ದಾವಣಗೆರೆ:- ಇತ್ತೀಚಿಗೆ ಒಂದಲ್ಲ ಒಂದು ಹೇಳಿಕೆ ನೀಡಿ ಸುದ್ದಿಯಾಗಿರುವ ಶಾಸಕ ಶಿವಗಂಗಾ ಬಸವರಾಜ್ ಸಂಪುಟ ವಿಸ್ತರಣೆಯ ಬಗ್ಗೆ ಮಾತನಾಡಿ, ಬಹಳ ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ, ಅದು ನಡೆಯಬೇಕು ಮತ್ತು ಹೊಸಬರಿಗೆ ಹಾಗೂ ಯುವಕರಿಗೆ ಅವಕಾಶ ಸಿಗಬೇಕು ಎಂದು ಹೇಳಿದ್ದಾರೆ. ಸಚಿವ ಸಂಪುಟದಲ್ಲಿರುವ 8ರಿಂದ 10 ಸಚಿವರಿಗೆ ಮಂತ್ರಿಯಾಗಿ ಕೆಲಸ ಮಾಡುವುದಕ್ಕಿಂತ ತಮ್ಮ ವ್ಯವಹಾರಗಳನ್ನು ನೋಡಿಕೊಂಡು ಹೋಗುವುದು ಹೆಚ್ಚು ಮುಖ್ಯವಾಗಿದೆ, ಅಂಥವರನ್ನು ಸಂಪುಟದಲ್ಲಿ ಮುಂದುವರಿಸುವುದರಲ್ಲಿ ಅರ್ಥವಿಲ್ಲ. ನಿಮ್ಮ ವ್ಯವಹಾರಗಳ ಮೇಲೆ ಗಮನ ಹರಿಸಿ ಎಂದು ಅವರನ್ನು ಸಂಪುಟದಿಂದ ಬಿಡುಗಡೆ ಮಾಡಬೇಕು ಎಂದು ಬಸವರಾಜು ಹೇಳಿದ್ದಾರೆ. ನೀವೂ ಸಚಿವ ಸ್ಥಾನದ ಆಕಾಂಕ್ಷಿಯೇ ಅಂತ ಕೇಳಿದಾಗ, ನಾನೇನೂ ಸನ್ಯಾಸಿ ಅಲ್ಲವಲ್ಲ ಎಂದು ಬಸವರಾಜು ಖಾರವಾಗಿ ನುಡಿದಿದ್ದಾರೆ.
ದಾವಣಗೆರೆ
ಕೆಲ ಸಚಿವರು ತಮ್ಮ ವ್ಯವಹಾರ ನೋಡಿಕೊಂಡು ಹೋಗುವುದೇ ಮುಖ್ಯವಾಗಿದೆ.- ಶಿವಗಂಗಾ
- ಜೂನ್ 12, 2025
- Less than a minute
- 3 ವಾರಗಳು ago
