ದೆಹಲಿ:- ದೇಶದ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಜೂನ್ 19ರಂದು ಉಪ ಚುನಾವಣೆ 2025 ನಡೆದಿತ್ತು. ಗುಜರಾತ್ ರಾಜ್ಯದಲ್ಲಿ ಎರಡು ಸೀಟು, ಕೇರಳ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಸೀಟು ಸೇರಿ ಒಟ್ಟು 05 ಸೀಟುಗಳಿಗೆ ಮತದಾನ ನಡೆದಿದ್ದು, ಅದರ ಫಲಿತಾಂಶ ಇಂದು ಪ್ರಕಟಗೊಂಡಿದೆ.
ಗುಜರಾತ್‌ನ ಒಂದು ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ಗೆಲುವು ಸಾಧಿಸಿದೆ. ಒಂದರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ.
ಉಪ ಚುನಾವಣೆಯು ಗುಜರಾತ್‌ನ ವಿಸಾವದರ್ ಮತ್ತು ಕಾಡಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿತ್ತು. ಕೇರಳದ ನೀಲಂಬೂರ್, ಪಂಜಾಬ್‌ನ ಲೂಧಿಯಾನ ಪಶ್ಚಿಮ ಮತ್ತು ಪಶ್ಚಿಮ ಬಂಗಾಳದ ಕಾಳಿಗಂಜ್‌ನಲ್ಲಿ ತಲಾ ಒಂದು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆದು ಫಲಿತಾಂಶವನ್ನು ಚುನಾವಣೆ ಆಯೋಗ ಪ್ರಕಟಿಸಿದೆ.
ಚುನಾವಣೆ ಮತ ಫಲಿತಾಂಶಗಳ ಪ್ರಕಾರ, ಗುಜರಾತ್‌ನ ಕಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ರಾಜೇಂದ್ರಕುಮಾರ್ ದಾನೇಶ್ವರ ಚಾವಡಾ ಅವರು ಹಾಗೂ ಅವರ ವಿರುದ್ಧ ಕಾಂಗ್ರೆಸ್‌ನಿಂದ ರಮೇಶ್ವಭಾಯಿ ಚಾವ್ಡಾ ಅವರು ಕಣಕ್ಕಿಳಿದಿದ್ದರು. ಈ ಇಬ್ಬರು ಮಧ್ಯೆ ತೀವ್ರ ಪೈಪೋಟಿ ಉಂಟಾಗಿತ್ತು, ಕೊನೆಗೆ ಬಿಜೆಪಿಯ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.
ವಿಸಾವದರ್ ಕ್ಷೇತ್ರದಲ್ಲಿ ಎಎಪಿಯು ಬಿಜೆಪಿಯನ್ನು ಮಕಾಡೆ ಮಲಗಿಸಿದೆ. ಎಎಪಿಯ ಗೋಪಾಲ್ ಇಟಾಲಿಯಾ ಅವರಿಗೆ ಆಶೀರ್ವಸಿದ ಜನರು ಬಹುಮತ ನೀಡಿದ್ದಾರೆ. ಬಿಜೆಪಿಯ ಕಿರಿತ್ ಪಟೇಲ್ ಅವರನ್ನು ಸೋಲಿಸುವ ಮೂಲಕ ಬಿಜೆಪಿಗೆ ಮುಖ ಭಂಗವಾಗಿದೆ.
ರಾಜ್ಯದ ನಿಲಂಬೂರ್ ವಿಧಾನಸಭಾ ಕ್ಷೇತ್ರ ಉಪ ಚುಣಾವಣೆ ಅಖಾಡದಲ್ಲಿ ಕಾಂಗ್ರೆಸ್ ಪಕ್ಷದ ಆರ್ಯಾದನ ಶೌಕತ್ ಅವರು ಸಿಪಿಐಎಂ ಅಭ್ಯರ್ಥಿ ಎಂ.ಸ್ವರಾಜ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಸಿಪಿಐಎಂ ಗೆ ಸೋಲಿನ ಆಘಾತ ನೀಡಿದ್ದಾರೆ. ಕಾಂಗ್ರೆಸ್ ಗೆಲ್ಲುತ್ತಿದ್ದಂತೆ ಶೌಕತ್ ಅವರ ಬೆಂಬಲಿಗರು ಪಟಾಕಿ ಹಚ್ಚಿ, ಸಿಹಿ ತಿನಿಸಿ ಸಂಭ್ರಮಿಸಿದರು.
ಪಂಜಾಬ್ ರಾಜ್ಯದ ಲೂಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿದ್ದು, ಹೊರಬಿದ್ದ ಫಲಿತಾಂಶದಲ್ಲಿ ಆಮ್ ಆದ್ಮಿ ಪಕ್ಷದ ಸಂಜೀವ್ ಅರೋರಾ ಅವರು ಗೆಲುವು ದಾಖಲಿಸಿದ್ದಾರೆ. ಅವರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ತೊಡೆ ತಟ್ಟಿದ್ದ ಭರತ್ ಭೂಷಣ ಅಶು ಅವರು ಪರಾಭವಗೊಂಡಿದ್ದಾರೆ. ಗುಜರಾತ್ ನಂತರ ಪಂಜಾಬ್‌ನಲ್ಲೂ ಎಎಪಿ ಪಕ್ಷ ತನ್ನ ಹೊಸ ಖಾತೆ ತೆರೆದಿದೆ.
ಈ ರಾಜ್ಯವು ಟಿಎಂಸಿ ಭದ್ರಕೋಟೆ ಎಂಬುದು ಸದರಿ ಉಪಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಟಿಎಂಸಿ ಅಭ್ಯರ್ಥಿ ಅಲಿಫಾ ಅಹ್ಮದ್ ಅವರು ಕಲಿಂಗಜ್ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದಾರೆ. ಪ್ರತಿ ಸ್ಪರ್ಧಿ ಬಿಜೆಪಿ ನಾಯಕ ಆಶಿಶ್ ಘೋಷ್ ಅವರನ್ನು ಮಣಿಸುವಲ್ಲಿ ಟಿಎಂಸಿ ನಾಯಕ ಯಶಸ್ವಿಯಾಗಿದ್ದಾರೆ. ಟಿಎಂಸಿ ಗೆಲ್ಲುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಂಭ್ರಮ ಮುಗಿಲು ಮುಟ್ಟಿತ್ತು.