ಟೆಲ್ ಅವಿವ್:- YES…ದಿನದಿಂದ ದಿನಕ್ಕೆ ಇರಾನ್ & ಇಸ್ರೇಲ್ ನಡುವೆ ಶತ್ರುತ್ವ ದೊಡ್ಡದಾಗುತ್ತಾ ಹೋಗುತ್ತಿದೆ. ಹೀಗೆ, ಇರಾನ್ & ಇಸ್ರೇಲ್ ಯುದ್ಧ ಜೋರಾಗುತ್ತಿರುವ ಸಮಯದಲ್ಲೇ ಬೆಳ್ಳಂಬೆಳಗ್ಗೆ ಇರಾನ್ ನೆಲದಲ್ಲಿ ಘೋರ ಭೂಕಂಪನ ಸಂಭವಿಸಿದೆ. ಇದರ ಜೊತೆಗೆ ಇರಾನ್ ಮಿಲಿಟರಿ ಅಪ್ಡೇಟ್ ಕೊಡುವ ಪೇಜ್ ಒಂದು ಅತ್ತ ಇಸ್ರೇಲ್ ದೇಶದ ಟೆಲ್ ಅವಿವ್ ನಗರದ ಜನರಿಗೆ ತಕ್ಷಣ ಓಡಿ ಹೋಗಿ ಅಂತಾ ಮೆಸೇಜ್ ಕೊಟ್ಟಿದೆ. ಇದೇ ಸಂದೇಶ ಈಗ ಇಡೀ ಜಗತ್ತಿನಾದ್ಯಂತ ತಲ್ಲಣದ ಅಲೆಯನ್ನೇ ಎಬ್ಬಿಸಿದೆ.
FACT…ಇರಾನ್ ಇದೀಗ ಇಸ್ರೇಲ್ ವಿರುದ್ಧ ಘೋರವಾಗಿ ದಾಳಿ ಮಾಡುತ್ತಿದ್ದು, ಈಗಾಗಲೇ ಹಲವಾರು ನಗರದಲ್ಲಿ ನರಕ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತ ಕೂಡ ಎದುರಾಗಿದೆ, ಅದು ಏನೆಂದರೆ ಇರಾನ್ ಸೇನೆಯಿಂದ ದಿಢೀರ್ ಪರಮಾಣು ಪರೀಕ್ಷೆ ನಡೆದಿರುವ ಕುರಿತು ಸಾಕ್ಷ್ಯ ಸಿಕ್ಕಿದೆ. ಆ ಮೂಲಕ ಜಗತ್ತಿನ ಮೂಲೆ ಮೂಲೆಯಲ್ಲೂ ಇದೀಗ ವಿಕಿರಣ ಹರಡುವ ಆತಂಕ ಮನುಷ್ಯರಿಗೆ ಶುರು ಆಗಿದೆ.
ಮಧ್ಯಪ್ರಾಚ್ಯ ಒಡೆದ ಮನೆಯಂತೆ ಆಗಿದ್ದು, ಭವಿಷ್ಯವೇ ಮಂಕಾಗಿ ಹೋಗುತ್ತಿದೆ ಈ ಭಾಗದಲ್ಲಿ ಇದೀಗ ಇರಾನ್ ಪರಮಾಣು ಬಾಂಬ್ ಸಿದ್ಧಪಡಿಸ್ತಿದೆ ಎಂದು ಆರೋಪ ಮಾಡಿ ಇಸ್ರೇಲ್ ಭೀಕರವಾಗಿ ATTACK ಶುರು ಮಾಡಿತ್ತು. ಹೀಗಿದ್ದಾಗಲೇ, ಇರಾನ್ ಕೂಡ ಇಸ್ರೇಲ್ ಸೇನೆಗೆ ಆಘಾತ ನೀಡುತ್ತಿದ್ದು. ಈ ರೀತಿ ಇಬ್ಬರೂ ಒಬ್ಬರ ಮೇಲೆ ಮತ್ತೊಬ್ಬರು ಭಾರಿ ದೊಡ್ಡ ಮಟ್ಟದಲ್ಲಿ ಅಸ್ತ್ರಗಳನ್ನ ಬಳಕೆ ಮಾಡಿ ಬಡಿದಾಡುತ್ತಿದ್ದಾರೆ. ಇದೇ ವೇಳೆ ಇಸ್ರೇಲ್ ಪ್ರಧಾನಿಗೆ ಕೂಡ ಸಮಸ್ಯೆ ಎದುರಾಯ್ತಾ? ಹಾಗಾದ್ರೆ ಇಸ್ರೇಲ್ ಪ್ರಧಾನಿಯನ್ನೇ ನೇರವಾಗಿ ಇರಾನ್ ಈಗ ಟಾರ್ಗೆಟ್ ಮಾಡುತ್ತಿದೆಯಾ?
