಾರಣಕ್ಕಾಗಿಯೇ ಯಶ್ ತಮ್ಮ ತಾಯಿ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ಪುನೀತ್ ರಾಜ್‌ಕುಮಾರ್ ಕೂಡ ತಮ್ಮ ತಾಯಿಯ ಹೆಸರಿನಲ್ಲಿ ಇದೇ ಉದ್ದೇಶಕ್ಕೆ ಪಿಆರ್‌ಕೆ ಸಂಸ್ಥೆಯನ್ನು ಹುಟ್ಟಾಕಿದ್ದರು. ಈಗ ಆ ನಿಟ್ಟಿನಲ್ಲಿ PA ಪ್ರೊಡಕ್ಷನ್ಸ್ ಕೂಡ ಸ್ಯಾಂಡಲ್‌ವುಡ್‌ನಲ್ಲಿ ಕೆಲಸ ಮಾಡುತ್ತಿದೆ.