ಚಾಮರಾಜನಗರ:- ಜಿಲ್ಲೆಯ ಗುಂಡ್ಲುಪೇಟೆಯ ಚೌಡಹಳ್ಳಿಯ ಮಠದ ಪೀಠಾಧಿಪತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ತಡವಾಗಿ ತಿಳಿದು ಬಂದಿದೆ. ಯಾದಗಿರಿ ಜಿಲ್ಲೆ ಶಹಪುರ ಮೂಲದ ನಿಜಲಿಂಗ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರು.
ಪೂರ್ವಾಶ್ರಮದಲ್ಲಿ ಇವರ ಹೆಸರು ಮೊಹಮದ್ ನಿಸಾರ್ ಎಂದು ಇತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಚೌಡಹಳ್ಳಿ ಗ್ರಾಮಸ್ಥರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸ್ವಾಮೀಜಿ ಪೀಠತ್ಯಾಗ ಮಾಡಿ ಮಠದಿಂದ ಹೊರ ನಡೆದಿದ್ದಾರೆ.
ಈ ಬಗ್ಗೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಬಗ್ಗೆ ಪ್ರತಿಕ್ರಿಯಿಸಿದ್ದು, ಮಹಮ್ಮದ್ ನಿಸಾರ್ ಅಲಿಯಾಸ್ ನಿಜಲಿಂಗಸ್ವಾಮೀಜಿ ಅವರಿಗೆ ಎಲ್ಲ ರೀತಿಯ ಸಹಕಾರ ನೀಡುತ್ತೇವೆ. 22 ವರ್ಷದ ಒಬ್ಬ ಯುವಕ ಇಷ್ಟಲಿಂಗ ದೀಕ್ಷೆ ಪಡೆದುಕೊಂಡು ನಿತ್ಯ ಶಿವಯೋಗ ಸಾಧನೆ ಮಾಡ್ಕೊಂಡು, ಕಾಯಕ ದಾಸೋಹ ಮಾಡಿಕೊಂಡು ಸನ್ಯಾಸತ್ವ ವಿರಕ್ತಾಶ್ರಮ ಸ್ವೀಕಾರ ಪಡೆದುಕೊಂಡು ಸ್ವಾಮೀಜಿ ಎಂದರೆ ಸಂತೋಷ ಪಡಬೇಕು. ನಮ್ಮವ ನಮ್ಮವ ಇವ ನಮ್ಮವ ಎನ್ನಬೇಕು ಎಂದಿದ್ದಾರೆ.
ಈ ಬಗ್ಗೆ ಗದನನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಚನಾನಂದ ಶ್ರೀ, ಈ ಸ್ವಾಮಿಗಳು ಮೂಲತಃ ಇಸ್ಲಾಂ ಧರ್ಮದವರು ಅಂತ ಗ್ರಾಮಸ್ಥರಿಗೆ ಗೋತ್ತಾಗಿಲ್ಲ. ಒಂದು ಸಲ ಸನ್ಯಾಸತ್ವ ಸ್ವೀಕಾರ ಮಾಡಿದ್ರೆ ಮತ್ತೆ ಪೂರ್ವಾಶ್ರಮದ ಕಡೆ ಹೋಗಬಾರದು. ಗುರುಮಲ್ಲೇಶಪ್ಪನವರು ಮೈಸೂರು, ಚಾಮರಾಜನಗರ ಭಾಗದಲ್ಲಿ ನೂರಾರು ಮಠಗಳು ಇವೆ. ಈ ಮಠದ ಪೀಠಕ್ಕೆ ಮಠಾಧೀಶರು ಆಗಿದ್ರು. ಪೂರ್ವಾಶ್ರಮದ ಮಾಹಿತಿ ಇಲ್ಲದೇ ಈ ಘಟನೆ ನಡೆದಿದೆ. ನಿಜಲಿಂಗ ಸ್ವಾಮೀಜಿ ಅಂತ ಪೀಠಾಧಿಪತಿ ಆಗಿದ್ದರು. ಈಗ ಗ್ರಾಮಸ್ಥರ ಒತ್ತಾಯ ಮೇರೆಗೆ ಪೀಠ ತೊರೆದಿದ್ದಾರೆ. ದೂರವಾಣಿ ಮೂಲಕ ಮಾತನಾಡಿದ್ದೇನೆ. ಧೈರ್ಯ, ಸ್ಥೈರ್ಯ ತುಂಬಲಾಗಿದೆ ಎಂದರು.
