Uncategorized

ಇಸ್ರೇಲ್ ನೆಲದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಸಿದ ಇರಾನ್

ಇರಾನ್:- ಇಸ್ರೇಲ್ ವಿರುದ್ಧ ಇರಾನ್ ದಾಳಿ ಮಾಡಿದ ನಂತರ ಮಧ್ಯಪ್ರಾಚ್ಯ ಪರಿಸ್ಥಿತಿ ಇನ್ನಷ್ಟು ಸೂಕ್ಷ್ಮವಾಗಿದೆ. ಇಸ್ರೇಲ್ ಹಾಗೂ ಇರಾನ್ ನಡುವೆ ಯುದ್ಧ ಜೋರಾದ ಬಳಿಕ ಪರಮಾಣು ಬಾಂಬ್ ಬಳಕೆ ಬಗ್ಗೆ ಕೂಡ ಭಯ ಇತ್ತು. ಹೀಗಿದ್ದಾಗ ಅತ್ತ ಅಮೆರಿಕ ಕೂಡ ಇಬ್ಬರ ಈ ಯುದ್ಧದಲ್ಲಿ ಮಧ್ಯಪ್ರವೇಶ ಮಾಡಲು ಸಿದ್ಧವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಎಲ್ಲಾ ಲೆಕ್ಕಾಚಾರವನ್ನು ಅಳೆದು ತೂಗಿ ನೊಡುವಾಗಲೇ ಇರಾನ್ ನಡೆಸಿದ ದಾಳಿಯಲ್ಲಿ ಇಸ್ರೇಲ್ ಭಾರಿ ದೊಡ್ಡ ಪ್ರಮಾಣದ ನಷ್ಟವನ್ನ ಅನುಭವಿಸಿದೆ. ಇಸ್ರೇಲ್ ಪುಟಾಣಿ ದೇಶವೇ ಆಗಿದ್ದರೂ ಸಿಕ್ಕಾಪಟ್ಟೆ ಶಕ್ತಿಶಾಲಿ ಆಗಿದ್ದು, ದೊಡ್ಡ ದೊಡ್ಡ ದೇಶಗಳು ಕೂಡ ಇಸ್ರೇಲ್ ಸೇನೆ ಬೆನ್ನಿಗೆ ನಿಲ್ಲುತ್ತಿವೆ. ಹೀಗಾಗಿ ಎಲ್ಲರನ್ನೂ ಎದುರಿಸಿ ನಿಲ್ಲುವ ಶಕ್ತಿ ಪಡೆದುಕೊಂಡಿದೆ ಇಸ್ರೇಲ್ ದೇಶ. ಇಂತಹ ಸಮಯಕ್ಕೆ ಇರಾನ್ ಜೊತೆಗೆ ಕೂಡ ಕಿರಿಕ್ ಶುರುವಾಗಿದ್ದು, ದೊಡ್ಡ ಯುದ್ಧ ಕೂಡ ನಡೆಯುತ್ತಿದೆ. ಅದರಲ್ಲೂ ಇರಾನ್ ಸೇನೆಯ ಏಟಿಗೆ ನಲುಗಿ ಹೋಗಿರುವ ಇಸ್ರೇಲ್ ಭಾರಿ ದೊಡ್ಡ ನಷ್ಟ ಅನುಭವಿಸಿದೆ. ಸಾವು & ನೋವು ಕೂಡ ಸಂಭವಿಸಿದ್ದು, ಈ ಮೂಲಕ ಪ್ರತಿದಾಳಿಗೆ ಕೂಡ ಇಸ್ರೇಲ್ ಸಜ್ಜಾಗಿದೆ ಎನ್ನಲಾಗಿದೆ.

ಇರಾನ್ ಸೇನೆಗೆ ಹೋಲಿಕೆ ಮಾಡಿದರೆ ಇಸ್ರೇಲ್ ತುಂಬಾ ಸ್ಟ್ರಾಂಗ್ ಆಗಿದ್ದು, ಐರನ್ ಡಾಮ್ ಅಂದ್ರೆ ಭಾರಿ ದೊಡ್ಡ ಮಟ್ಟದ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಇದೆ. ಹೀಗಿದ್ದರೂ ಅದನ್ನೆಲ್ಲಾ ಬೇಧಿಸಿ ಇದೀಗ ಇರಾನ್ ದಾಳಿ ನಡೆಸಿದ್ದು, ಇಸ್ರೇಲ್ ನೆಲದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. ಹಾಗೇ ಸಾವು ನೋವಿನ ಬಗ್ಗೆ ಕೂಡ ವರದಿ ಆಗುತ್ತಿದ್ದು, ಇಸ್ರೇಲ್ ಈಗ ಹೈಅಲರ್ಟ್ ಆಗಿದೆ. ಯಾವುದೇ ಕ್ಷಣದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಆತಂಕ ಕೂಡ ಕಾಡುತ್ತಿದ್ದು, ಅಮೆರಿಕ ಯಾವುದೇ ಹಂತದಲ್ಲಿ ಎಂಟ್ರಿ ಕೊಡಬಹುದು.