ಇರಾನ್:- ಇಂದು ದಕ್ಷಿಣ ಇರಾನ್ನಲ್ಲಿ ಬೋಗಿಯೊಂದು ಉರುಳಿ ಬಿದ್ದ ಪರಿಣಾಮವಾಗಿ ಕನಿಷ್ಠ 21 ಜನರು ಸಾವನ್ನಪ್ಪಿದ್ದು, ಸುಮಾರು 30 ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಅಪಘಾತಕ್ಕೆ ಕಾರಣ ಸ್ಪಷ್ಟವಾಗಿಲ್ಲ, ರಾಜಧಾನಿ ಟೆಹ್ರಾನ್ನಿಂದ ಸುಮಾರು 1,000 ಕಿಮೀ (600 ಮೈಲುಗಳು) ದೂರದಲ್ಲಿರುವ ಕವರ್ ಬಳಿ ಈ ಅಪಘಾತ ಸಂಭವಿಸಿದೆ. 21 ಸಾವುಗಳು ದಾಖಲಾಗಿವೆ ಎಂದು ಕವರ್ ಆಸ್ಪತ್ರೆಯ ನಿರ್ದೇಶಕ ಮೊಹ್ಸೆನ್ ಅಫ್ರಾಸಿಯಾಬಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. 30 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದರು.
ಇರಾನ್ ರಸ್ತೆಗಳ ಕಾಮಗಾರಿ ಕಳಪೆಯಿಂದ ಕೂಡಿದ್ದು, ಮಾರ್ಚ್ವರೆಗಿನ 12 ತಿಂಗಳಲ್ಲಿ ಸಂಚಾರ ಅಪಘಾತಗಳಿಂದ ಸುಮಾರು 20,000 ಸಾವುಗಳು ಸಂಭವಿಸಿವೆ ಎಂದು ಅಧಿಕೃತ ಸುದ್ದಿ ಸಂಸ್ಥೆ ತಿಳಿಸಿದೆ.
Leave feedback about this