ಹಾಸನ:- ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ ಇದುವರೆಗೂ ಹೃದಯಘಾತದಿಂದ 15 ಜನರು ಸಾವನ್ನಪ್ಪಿದ್ದಾರೆ. ಇದೀಗ ಮತ್ತೊಂದು ಘಟನೆ ನಡೆದಿದ್ದು, ಹೃದಯಾಘಾತದಿಂದ ಕಾರು ಚಾಲಕ ಮಂಜುನಾಥ್ (51) ಇದೀಗ ಸಾವನ್ನಪ್ಪಿದ್ದಾರೆ.
YES… ಹಾಸನ ನಗರದ ಪೆನ್ಷನ್ ಮೊಹಲ್ಲಾದ ನಿವಾಸಿಯಾಗಿರುವ ಮಂಜುನಾಥ್ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ಖಾಸಗಿ ವೈದ್ಯರ ಕಾರು ಚಾಲಕನಾಗಿದ್ದ ಮಂಜುನಾಥ್ ಬುಧವಾರ ತಡರಾತ್ರಿ ಮನೆಯಲ್ಲಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಮಂಜುನಾಥ್ ಆಸ್ಪತ್ರೆಗೆ ದಾಖಲಾಗಿಸಿ, ಇಸಿಜಿ ಮಾಡಿ ವೈದ್ಯರಿಗೆ ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ್ದಾರೆ. ಆದರೆ, ವೈದ್ಯರು ಬರುವಷ್ಟರಲ್ಲಿ ಮಂಜುನಾಥ್ ಸಾವನಪ್ಪಿದ್ದಾರೆ. ಮಂಜುನಾಥ್ ಮೂಲತಃ ಆಲೂರು ತಾಲೂಕಿನ ಬಾವಿ ಕೊಪ್ಪಲು ಗ್ರಾಮದ ನಿವಾಸಿಯಾಗಿದ್ದರು. ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಹೃದಯಘಾತಕ್ಕೆ 15 ಜನರು ಬಲಿಯಾಗಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.
15 ಜನರು ಹೃದಯಘಾತಕ್ಕೆ ಬಲಿಯಾಗಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದ್ದು, ಈ ವಿಚಾರವಾಗಿ ರಾಜಾರಾಂ ಎನ್ನುವವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದರು.
ಇದೀಗ ತನಿಖೆಯಲ್ಲಿ ಸ್ಫೋಟಕವಾದ ಅಂಶ ಬಯಲಾಗಿದ್ದು, 10 ನುರಿತ ವೈದ್ಯರ ತಂಡ ಯುವಕರ ಹಠಾತ್ ಸಾವಿನ ಬಗ್ಗೆ ತನಿಖೆ ನಡೆಸಿದೆ. 18 ರಿಂದ 45 ವರ್ಷದೊಳಗಡೆ ಹೃದಯಾಘಾತದಿಂದ ಸಾವನ್ನಪ್ಪಿದ 250 ಮಂದಿಯ ಸಾವಿನ ವರದಿಯನ್ನು ತನಿಖೆಗೊಳಪಡಿಸಿ, ನಾಲ್ಕು ತಿಂಗಳುಗಳ ಕಾಲ ಅಧ್ಯಯನ ನಡೆಸಿ ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ ಎನ್ನುವ ವರದಿ ಸಿದ್ಧಪಡಿಸಿದೆ.
ಹೃದಯಾಘಾತಕ್ಕೆ ಯುವಕರು ಬಲಿಯಾಗಲು ಕೋವಿಡ್ ಲಸಿಕೆ ಕಾರಣ ಅಲ್ಲ ಎನ್ನುವುದು ಸಂಶೋಧಕರ ವರದಿಯಲ್ಲಿ ಬಯಲಾಗಿದೆ. ಸದ್ಯ ವೈದ್ಯರು ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗಿದ್ದಾರೆ. ಕೋವಿಡ್ ಲಸಿಕೆ ಕಾರಣ ಅಲ್ಲ, ಬದಲಾಗಿ ವಿವಿಧ ರೀತಿಯ ಕಾರಣಗಳಿವೆ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ. ಮೃತಪಟ್ಟವರ ಪ್ರತಿಯೊಂದು ಮೆಡಿಕಲ್ ರಿಪೋರ್ಟ್ ಅನ್ನು ಸಂಗ್ರಹ ಮಾಡಿ, ಕುಟುಂಬಸ್ಥರ ಹೇಳಿಕೆ ಸಂಗ್ರಹಿಸಿ, ವರದಿ ತಯಾರು ಮಾಡಿದ್ದಾರೆ. ವರದಿಯಲ್ಲಿ ಧೂಮಪಾನ, ಮದ್ಯಪಾನ, ವಿಮಲ್ ಗುಟ್ಕಾ ಸೇವನೆಯಿಂದ ಹಾಗೂ ಇತರೆ ಕಾಯಿಲೆಗಳಿಂದ ಹೃದಯಘಾತದಿಂದ ಸಾವನಪ್ಪಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಒಂದೇ ತಿಂಗಳಲ್ಲಿ 15 ಮಂದಿ ಹೃದಯಾಘಾತಕ್ಕೆ ಸಾವಾಗಿರೋದು ಆತಂಕ ಹೆಚ್ಚಿಸಿತ್ತು. ಹಾಸನ ನಗರದ ಸತ್ಯಮಂಗಲ ಬಡಾವಣೆಯ ಚೇತನ್ (35), ಬೇಲೂರು ಪಟ್ಟಣದ ನಿಶಾದ್ ಅಹ್ಮದ್ (35), ಮೇ 28ರಂದು ಹೊಳೆನರಸೀಪುರ ಪಟ್ಟಣದ ಸಂಧ್ಯಾ (20), ಅರಕಲಗೂಡು ತಾಲೂಕಿನ ಕೊಣನೂರು ಗ್ರಾಮದ ಅಭಿಷೇಕ್ (19), ಮೇ 28ರಂದು ಹಾಸನ ತಾಲ್ಲೂಕಿನ ಕೆಲವತ್ತಿ ಗ್ರಾಮದ ಕವನ(20), ಜೂ.11ರಂದು ಹೊಳೆನರಸೀಪುರ ಪಟ್ಟಣದ ನಿಶಾಂತ್ (20) ಸಾವನ್ನಪ್ಪಿದ್ದರೆ. ಅಲ್ಲದೆ, ಜೂ 12ರಂದು ಆಲೂರು ತಾಲ್ಲೂಕಿನ ಮಗ್ಗೆ ಗ್ರಾಮದ ಬಳಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಾರಿಗೆ ಇಲಾಖೆ ನೌಕರ ಬಿ.ಆರ್.ನಾಗಪ್ಪ (55), ಹಾಸನ ನಗರಸಭೆ ಮಾಜಿ ಸದಸ್ಯ ನೀಲಕಂಠಪ್ಪ (58), ಜೂ.13ರಂದು ಹಾಸನ ಹೊರವಲಯದ ರಾಜಘಟ್ಟ ಬಳಿ ಕಾರಿನಲ್ಲೇ ದೇವರಾಜ್ (43), ಹಾಸನ ನಗರದ ತೆಲುಗರ ಬೀದಿಯ ಸತೀಶ್ (57), ಜೂ.14ರಂದು ಹಾಸನ ತಾಲ್ಲೂಕಿನ ದೊಡ್ಡಪುರ ಗ್ರಾಮದ ಕಾಂತರಾಜು (51) ಹೃದಯಾಘಾತದಿಂದ ಸಾವನ್ನಪ್ಪಿರುವುದು ದಾಖಲಾಗಿದೆ.