Uncategorized

ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್ ರಾಜೀನಾಮೆ: ಹಲವು ಪ್ರಶ್ನೆ ಎತ್ತಿದ ಜೈರಾಮ್ ರಮೇಶ್

ದೆಹಲಿ:- ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್ ಅವರ ರಾಜೀನಾಮೆ ಕುರಿತು ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಆರೋಗ್ಯದ ಕಾರಣವಲ್ಲದೆ, ರಾಜೀನಾಮೆ ಹಿಂದೆ ಗಂಭೀರ ಕಾರಣವಿರಬಹುದು ಎಂದು ಅಂದಾಜಿಸಿದ್ದು, ಸೋಮವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4-30 ರ ನಡುವೆ ನಡೆದ ಒಂದು ಘಟನೆಯು ಕಾರಣ ಇರಬಹುದು ಎಂದಿದ್ದಾರೆ.

ಸದನ ಆರಂಭವಾಗಿ, ನ್ಯಾಯಾಧೀಶರೊಬ್ಬರನ್ನು ತೆಗೆದುಹಾಕುವ ಬಗ್ಗೆ ಇಂಪೀಚ್‌ಮೆಂಟ್ ಮೋಷನ್ ಹೊರಡಿಸಿದ ಹಾಗೂ ರಾಜ್ಯಸಭೆಯಲ್ಲಿ ಹಣ ಪತ್ತೆಯಾದ ಕೆಲವೇ ಹೊತ್ತಿನ ಬಳಿಕ ರಾಜೀನಾಮೆ ಕೊಟ್ಟಿದ್ದಾರೆ.
ರಾಜೀನಾಮೆ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಇಂದು ಪೋಸ್ಟ್ ಮಾಡಿರುವ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಧನ್‌ಕರ್‌ ಅವರು ಸೋಮವಾರ ಮಧ್ಯಾಹ್ನ 12.30ಕ್ಕೆ ರಾಜ್ಯಸಭೆಯ ಕಾರ್ಯಕಾರಿ ಸಲಹಾ ಸಮಿತಿ (BAC) ಸಭೆಯ ಅಧ್ಯಕ್ಷತೆ ವಹಿಸಿದ್ದರು ಎಂದು ಹೇಳಿದ್ದಾರೆ.

ಈ ಸಭೆಯಲ್ಲಿ ರಾಜ್ಯಸಭಾ ನಾಯಕ ಜೆ.ಪಿ.ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವು ಸದಸ್ಯರು ಭಾಗವಹಿಸಿದ್ದರು. ಮತ್ತೆ ಸಂಜೆ 4.30ಕ್ಕೆ ಸಭೆ ಸೇರಲು ನಿರ್ಧರಿಸಲಾಗಿತ್ತು. ಆದರೆ, ಆ ಸಭೆಗೆ ನಡ್ಡಾ ಮತ್ತು ರಿಜಿಜು ಬರಲಿಲ್ಲ. ಈ ಬಗ್ಗೆ ಧನ್‌ಕರ್‌ ಅವರಿಗೆ ಮಾಹಿತಿಯೂ ಇರಲಿಲ್ಲ. ಇದರಿಂದ ಬೇಸರಗೊಂಡು ಧನ್‌ಕರ್‌ ಅವರು ಮರುದಿನ ಮಧ್ಯಾಹ್ನ 1 ಗಂಟೆಗೆ ಸಭೆಯನ್ನು ಮರು ನಿಗದಿಪಡಿಸಿದರು ಎಂದು ರಮೇಶ್ ಹೇಳಿದ್ದಾರೆ. ಸೋಮವಾರ ಮಧ್ಯಾಹ್ನ 1 ಗಂಟೆಯಿಂದ 4.30ರ ನಡುವೆ ಏನೋ ಗಂಭೀರವಾದ ಘಟನೆ ನಡೆದಿದೆ. ಅದಕ್ಕಾಗಿಯೇ ನಡ್ಡಾ ಮತ್ತು ರಿಜಿಜು ಉದ್ದೇಶಪೂರ್ವಕವಾಗಿ ಗೈರುಹಾಜರಾಗಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video