ಮೈಸೂರು

ಕುಮಾರಸ್ವಾಮಿ ಅವರಿಗೆ ಬರೀ ಸುಳ್ಳು ಆರೋಪ ಮಾಡುವುದಷ್ಟೇ ಗೊತ್ತು. ಸಿಎಂ

ಮೈಸೂರು:- ರಾಜೀನಾಮೆಗೆ ಕುಮಾರಸ್ವಾಮಿ ಅವರು ಒತ್ತಾಯ ಮಾಡಿರುವ ವಿಚಾರಕ್ಕೆ ಚಾಟಿ ಬೀಸಿದ ಸಿಎಂ, ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರದ ಯಾವುದೇ ತಪ್ಪು ಇಲ್ಲ, ಹೀಗಾಗಿ ಯಾವ ಮುಜುಗರವೂ ಇಲ್ಲ ಎಂದು ಸಿಎಂ ತಿರುಗೇಟು ನೀಡಿದ್ದಾರೆ.

ಮಹಾಕುಂಭಮೇಳದಲ್ಲಿ ಹಲವರು ಸತ್ತರು, ಸೇತುವೆ ಬಿದ್ದಾಗ ಆಗ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಿದ್ರಾ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರಿಗೆ ಸಿಎಂ ಮರುಪ್ರಶ್ನೆ ಹಾಕಿದ್ದಾರೆ.

ಬಿಜೆಪಿಗರು ಹಾಗೂ ಕುಮಾರಸ್ವಾಮಿ ಅವರು ಆಗ ರಾಜೀನಾಮೆಯನ್ನು ಕೇಳಬಹುದಿತ್ತಲ್ಲವೇ? ಸುಮ್ಮನೇ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಲ್ತುಳಿತ ಘಟನೆಯಲ್ಲಿ ಸರ್ಕಾರದ್ದೇನು ತಪ್ಪಿಲ್ಲ, ಕುಮಾರಸ್ವಾಮಿ ಅವರಿಗೆ ಬರೀ ಸುಳ್ಳು ಆರೋಪ ಮಾಡುವುದಷ್ಟೇ ಗೊತ್ತು. ಸರ್ಕಾರದಿಂದ ಪೊಲೀಸರ ಮೇಲೆ ಧಮ್ಕಿ ಎಂದು ಹೇಳಿಕೆ ನೀಡಿದ್ದಾರೆ. ಅದೇನು ಇದ್ದಕ್ಕಿದ್ದಂತೆ ಹೆಚ್ಡಿಕೆ ಅವರಿಗೆ ಪೊಲೀಸರ ಮೇಲೆ ಪ್ರೀತಿ ಬಂದಿದೆ? ವಿಧಾನಸೌಧದ ಬಳಿ ಯಾವುದೇ ಅನಾಹುತ ನಡೆದಿಲ್ಲ. ಕಾಲ್ತುಳಿತ ಸಂಭವಿಸಿದ್ದು ಮಧ್ಯಾಹ್ನ 3.50ಕ್ಕೆ. ಪೊಲೀಸರು ನನಗೆ ಮಾಹಿತಿ ನೀಡಿದ್ದು 5.45ಕ್ಕೆ ಬರೆದಿಟ್ಟುಕೊಳ್ಳಿ. ಕರ್ತವ್ಯ ಲೋಪ ಮಾಡಿದವರ ಮೇಲೆ ಕ್ರಮವನ್ನು ಜರುಗಿಸಲಾಗಿದೆ. ಇಂತಹ ಘಟನೆಗಳು ಯಾವುದೇ ಸರ್ಕಾರವಿರಲಿ ಆಗಬಾರದು ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.