ದಕ್ಷಿಣ ಕನ್ನಡ

ಕೊಲೆ ಪ್ರಕರಣ ಮತ್ತೆ ಸದ್ದು: ಎಸ್ಪಿ ಕಚೇರಿಗೆ ವಕೀಲರ ತಂಡ.!

ಮಂಗಳೂರು:- ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣ ಮತ್ತೆ ಸದ್ದು ಮಾಡಲು ಆರಂಭಿಸಿದೆ. ಕೊಲೆ ಮಾಡಿ ಹೆಣ ಹೂತಿದ್ದ ಸ್ಥಳಗಳನ್ನು ಗುರುತಿಸುವುದಾಗಿ ಇತ್ತೀಚೆಗೆ ವ್ಯಕ್ತಿಯೊಬ್ಬ ಪೊಲೀಸರ ಮುಂದೆ ಹೇಳಿದ್ದ ಎಂಬ ವಿಚಾರಗಳ ಮಧ್ಯೆ ಇದೀಗ ಬೆಂಗಳೂರಿನ ವಕೀಲರ ತಂಡ ಮಂಗಳೂರು ಎಸ್ ಪಿ ಕಚೇರಿಗೆ ಅಗಮಿಸಿದೆ.

ದಕ್ಷಿಣ ಕನ್ನಡ ಎಸ್ಪಿಯನ್ನು ಭೇಟಿಯಾಗಿ ದಾಖಲೆಗಳನ್ನು ನೀಡುವುದಾಗಿ ಇತ್ತೀಚೆಗೆ ವಕೀಲರಿಬ್ಬರು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದರು. ಎಸ್ಪಿ ಭೇಟಿಗಾಗಿ ವಕೀಲ ತಂಡ ಮಂಗಳೂರಿಗೆ ಅಗಮಿಸಿದ್ದರು, ತುರ್ತು ಕೆಲಸ ನಿಮಿತ್ತ ಎಸ್ ಪಿ ಡಾ ಅರುಣ್ ಬೆಂಗಳೂರಿಗೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ನಾಳೆ ಮತ್ತೆ ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.