ಬೆಂಗಳೂರು ಗ್ರಾಮಾಂತರ:- ಗೃಹಿಣಿಯೊಬ್ಬಳು ತನ್ನ ಪುಟ್ಟ ಕಂದಮ್ಮನ ಎದುರೇ ನೇಣಿಗೆ ಶರಣಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕಸ್ತೂರಿಯಲ್ಲಿ ನಡೆದಿದೆ. ಮೃತ ಗೃಹಿಣಿಯನ್ನು ಶಾಮಲ (26) ಎಂದು ಗುರುತಿಸಲಾಗಿದೆ.
ಶ್ಯಾಮಲ ಮದುವೆಯಾಗಿ 5 ವರ್ಷ ಆಗಿದ್ದು, ಒಂದು ಗಂಡು ಹಾಗೂ ಹೆಣ್ಣು ಮಗು ಇದೆ.
ಕೆಲಸದ ವಿಚಾರ ಹಾಗೂ ಬೇರೆ ಮನೆ ಮಾಡುವ ವಿಚಾರದಲ್ಲಿ ಪದೇ ಪದೇ ಅತ್ತೆ, ಮಾವ ಹಾಗೂ ಗಂಡನೊಂದಿಗೆ ಜಗಳಗಳು ನಡೆದಿದ್ದವು ಎನ್ನಲಾಗಿದೆ. ಇದೇ ರೀತಿ ನಡೆದ ಜಗಳದಲ್ಲಿ ಎರಡನೇ ಮಗುವಿನ ಸಮೇತ ರೂಂಗೆ ಹೋಗಿ ಬಾಗಿಲು ಹಾಕಿಕೊಂಡು ಮಗುವಿನ ಎದುರಲ್ಲೇ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾಳೆ.
ಇತ್ತ ಸೊಸೆ ನೇಣು ಬಿಗಿದುಕೊಂಡಿರುವುದನ್ನು ಕಂಡು ಅತ್ತೆ ಕಿರುಚಾಡಿ ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಶ್ಯಾಮಲ ಮೃತಪಟ್ಟಿದ್ದಾಳೆ. ಘಟನೆಯ ಸಂಬಂಧ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಾಗಿದೆ.
Leave feedback about this