ಜಗತ್ತಿನಲ್ಲಿ ಇದೀಗ ಸಾಲು ಸಾಲು ಯುದ್ಧಗಳು ಭಯದ ವಾತಾವರಣ ಸೃಷ್ಟಿ ಮಾಡಿ ಭವಿಷ್ಯ ಮಂಕಾಗಿಸಿವೆ. ರಷ್ಯಾ & ಉಕ್ರೇನ್ ಯುದ್ಧದ ಭಯದ ನಡುವೆ ಈಗ ಇರಾನ್ & ಇಸ್ರೇಲ್ ಕೂಡ ಜೋರಾಗಿ ಬಡಿದಾಡ್ತಿವೆ. ಇರಾನ್ & ಇಸ್ರೇಲ್ ನಡುವೆ ಘೋರ ಕದನ ಶುರುವಾಗಿ ಒಂದು ವಾರವೇ ಕಳೆದು ಹೋಗಿದೆ. ಇಬ್ಬರ ನಡುವಿನ ಈ ಘೋರ ಕಾಳಗ ನೋಡಿ ಪ್ರಪಂಚದ ಮೂಲೆ ಮೂಲೆಯಲ್ಲೂ ಭಯದ ವಾತಾವರಣ ನಿರ್ಮಾಣವಾಗಿದೆ.
ಪರಮಾಣು ಯುದ್ಧ ನಡೆದರೆ ಪರಿಸ್ಥಿತಿ ಏನು ಅನ್ನೋ ಚರ್ಚೆ ಕೂಡ ನಡೆಯುತ್ತಿದೆ. ವಿಶ್ವಸಂಸ್ಥೆ ಕೂಡ ಈ ಬಗ್ಗೆ ಗಮನವಿಟ್ಟು ಕೂತಿದ್ದು, ಇರಾನ್ & ಇಸ್ರೇಲ್ ಯುದ್ಧ ನಿಲ್ಲದೇ ಹೋದರೆ ಮುಂದಿನ ಪರಿಸ್ಥಿತಿಯೇ ಘೋರವಾಗಲಿದೆ ಅಂತಿದ್ದಾರೆ ಘಟಾನುಘಟಿ ದೇಶಗಳ ನಾಯಕರು. ಇಂತಹ ಸಮಯದಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಇರಾನ್ ಕುತಂತ್ರ ಮಾಡುತ್ತಿದೆಯಾ ಎಂಬ ಅನುಮಾನ ಮೂಡಿದ್ದು, ಇದೀಗ ಇರಾನ್ ನೇರವಾಗಿ ಇಸ್ರೇಲ್ ಪ್ರಧಾನಿಯನ್ನೇ ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅಂದರೆ ಇಸ್ರೇಲ್ ಪ್ರಧಾನಿ ಮೇಲೆಯೇ ದಾಳಿಗೆ ಸ್ಕೆಚ್ ಹಾಕಿ ಕುತಂತ್ರ ಮಾಡಿದೆ ಎಂದು ಆರೋಪಿಸಲಾಗಿದೆ.