ನ್ಯಾಷನಲ್ ಫಿಲ್ಮ್ ಅವಾರ್ಡ್ ಘೋಷಣೆಯಾಗಿದ್ದು, ಕನ್ನಡ, ತಮಿಳಿ, ತೆಲುಗು, ಹಿಂದಿ ಭಾಷೆಯ ಅತ್ಯುತ್ತುಮ ಸಿನಿಮಾಗಳ ಹಲವು ವಿಭಾಗಗಳಿಗೆ ಈ ಪ್ರಶಸ್ತಿಗಳು ಸಿಕ್ಕಿವೆ. 2023ರಲ್ಲಿ ತೆರೆಕಂಡ ಸಿನಿಮಾಗಳಿಗೆ ಈ ಪ್ರಶಸ್ತಿಗಳು ಲಭಿಸಿವೆ. ಕನ್ನಡದ ಸಿನಿಮಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಿದ್ದು, ಯಾವ ಸಿನಿಮಾಗೆ, ಯಾವ ವಿಭಾಗದ ಪ್ರಶಸ್ತಿಗೆ ಆಯ್ಕೆಯಾಗಿದೆ.
ಕನ್ನಡದ ಕಂದೀಲು ಎಂಬ ಸಿನಿಮಾ ಅತ್ಯುತ್ತಮ ಸಿನಿಮಾದ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಅತ್ಯುತ್ತಮ ತೆಲುಗು ಸಿನಿಮಾ ಆಗಿ ಭಗವಂತ್ ಕೇಸರಿ ಆಯ್ಕೆಯಾಗಿದ್ರೆ, ತಮಿಳಿನ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪಾರ್ಕಿಂಗ್ ಆಯ್ಕೆಯಾಗಿದೆ. ಹಿಂದಿ ವಿಭಾಗದಲ್ಲಿ ಕಥಲ್ ಸಿನಿಮಾ ಆಯ್ಕೆಯಾಗಿದೆ
ಹಾಗೇ ಬೇರೆ ವಿಭಾಗಗಳನ್ನು ನೋಡುವುದಾದರೆ ಹನುಮಾನ್ ಚಿತ್ರದ ಸಾಹಸ ಸಂಯೋಜನೆಗಾಗಿ ನಂದು ಹಾಗೂ ಪೃಥ್ವಿ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದೆ, ಸೌಂಡ್ ಡಿಸೈನ್ ಪ್ರಶಸ್ತಿಯನ್ನ ಅನಿಮಲ್ ಚಿತ್ರದ ಸಚಿನ್ ಹಾಗೂ ಹರಿಹರನ್ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಸಂಗೀತ ನಿರ್ದೇಶನದ ಪ್ರಶಸ್ತಿಯನ್ನ ವಾಥಿ ಚಿತ್ರಕ್ಕಾಗಿ ಜಿ.ವಿ ಪ್ರಕಾಶ್ ಕುಮಾರ್ ಪಡೆದುಕೊಂಡಿದ್ದಾರೆ. ತೆಲುಗಿನ ಬಳಗಂ ಚಿತ್ರದ ಊರು ಪಲ್ಲೆಟೂರು ಹಾಡಿಗೆ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ.
* ಅತ್ಯುತ್ತಮ ಬಾಲ ನಟಿ – ಸುಕೃತಿ (ಗಾಂಧಿ ತಾತ ಚೆಟ್ಟು)
* ಅತ್ಯುತ್ತಮ ಪೋಷಕ ನಟ – ವಿಜಯ್ ರಾಘವನ್ (ಪೂಕಾಲಂ), ಎಂ.ಎಸ್. ಭಾಸ್ಕರ್ (ಪಾರ್ಕಿಂಗ್)
* ಅತ್ಯುತ್ತಮ ನಟ – ಶಾರುಖ್ ಖಾನ್ (ಜವಾನ್)
* ಅತ್ಯುತ್ತಮ ನಟ – ವಿಕ್ರಾಂತ್ ಮೆಸ್ಸಿ (12th ಫೇಲ್)
* ಅತ್ಯುತ್ತಮ ನಟಿ – ರಾಣಿ ಮುಖರ್ಜಿ (Mrs. ಚಟರ್ಜಿ vs ನಾರ್ವೆ)
* ಅತ್ಯುತ್ತಮ ಛಾಯಾಗ್ರಹಣ – ದಿ ಕೇರಳ ಸ್ಟೋರಿ (ಹಿಂದಿ) ಹೀಗೆ ಹಲವು ವಿಭಾಗಗಳಲ್ಲಿ ಹಲವು ಸಿನಿಮಾಗಳು ಪ್ರಶಸ್ತಿಯನ್ನ ಗೆದ್ದಿವೆ.
Leave feedback about this