ಆ ಧರ್ಮ ಬಿಟ್ಟು ಬಹಳ ಪಯಣ ಮಾಡಿದ್ದಾರೆ, ಈ ತತ್ವದಲ್ಲಿ ಇರಬೇಕು. ನಿಮಗೆ ಎಲ್ಲ ರೀತಿಯ ಸಹಾಯ ಮಾಡುತ್ತೇವೆ ಅಂತ ಧೈರ್ಯ ನೀಡಿದ್ದೇವೆ. ಸ್ವಾಮೀಜಿಯೊಬ್ಬರ ಆಶ್ರಮದಲ್ಲಿ ಆಶ್ರಯ ನೀಡಲಾಗಿದೆ.ನಾಳೆ, ನಾಡಿದ್ದು, ಬಸವತತ್ವ ಇರುವ ಮಠಾಧೀಶರು ಭೇಟಿ ಮಾಡುತ್ತೇವೆ. ಇಂಥ ಯುವ ಸ್ವಾಮೀಗಳು ಹಿಂದೂತ್ವಕ್ಕೆ ಬರಲಿ. ಪ್ರೀತಿ ಗೌರವ ಇಟ್ಕೊಂಡು ನಮ್ಮ ತತ್ವವನ್ನು ಅವರ ಮೂಲಕ ಪ್ರಚಾರ ಮಾಡಬೇಕು. ಒಬ್ಬ ಸ್ವಾಮೀಜಿಯನ್ನು ಮಠಕ್ಕೆ ಕರೆತರಬೇಕಾದ್ರೆ ಪೂರ್ವಾಶ್ರಮದ ಬಗ್ಗೆ ತಿಳಿದುಕೊಳ್ಳಬೇಕಾಗಿದ್ದು ಭಕ್ತರ ಜವಾಬ್ದಾರಿ ಎಂದು ಹೇಳಿದರು.
ಯಾದಗಿರಿ ಜಿಲ್ಲೆ ಶಹಪುರ ಮೂಲದ ನಿಜಲಿಂಗ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರು. ಪೂರ್ವಾಶ್ರಮದಲ್ಲಿ ಇವರ ಹೆಸರು ಮಹಮದ್ ನಿಸಾರ್ ಎಂದು ಇತ್ತು. ಮಹಮದ್ ನಿಸಾರ್ ಅವರು ವಿಶ್ವಗುರು ಬಸವಣ್ಣನವರ ತತ್ವ ಚಿಂತನೆಗಳಿಂದ ಪ್ರಭಾವಿತರಾಗಿ ಕಳೆದ ವರ್ಷ ಬಸವಕಲ್ಯಾಣದ ಬಸವಪ್ರಭು ಸ್ವಾಮೀಜಿಯಿಂದ ಜಂಗಮ ದೀಕ್ಷೆ ಪಡೆದಿದ್ದರು. ಲಿಂಗದೀಕ್ಷೆ ಪಡೆದ ಬಳಿಕ ಮಹಮದ್ ನಿಸಾರ್ ಅವರಿಗೆ ನಿಜಲಿಂಗ ಸ್ವಾಮೀಜಿ ಅಂತ ಮರುನಾಮಕರಣ ಮಾಡಲಾಗಿತ್ತು. ಆದರೆ, ಇದೀಗ ಚೌಡಹಳ್ಳಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಸ್ವಾಮೀಜಿ ಪೀಠತ್ಯಾಗ ಮಾಡಿ ಮಠದಿಂದ ಹೊರ ನಡೆದಿದ್ದಾರೆ.
Leave feedback about this