ತಿರುವನಂತಪುರಂ:- ಕೇರಳ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ ಪೈಪೋಟಿ ಉಂಟಾಗಿದ್ದು, ಎನ್ ಆರ್ ಐ ಉದ್ಯಮಿ ಥಾಂಪಿ ಹೆಸರು ಮತ್ತೆ ಮುನ್ನಲೆಗೆ ಬಂದಿದೆ. ಯುಎಇಯ ಅಜ್ಮಾನ್ ನ ಥಾಂಪಿರವರು ರಾಬರ್ಟ್ ವಾದ್ರಾರವರ ನಿಕಟವರ್ತಿಯಾಗಿ ಗುರುತಿಸಿಕೊಂಡಿದ್ದಾರೆ.
ಥಾಂಪಿ ವಿರುದ್ಧ ಭಾರತೀಯ ತನಿಖಾ ಸಂಸ್ಥೆಗಳು ಹಲವು ಪ್ರಕರಣಗಳನ್ನು ದಾಖಲಿಸಿದ್ದು, ಇತ್ತೀಚಿಗೆ ಜಾರಿ ನಿರ್ದೇಶನಾಲಯದ ಚಾರ್ಜ್‌ಶೀಟ್‌ನಲ್ಲಿ ರಾಬರ್ಟ್ ವಾದ್ರಾ ಅವರೊಂದಿಗೆ ಅವರ ಆಳವಾದ ಸಂಬಂಧಗಳು ಮತ್ತೊಮ್ಮೆ ಉಲ್ಲೇಖಗೊಂಡಿವೆ. ಈ ನಿಟ್ಟಿನಲ್ಲಿ ಥಾಂಪಿ ತಮ್ಮ ಸಮರ್ಥಿತರನ್ನು ಕೆಪಿಸಿಸಿ ಅಧ್ಯಕ್ಷರ ಹುದ್ದೆಗೆ ಒತ್ತಾಯಿಸುತ್ತಿದ್ದಾರೆ ಎಂಬ ವರದಿಗಳು ಪಕ್ಷದೊಳಗೆ ತೀವ್ರ ಚರ್ಚೆಗೆ ಕಾರಣವಾಗಿವೆ.
ಈ ನಡುವೆ ಪ್ರಿಯಾಂಕಾ ಗಾಂಧಿ ಪಾಥನಮ್ತಿಟ್ಟಾದ ಸಂಸದ ಆಂಟೊ ಆಂಟನಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಥಾಂಪಿಯ ಪ್ರಭಾವವನ್ನು ಸೂಚಿಸುತ್ತಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಆದರೆ, ಹಿರಿಯ ನಾಯಕರು, ಅವರಲ್ಲದೆ ಪ್ರಸ್ತುತ ಅಧ್ಯಕ್ಷ ಕೆ.ಸುಧಾಕರನ್ ಅವರನ್ನು ಮುಂದುವರಿಸಲು ಒತ್ತಾಯಿಸುತ್ತಿದ್ದಾರೆ. ಸುಧಾಕರನ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೇರಳದಲ್ಲಿ ಭರ್ಜರಿ ಗೆಲುವು ತಂದಿದ್ದರು.
ಹಿರಿಯ ನಾಯಕ ಕೆ.ಮುರುಳೀಧರನ್ ಆಂಟೋ ಆಂಟನಿಯ ವಿರುದ್ಧ ಟೀಕೆಗಳನ್ನು ಮಾಡಿದ್ದು, ಅವರ ಫೋಟೋ ನೋಡಿದರೂ ಪಕ್ಷದ ಕಾರ್ಯಕರ್ತರು ಗುರುತಿಸಿಬೇಕು ಎಂದು ಟೀಕಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೆಪಿಸಿಸಿ(ಕೇರಳ) ಅಧ್ಯಕ್ಷ ಹುದ್ದೆಗೆ ಸಂಬಂಧಿಸಿದಂತೆ ನಿರ್ಧಾರವು ಕಾಂಗ್ರೆಸ್‌ನ ಒಳರಾಜಕೀಯದ ಗತಿಗೆ ತೀವ್ರ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ತಮ್ಮ ಅನಿಸಿಕೆಗಳನ್ನು ತೊಡಿಕೊಂಡಿದ್ದಾರೆ.