Uncategorized

ಉಪರಾಷ್ಟ್ರಪತಿ: ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ವಿಪಕ್ಷಗಳ ಕೂಟ ಸಜ್ಜು

ದೆಹಲಿ:- ಜಗದೀಪ್‌ ಧನ್‌ಕರ್‌ ಅವರ ಹಠಾತ್‌ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನ ತುಂಬಲು ಸದ್ಯದಲ್ಲೇ ನಡೆಯಲಿರುವ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ವಿಪಕ್ಷಗಳ ಕೂಟ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯಸಭೆ ಮತ್ತು ಲೋಕಸಭೆಯ ಚುನಾಯಿತ ಮತ್ತು ನಾಮನಿರ್ದೇಶಿತ ಸದಸ್ಯರಿಗಷ್ಟೇ ಈ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕಿದ್ದು, ಒಟ್ಟು 782 ಮತಗಳಿವೆ. ಈ ಪೈಕಿ ಕನಿಷ್ಠ 392 ಮತವನ್ನು ಪಡೆಯುವ ಅಭ್ಯರ್ಥಿ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಲಿದ್ದಾರೆ.

ಸದ್ಯ ಉಭಯ ಸದನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಗೆ 423 ಸಂಸದರ ಬೆಂಬಲವಿದೆ. ಹೀಗಾಗಿ ಗೆಲುವು ಸುಲಭ ಸಾಧ್ಯವೆಂದೇ ಹೇಳಲಾಗುತ್ತಿದೆ. ವಿಪಕ್ಷಗಳ ನೇತೃತ್ವದ ವಿಪಕ್ಷ ಮೈತ್ರಿಕೂಟಕ್ಕೆ 313 ಸದಸ್ಯರ ಬೆಂಬಲವಿದ್ದು, ತಮ್ಮ ಮೈತ್ರಿ ಕೂಟದ ಬೆಂಬಲಿತ ಉಪರಾಷ್ಟ್ರಪತಿ ಆಯ್ಕೆ ಮಾಡಲಾರದಷ್ಟು ಈ ಸಂಖ್ಯೆ ದೂರವಿಲ್ಲ ಎಂಬ ಆಲೋಚನೆಯಲ್ಲಿದೆ ಎನ್ನಲಾಗಿದೆ. ಹೀಗಾಗಿ ವಿಪಕ್ಷ ಮೈತ್ರಿ ಕೂಟ ಆಯ್ಕೆ ಪ್ರಕ್ರಿಯೆ ವೇಳೆ ಮ್ಯಾಜಿಕ್‌ ನಡೆಯುವ ಭರವಸೆ ಹೊಂದಿವೆ. ಅಲ್ಲದೆ ಫ‌ಲಿತಾಂಶ ಲೆಕ್ಕಿಸದೇ, ವಿಪಕ್ಷಗಳ ಒಗ್ಗಟ್ಟು ಪ್ರದರ್ಶಿಸುವ ಇರಾದೆಯೂ ಮೈತ್ರಿ ಕೂಟಕ್ಕಿದೆ ಎನ್ನಲಾಗಿದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video